ಇಂದು MI vs CSK ಜಟಾಪಟಿ; ಧೋನಿ- ರೋಹಿತ್ ನಡುವೆ ಯಾರಿಗೆ ಗೆಲುವು?
ಇತ್ತಂಡಗಳು ಈವರೆಗೆ 6 ಪಂದ್ಯವನ್ನು ಎದುರಿಸಿದೆ. ಅದರಲ್ಲಿ ಚೆನ್ನೈ ತಂಡ 5 ಪಂದ್ಯವನ್ನು ಗೆದ್ದು, 1 ಪಂದ್ಯದಲ್ಲಿ ಸೋಲೊಪ್ಪಿಕೊಂಡಿದೆ. ಅಂತೆಯೇ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ 3 ಪಂದ್ಯದಲ್ಲಿ ಜಯಗಳಿಸಿ ಉಳಿದ ಮೂರರಲ್ಲಿ ಸೋಲೊಪ್ಪಿಕೊಂಡಿದೆ. ಹಾಗಾಗಿ ಇಂದಿನ ಪಂದ್ಯ ಮುಂಬೈ ತಂಡಕ್ಕೆ ಬಹುಮುಖ್ಯವಾಗಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ನ 14ನೇ ಅವೃತ್ತಿಯ 27 ಪಂದ್ಯವಾಗಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಾದಾಡುತ್ತಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಪಡೆ ನಡುವೆ ಜಟಾಪಟಿ ನಡೆಯಲಿದೆ. ಸಮಯ 7;30ಕ್ಕೆ ಸರಿಯಾಗಿ ಪಂದ್ಯ ಪ್ರಾರಂಭವಾಗಲಿದೆ.
ಇತ್ತಂಡಗಳು ಈವರೆಗೆ 6 ಪಂದ್ಯವನ್ನು ಎದುರಿಸಿದೆ. ಅದರಲ್ಲಿ ಚೆನ್ನೈ ತಂಡ 5 ಪಂದ್ಯವನ್ನು ಗೆದ್ದು, 1 ಪಂದ್ಯದಲ್ಲಿ ಸೋಲೊಪ್ಪಿಕೊಂಡಿದೆ. ಅಂತೆಯೇ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ 3 ಪಂದ್ಯದಲ್ಲಿ ಜಯಗಳಿಸಿ ಉಳಿದ ಮೂರರಲ್ಲಿ ಸೋಲೊಪ್ಪಿಕೊಂಡಿದೆ. ಹಾಗಾಗಿ ಇಂದಿನ ಪಂದ್ಯ ಮುಂಬೈ ತಂಡಕ್ಕೆ ಬಹುಮುಖ್ಯವಾಗಿದೆ.
ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್!
ಪಾಯಿಂಟ್ ಟೇಬಲ್ ಗಮನಿಸಿದಾಗ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅಂತೆಯೇ ಮುಂಬೈ ತಂಡ 4 ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಆರ್ಸಿಬಿ ತಂಡ ಎರಡು ಮತ್ತು ಮೂರನೇ ಸ್ಥಾನವನ್ನು ಆವರಿಸಿಕೊಂಡಿದೆ.
ಎರಡು ತಂಡಗಳು ಈವರೆಗೆ ಹಲವು 32 ಭಾರಿ ಎದುರುರಾಗಿದೆ. ಅದರಲ್ಲಿ ಮುಂಬೈ ಇಂಡಿಯನ್ಸ್ ತಂಡ 19 ಭಾರಿ ಜಯ ಸಾಧಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ 13 ಭಾರಿ ಜಯ ಸಾಧಿಸಿದೆ.
ಇನ್ನು ಅರುಣ್ ಜೇಟ್ಲಿ ಮೈದಾನದಲ್ಲಿ ಮುಂಬೈ ಹಾಗೂ ಚೆನ್ನೈ ತಂಡ ಒಂದೊಂದು ಪಂದ್ಯವನ್ನು ಎದುರಿಸಿದೆ. ಅದರಲ್ಲಿ ಎರಡು ತಂಡಗಳು ಜಯ ಸಾಧಿಸಿದೆ. ಹಾಗಾಗಿ ಇಂದಿನ ಪಂದ್ಯ ಭಾರೀ ಪೈಪೋಟಿ ಇರಲಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.