IPL

  • associate partner
HOME » NEWS » Ipl » MAYANK AGARWAL UNBELIEVABLE FIELDING EFFORT SAVES FOUR RUNS IN 2ND SUPER OVER ZP

Mayank Agarwal: ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಿಸಿದ ಸೂಪರ್ ಮ್ಯಾನ್ ಮಯಾಂಕ್..!

Mayank Agarwal fielding: ಒತ್ತಡದ ಸನ್ನಿವೇಶದಲ್ಲಿ ಮಯಾಂಕ್ ಅಗರ್ವಾಲ್ ಮಾಡಿದ ಅದ್ಭುತ ಫೀಲ್ಡಿಂಗ್​ಗೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕ್ರಿಕೆಟ್​ ಅಂಗಳದ ಹೊಸ ಸೂಪರ್ ಮ್ಯಾನ್ ಎಂದು ಯುವ ಆಟಗಾರನನ್ನು ಬಣ್ಣಿಸಲಾಗುತ್ತಿದೆ.

news18-kannada
Updated:October 19, 2020, 3:22 PM IST
Mayank Agarwal: ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಿಸಿದ ಸೂಪರ್ ಮ್ಯಾನ್ ಮಯಾಂಕ್..!
Mayank Agarwal fielding
  • Share this:
IPL ಅಂಗಳದಲ್ಲಿ ಭಾನುವಾರ ನಡೆದ ಪಂದ್ಯಗಳು ಹೊಸ ಇತಿಹಾಸ ಬರೆಯಿತು. ಟೂರ್ನಿಯ 35ನೇ ಹಾಗೂ 36ನೇ ಪಂದ್ಯಗಳು ಸೂಪರ್ ಓವರ್ ಹಣಾಹಣಿಗೆ ಸಾಕ್ಷಿಯಾಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿತು. ಅದರಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ 2 ಸೂಪರ್ ಓವರ್ ನಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು. ಈ ಪಂದ್ಯದಲ್ಲಿ ಸಂಚಲನ ಸೃಷ್ಟಿಸಿದ್ದು ಕನ್ನಡಿಗ ಮಯಾಂಕ್ ಅಗರ್ವಾಲ್.

ಮೊದಲ ಸೂಪರ್ ಓವರ್​ನಲ್ಲಿ ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಕೇವಲ 5 ರನ್​ಗಳಿಸಲಷ್ಟೇ ಶಕ್ತವಾಯಿತು. 6 ಎಸೆತಗಳಲ್ಲಿ ಸಾಧಾರಣ ಗುರಿ ಪಡೆದ ಮುಂಬೈ ಇಂಡಿಯನ್ಸ್​ ಕೂಡ 5 ರನ್​ಗಳಿಸುವುದರೊಂದಿಗೆ ಸಮಬಲ ಸಾಧಿಸಿತು. ಮೊಹಮ್ಮದ್ ಶಮಿ ಭರ್ಜರಿ ಬೌಲಿಂಗ್ ಮುಂದೆ ರೋಹಿತ್ - ಡಿಕಾಕ್ ರನ್​ಗಳಿಸಲು ಪರದಾಡಿದರು. ಅಂತಿಮ ಎಸೆತದಲ್ಲಿ 2 ರನ್​ಗಳ ಅವಶ್ಯತೆಯಿದ್ದಾಗ ಕೆಎಲ್ ರಾಹುಲ್ ಡಿಕಾಕ್ ಅವರನ್ನು ಅದ್ಭುತವಾಗಿ ರನೌಟ್ ಮಾಡಿ ಸೂಪರ್ ಓವರ್ ಅನ್ನು ಸಹ ಟೈ ಆಗಿಸಿದ್ದರು.

2ನೇ ಸೂಪರ್ ನಿಯಮದ ಪ್ರಕಾರ, ಮೊದಲ ಸೂಪರ್ ಓವರ್ ಆಡಿದ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವಂತಿಲ್ಲ. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರು. ಕ್ರಿಸ್ ಜೋರ್ಡನ್ ಎಸೆದ ಈ ಸೂಪರ್ ಓವರ್​ನ ಮೊದಲ ಬಾಲ್‌ ವೈಡ್‌, ನಂತರದ ಬಾಲಿನಲ್ಲಿ ಒಂದು ಸಿಂಗಲ್. 2ನೇ ಬಾಲಿನಲ್ಲಿ ಒಂದು ರನ್. ಮೂರನೇ ಎಸೆತವನ್ನು ಕೀರನ್ ಪೊಲಾರ್ಡ್ ಬೌಂಡರಿಗಟ್ಟಿದರು. 4ನೇ ಎಸೆತ ಮತ್ತೆ ವೈಡ್ ಹಾಗೂ ಸಿಂಗಲ್. 5ನೇ ಬಾಲ್ ಡಾಟ್ ಬಾಲ್ ಆಯ್ತು.

ಕೊನೆಯ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಕೀರನ್‌ ಪೋಲಾರ್ಡ್‌ ಸಿಕ್ಸರ್‌ ಅಟ್ಟಲು ಬಲವಾಗಿ ಹೊಡೆದರು. ಚೆಂಡು ಸಿಕ್ಸ್ ಆಗಲಿದೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆ ಬಳಿ ಇದ್ದ ಮಯಾಂಕ್‌ ಜಿಗಿದು ಬಾಲನ್ನು ತಡೆದು ಎಸೆದರು. ಈ ಅದ್ಭುತ ಫೀಲ್ಡಿಂಗ್ ಪರಿಣಾಮ ಪಂಜಾಬ್ ತಂಡ 4ರನ್‌ ಸೇವ್ ಮಾಡಿತು. ಅಲ್ಲದೆ ಮುಂಬೈ 11 ರನ್‌ ಗಳಿಸಲಷ್ಟೇ ಶಕ್ತರಾದರು. ಒಂದು ವೇಳೆ ಕೊನೆಯ ಎಸೆತದಲ್ಲಿ ಸಿಕ್ಸರ್ ಮೂಡಿ ಬಂದಿದ್ರೆ ಪಂಜಾಬ್ ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿತ್ತು. ಆದರೆ ಮಯಾಂಕ್‌ ಅವರ ಅತ್ಯುತ್ತಮ ಫೀಲ್ಡಿಂಗ್‌ ಪಂದ್ಯದ ಗತಿಯನ್ನೇ ಬದಲಿಸಿತು ಎನ್ನಬಹುದು.



12 ರನ್​ಗಳ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ ಬ್ಯಾಟ್ ಬೀಸಿದರು. ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲೇ ಗೇಲ್ ಸಿಕ್ಸರ್ ಸಿಡಿಸಿ, ಗೆಲುವಿನ ಅಂತರವನ್ನು ಕಡಿಮೆಗೊಳಿಸಿದರು. 2ನೇ ಎಸೆತದಲ್ಲಿ ಸಿಂಗಲ್ ಬಂದರೆ, 3ನೇ ಹಾಗೂ 4ನೇ ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಸೂಪರ್ ಜಯ ತಂದುಕೊಟ್ಟರು. ಸತತ ಎರಡು ಫೋರ್ ಹಾಗೂ ಭರ್ಜರಿ ಫೀಲ್ಡಿಂಗ್ ಮೂಲಕ 4 ರನ್​ಗಳನ್ನು ತಡೆದು ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಿನ ಕಿಂಗ್​ ಆಗಿ ಕನ್ನಡಿಗ ಮಯಾಂಕ್ ಮೆರೆದರು.



ಒತ್ತಡದ ಸನ್ನಿವೇಶದಲ್ಲಿ ಮಯಾಂಕ್ ಅಗರ್ವಾಲ್ ಮಾಡಿದ ಅದ್ಭುತ ಫೀಲ್ಡಿಂಗ್​ಗೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕ್ರಿಕೆಟ್​ ಅಂಗಳದ ಹೊಸ ಸೂಪರ್ ಮ್ಯಾನ್ ಎಂದು ಯುವ ಆಟಗಾರನನ್ನು ಬಣ್ಣಿಸಲಾಗುತ್ತಿದೆ. ಅಲ್ಲದೆ ಈ ಫೆಂಟಾಸ್ಟಿಕ್ ಫೀಲ್ಡಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ಯುವ ಕನ್ನಡಿಗನ ಸಾಹಸಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಪರಾಕ್ ಅನ್ನುತ್ತಿದ್ದಾರೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 19, 2020, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories