ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾ ವೈರಸ್ ಪರಿಣಾಮ ಯುನೈಟೆಡ್ ಅರಬ್ ಎಮಿರೇಟ್ಸ್ ಆಶ್ರಯದಲ್ಲಿ ಬಯೋ ಬಬಲ್ನಲ್ಲಿ ನಡೆಯುತ್ತಿದೆ. ಈ ನಡುವೆ 13ನೇ ಆವೃತ್ತಿಯ ಐಪುಎಲ್ನಲ್ಲಿ ಮತ್ತೆ ಫಿಕ್ಸಿಂಗ್ ಸದ್ದು ಮಾಡಿದೆ. ಐಪಿಎಲ್ನಲ್ಲಿ ಕ್ರಿಕೆಟಿಗರೊಬ್ಬರಿಗೆ ಫಿಕ್ಸಿಂಗ್ ಆಮಿಷ ಬಂದಿದೆ. ಯಾವ ತಂಡದ ಆಟಗಾರನಿಗೆ ಆಮಿಷ ಒಡ್ಡಲಾಗಿದೆ ಎಂಬ ಮಾಹಿತಿ ತಿಳಿದಿಲ್ಲ. ಆದರೆ, ಆ ಆಟಗಾರ ಈ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದಿಂದ (ಎಸಿಯು) ತನಿಖೆ ಶುರುವಾಗಿದೆ. ಜತೆಗೆ ಎಸಿಯು ಮತ್ತಷ್ಟು ಅಲರ್ಟ್ ಆಗಿದೆ.
ಎರಡು ದಿನಗಳ ಹಿಂದೆ ಬುಕ್ಕಿಗಳು ದುಬೈಗೆ ಬಂದಿರುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದ ಎಸಿಯು ಮುಖ್ಯಸ್ಥ ಅಜಿತ್ ಸಿಂಗ್, ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
Devdutt Padikkal: 4 ಪಂದ್ಯಗಳಲ್ಲಿ 3 ಅರ್ಧಶತಕ: ಯುವತಾರೆ ಪಡಿಕ್ಕಲ್ರನ್ನು ಹಾಡಿಹೊಗಳಿದ ವಿರಾಟ್ ಕೊಹ್ಲಿ
ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಈ ವಿಚಾರವನ್ನು ಖಚಿತ ಪಡಿಸಿದ್ದು, ನಾವು ಆತನನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಅಥವಾ ಅದರಲ್ಲಿ ತೊಡಗಿರುವ ಆಸಕ್ತ ವ್ಯಕ್ತಿಯನ್ನು ಪತ್ತೆ ಹಚ್ಚಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅಲ್ಲಿ ಅಭಿಮಾನಿಗಳ ರೀತಿಯಲ್ಲಿ ಮೊದಲಿಗೆ ಸಂಪರ್ಕ ಸಾಧಿಸುವ ಬುಕ್ಕಿಗಳು ಬಳಿಕ ಫಿಕ್ಸಿಂಗ್ ಆಮಿಷ ಒಡ್ಡುವ ಅಪಾಯ ಇದ್ದೇ ಇರುತ್ತದೆ ಎಂದು ಎಸಿಯು ಈ ಮೊದಲೇ ತಿಳಿಸಿತ್ತು.
ಐಪಿಎಲ್ನಲ್ಲಿ ಆಡುತ್ತಿರುವ ಎಲ್ಲ ಆಟಗಾರರು ಈಗಾಗಲೆ ಭ್ರಷ್ಟಾಚಾರ ನಿಗ್ರಹ ತರಗತಿಗಳಿಗೆ ಹಾಜರಾಗಿ ಫಿಕ್ಸಿಂಗ್ ಅಪಾಯದ ಬಗ್ಗೆ ಸೂಕ್ತ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.
IPL 2020: ಇಂದು ಐಪಿಎಲ್ನಲ್ಲಿ ಎರಡು ಪಂದ್ಯ; ಯಾರಿಗೆ ಯಾರ ಸವಾಲು? ಬದಲಾವಣೆ ಏನು? ಇಲ್ಲಿದೆ ಮಾಹಿತಿ
"ಹೌದು, ಒಬ್ಬ ಆಟಗಾರನೊಬ್ಬ ಈ ಕುರಿತು ವರದಿ ಮಾಡಿಕೊಂಡಿರುವುದು ನಿಜ ಎಂದು ರಾಜಸ್ಥಾನದ ಮಾಜಿ ಡಿಜಿಪಿಯಾಗಿರುವ ಅಜಿತ್ ಸಿಂಗ್ ಹೇಳಿದ್ದು, ಬುಕ್ಕಿಯ ಪತ್ತೆಗೆ ಬಲೆ ಬೀಸಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದು ಅಜಿತ್ ಸಿಂಗ್ ಹೇಳಿದ್ದಾರೆ. ಭ್ರಷ್ಟಾಚಾರ ತಡೆ ನಿಯಮಾವಳಿಗಳ ಪ್ರಕಾರ, ಬುಕ್ಕಿಯ ಸಂಪರ್ಕಕ್ಕೆ ಒಳಗಾದ ಆಟಗಾರ(ಭಾರತೀಯ ಅಥವಾ ವಿದೇಶಿಗ) ಮತ್ತು ಫ್ರ್ಯಾಂಚೈಸಿಯ ಹೆಸರನ್ನು ಎಸಿಯು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ