IPL

  • associate partner
HOME » NEWS » Ipl » MAHELA JAYAWARDENE NO PURPLE OR ORANGE CAPS BUT WE GOT THE TROPHY THAT COUNTS ZP

IPL 2020: ನಮ್ಮ ಬಳಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಇಲ್ಲ ನಿಜ, ಆದರೆ...!

ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಯಾವತ್ತೂ ಒನ್ ಮ್ಯಾನ್ ಆರ್ಮಿ ಆಗಿ ಉಳಿದಿಲ್ಲ. ಇದೊಂದು ಒಗ್ಗಟ್ಟಿನ ಹೋರಾಟ. ಇದರಲ್ಲಿ ನಮಗೆ ಪ್ರತಿಫಲ ಸಿಕ್ಕಿದೆ ಎಂದು ಜಯವರ್ಧನೆ ಹೇಳಿದ್ದರು.

news18-kannada
Updated:November 11, 2020, 6:05 PM IST
IPL 2020: ನಮ್ಮ ಬಳಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಇಲ್ಲ ನಿಜ, ಆದರೆ...!
ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಂತು ಮುಂಬೈ ಇಂಡಿಯನ್ಸ್ ತಂಡ ರೋಹಿತ್ ನೇತೃತ್ವದಲ್ಲಿ ದಾಖಲೆಯ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
  • Share this:
ಅದು 2019...ಹೈದರಾಬಾದ್​ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್​ಗಳ ರೋಚಕ ಜಯ ಸಾಧಿಸಿತು. ಈ ಜಯದ ಬಳಿಕ ಡ್ರೆಸಿಂಗ್ ರೂಮ್ ವಿಜಯೋತ್ಸವದ ಸಂದರ್ಭದಲ್ಲಿ ತಂಡ ಕೋಚ್ ಮಹೇಲ ಜಯವರ್ಧನೆ ಆಟಗಾರರನ್ನು ಹುರಿದುಂಬಿಸುವ ಮಾತುಗಳನ್ನಾಡಿದ್ದರು. ಹೌದು ನಮ್ಮ ಬಳಿಕ ಆರೆಂಜ್ ಕ್ಯಾಪ್ ಇಲ್ಲ, ಪರ್ಪಲ್ ಕ್ಯಾಪ್ ಕೂಡ ಇಲ್ಲ. ಆದರೆ ಅಂತಿಮವಾಗಿ ಉಳಿಯುವುದು ಯಾರು ಟ್ರೋಫಿ ಗೆದ್ದಿದ್ದಾರೆ ಎಂಬುದು. ಅದು ನಮ್ಮ ಬಳಿಯಿದೆ ಎಂದು ಮುಂಬೈ ಇಂಡಿಯನ್ಸ್ ಕೋಚ್ ಒತ್ತಿ ಹೇಳಿದ್ದರು.

ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಯಾವತ್ತೂ ಒನ್ ಮ್ಯಾನ್ ಆರ್ಮಿ ಆಗಿ ಉಳಿದಿಲ್ಲ. ಇದೊಂದು ಒಗ್ಗಟ್ಟಿನ ಹೋರಾಟ. ಇದರಲ್ಲಿ ನಮಗೆ ಪ್ರತಿಫಲ ಸಿಕ್ಕಿದೆ ಎಂದು ಜಯವರ್ಧನೆ ಹೇಳಿದ್ದರು. ಇದೀಗ 5ನೇ ಬಾರಿ ಕೂಡ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದರ ಬೆನ್ನಲ್ಲೇ ಮತ್ತೊಮ್ಮೆ ಕೋಚ್ ಮಹೇಲ ಜಯವರ್ಧನೆ ಹುರಿದುಂಬಿಸಿದ ಹಳೆಯ ವಿಡಿಯೋ ವೈರಲ್ ಆಗಿದೆ. ಏಕೆಂದರೆ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ತಂಡದ ಯಾರಿಗೂ ಆರೆಂಜ್ ಕ್ಯಾಪ್ ಸಿಕ್ಕಿಲ್ಲ. ಹಾಗೆಯೇ ಪರ್ಪಲ್ ಕ್ಯಾಪ್​ ಅನ್ನು ಗೆಲ್ಲಲಾಗಲಿಲ್ಲ. ಆದರೆ ಅಂತಿಮವಾಗಿ ಕೌಂಟ್ ಆಗುವ ಚಾಂಪಿಯನ್ ಪಟ್ಟ ಈ ಸಲ ಕೂಡ ರೋಹಿತ್ ಪಡೆಯ ಪಾಲಾಗಿದೆ.ಇದೇ ಮಾತನ್ನು ಈ ಬಾರಿ ಕೂಡ ಮಹೇಲ ಜಯವರ್ಧನೆ ಪುನರುಚ್ಚರಿಸಿದ್ದಾರೆ. ಕಳೆದ ವರ್ಷ ಪ್ರಸ್ತಾಪಿಸಿದಂತೆ ಈ ಬಾರಿ ಕೂಡ ನಮ್ಮ ಬಳಿ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಇಲ್ಲ. ಆದರೆ ಅವೆಲ್ಲಕ್ಕಿಂತಲೂ ಹೆಚ್ಚು ಈ ಟ್ರೋಫಿ ಖುಷಿ ಕೊಡುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಅಂದಹಾಗೆ 5 ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದಾಗ ಯಾವುದೇ ಆಟಗಾರ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದಿರಲಿಲ್ಲ ಎಂಬುದು ವಿಶೇಷ.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್
Published by: zahir
First published: November 11, 2020, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories