ಶಾರ್ಜಾದಲ್ಲಿ ನಡೆದ ಐಪಿಎಲ್ನ 17ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ತನ್ನದಾಗಿಸಿತು. ಕ್ವಿಂಟನ್ ಡಿಕಾಕ್ ಅವರ ಅಮೋಘ ಅರ್ಧಶತಕ ಹಾಗೂ ಅಂತಿಮ ಹಂತದಲ್ಲಿ ಪೊಲಾರ್ಡ್ ಹಾಗೂ ಪಾಂಡ್ಯ ಬ್ರದರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ 208 ರನ್ಗಳ ಕಲೆ ಹಾಕಿತು. ಹೈದರಾಬಾದ್ 174 ರನ್ಗಳನ್ನಷ್ಟೆ ಕಲೆಹಾಕಿ ಸೋಲೊಪ್ಪಿಗೊಂಡ ಪರಿಣಾಮ ರೋಹಿತ್ ಪಡೆ 34 ರನ್ಗಳ ಜಯ ಸಾಧಿಸಿತು. ಮುಂಬೈ ತಂಡದ ಮೊತ್ತ ಇದಕ್ಕಿಂತಲೂ ಅಧಿಕವಾಗುದರಲ್ಲಿತ್ತು. ಆದರೆ, ಇದಕ್ಕೆ ಬ್ರೇಕ್ ಹಾಕಿದ್ದು ಮನೀಶ್ ಪಾಂಡೆ ಹಿಡಿದ ಈ ಒಂದು ಕ್ಯಾಚ್. ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 99 ರನ್ ಚಚ್ಚಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಇಶಾನ್ ಕಿಶನ್ ಅವರು ಇಂದು ಕೂಡ ಬಿರುಸಿನ ಆಟ ಆಡುವ ಎಲ್ಲ ಸೂಚನೆ ನೀಡಿದ್ದರು.
ನಿನ್ನ ಜೊತೆ ಸಿಕ್ಸ್ ಸಿಡಿಸುವ ಸ್ಫರ್ಧೆ ಮಾಡಬೇಕು ಎಂದ ಯುವರಾಜ್ಗೆ ಪಡಿಕ್ಕಲ್ ರಿಪ್ಲೇ ಏನು ಗೊತ್ತೇ?
ಅದರಂತೆ ಕಿಶನ್ ಅವರು 22 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 31 ರನ್ ಚಚ್ಚಿ ಕ್ರೀಸ್ನಲ್ಲಿದ್ದರು. ಈ ಸಂದರ್ಭ ಸಂದೀಪ್ ಶರ್ಮಾ ಬೌಲಿಂಗ್ನಲ್ಲಿ ಕಿಶನ್ ಚೆಂಡನ್ನು ನೇರವಾಗಿ ಸಿಕ್ಸರ್ಗೆ ಅಟ್ಟಲು ಯತ್ನಿಸಿದರು. ಅದರಂತೆ ಚೆಂಡು ವೇಗವಾಗಿ ಬೌಂಡರಿ ಲೈನ್ ಬಳಿ ಹೋಗುತ್ತಿತ್ತು. ಆದರೆ, ಈ ಸಂದರ್ಭ ಸೂಪರ್ ಮ್ಯಾನ್ನಂತೆ ಬಂದ ಮನೀಶ್ ಪಾಂಡೆ ಅಮೋಘವಾಗಿ ಹಾರಿ ಡೈ ಹೊಡೆದು ಅದ್ಭುತ ಕ್ಯಾಚ್ ಹಿಡಿದರು.
What a sensational catch by Manish Pandey! @im_manishpandey The fielding efforts in the @IPL is getting better and better.. Splendid cricket all round.. #Dream11IPL pic.twitter.com/zZauSm8I8h
— Jeevan Mendis (@jeevanmendis) October 4, 2020
What a catch by Manish Pandey💉 pic.twitter.com/pXBsWduSuq
— 🦇 (@115_Adelaide) October 4, 2020
ಸದ್ಯ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಅರ್ಧಶತಕ, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ನಲ್ಲಿ 208 ರನ್ ಬಾರಿಸಿತು.
ಸದ್ಯ ಈ ಟಾರ್ಗೆಟ್ ಬೆನ್ನಟ್ಟಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ