• ಹೋಂ
  • »
  • ನ್ಯೂಸ್
  • »
  • IPL
  • »
  • ಸಾಂಪ್ರದಾಯಿಕ ಶೈಲಿ ಬಿಡದ ಫ್ಲವರ್ ಲಕ್ನೋ ಐಪಿಎಲ್ ತಂಡಕ್ಕೆ ಕೋಚ್; ಗಂಭೀರ್ ಮೆಂಟಾರ್

ಸಾಂಪ್ರದಾಯಿಕ ಶೈಲಿ ಬಿಡದ ಫ್ಲವರ್ ಲಕ್ನೋ ಐಪಿಎಲ್ ತಂಡಕ್ಕೆ ಕೋಚ್; ಗಂಭೀರ್ ಮೆಂಟಾರ್

ಆ್ಯಂಡಿ ಫ್ಲವರ್

ಆ್ಯಂಡಿ ಫ್ಲವರ್

Lucknow IPL team Head Coach and Mentor: ಮಾಜಿ ಜಿಂಬಾಬ್ವೆ ಆಟಗಾರ ಆ್ಯಂಡಿ ಫ್ಲವರ್ ಮತ್ತು ಮಾಜಿ ಟೀಮ್ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಅವರು ಲಕ್ನೋ ಐಪಿಎಲ್ ತಂಡದ ಮುಖ್ಯ ಕೋಚ್ ಮತ್ತು ಮೆಂಟಾರ್ ಆಗಿ ಆಯ್ಕೆಯಾಗಿದ್ದಾರೆ.

  • Cricketnext
  • 4-MIN READ
  • Last Updated :
  • Share this:

ನವದೆಹಲಿ, ಡಿ. 18: ಒಂದು ಕಾಲದಲ್ಲಿ ಜಿಂಬಾಬ್ವೆ ತಂಡ (Zimbabwe Cricket Team)) ಇತರ ಟೆಸ್ಟ್ ರಾಷ್ಟ್ರಗಳ ತಂಡಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪ್ರಬಲವಾಗಿತ್ತು. ಅಂದಿನ ಆ ತಂಡದ ಭಾಗವಾಗಿದ್ದವರು ವಿಕೆಟ್ ಕೀಪರ್ ಬ್ಯಾಟರ್ ಮತ್ತು ಕ್ಯಾಪ್ಟನ್ ಎಲ್ಲವೂ ಆಗಿದ್ದವರು ಆ್ಯಂಡಿ ಫ್ಲವರ್ (Andy Flower). ಆಟಗಾರನಾಗಿ ಅಪಾಯ ಯಶಸ್ಸು ಗಳಿಸಿ ನಿವೃತ್ತರಾದ ಬಳಿಕ ಅವರು ತುಳಿದ ಕೋಚಿಂಗ್ ಹಾದಿ ಕೂಡ ಅತ್ಯುತ್ತಮವಾಗಿದೆ. ಅದೇ ಹಾದಿಯನ್ನ ಸವೆಸುತ್ತಿರುವ ಆಂಡಿ ಫ್ಲವರ್ ಇದೀಗ ಮತ್ತೊಮ್ಮೆ ಐಪಿಎಲ್​ಗೆ (IPL) ಕಾಲಿಟ್ಟಿದ್ದಾರೆ. ಹಿಂದೆ ಐಪಿಎಲ್​ನಲ್ಲಿ ಸಹಾಯಕ ಕೋಚ್ ಆಗಿದ್ದ ಅವರು ಇದೀಗ ಮುಖ್ಯ ಕೋಚ್ ಆಗಿ ಬರುತ್ತಿದ್ದಾರೆ. ಹೊಸದಾಗಿ ಸ್ಥಾಪನೆಯಾಗಿರುವ ಲಕ್ನೋ ಫ್ರಾಂಚೈಸಿಯವರು (Lucknow IPL Franchise) ತಮ್ಮ ತಂಡಕ್ಕೆ ಆ್ಯಂಡಿ ಫ್ಲವರ್ ಅವರನ್ನ ಕೋಚ್ ಆಗಿ ನೇಮಕ ಮಾಡಿಕೊಂಡಿದ್ದಾರೆ. ಇವರ ಜೊತೆಗೆ ಗೌತಮ್ ಗಂಭೀರ್ (Gautam Gambhir) ಅವರನ್ನ ಮೆಂಟರ್ ಆಗಿ ಅಯ್ಕೆ ಮಾಡಲಾಗಿದೆ. ಇದರೊಂದಿಗೆ ಲಕ್ನೋ ಐಪಿಎಲ್ ತಂಡ ಭದ್ರವಾಗಿ ಅಡಿಪಾಯ ಹಾಕುತ್ತಿರುವುದು ಸ್ಪಷ್ಟವಾಗಿ ತೋರುತ್ತಿದೆ.


ಮಾಜಿ ಜಿಂಬಾಬ್ವೆ ಆಟಗಾರ ಆಂಡಿ ಫ್ಲವರ್ ಅವರನ್ನ ತಮ್ಮ ತಂಡದ ಮುಖ್ಯ ಕೋಚ್ ಆಗಿ ಆರಿಸಿಕೊಂಡ ವಿಚಾರವನ್ನು ಲಕ್ನೋ ಫ್ರಾಂಚೈಸಿ ಮಾಲೀಕ ಆರ್​ಪಿಎಸ್​ಜಿ ಗ್ರೂಪ್​ನ ಸಂಜೀವ್ ಗೋಯೆಂಕಾ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫ್ಲವರ್ ಅವರ ವೃತ್ತಿಪರತೆ ಹಾಗೂ ಅವರು ಆಟಗಾರ ಮತ್ತು ಕೋಚ್ ಆಗಿ ಕ್ರಿಕೆಟ್​ಗೆ ನೀಡಿದ ಕೊಡುಗೆಯನ್ನ ಗಮನಿಸಿ ಅವರನ್ನ ಕರೆಸಲಾಗಿದೆ ಎಂದು ಗೋಯೆಂಕಾ ತಿಳಿಸಿದ್ದಾರೆ.


ಕೋಚ್ ಆಗಿ ಸಾಲು ಸಾಲು ಯಶಸ್ಸು:


ಆ್ಯಂಡಿ ಫ್ಲವರ್ ಕೂಡ ಈ ಹೊಸ ಸವಾಲಿಗೆ ಎದಿರುನೋಡುತ್ತಿದ್ಧಾರೆ. ಆದರೆ, ಮೊದಲೆ ತಿಳಿಸಿದಂತೆ ಫ್ಲವರ್ ಅವರು ಐಪಿಎಲ್​ಗೆ ಹೊಸಬರಲ್ಲ. ಪಂಜಾಬ್ ಕಿಂಗ್ಸ್ ತಂಡಕ್ಕೆ ಕಳೆದೆರಡು ಸೀಸನ್​ನಲ್ಲಿ ಅಸಿಸ್ಟೆಂಟ್ ಕೋಚ್ ಆಗಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಅವರು ಇಂಗ್ಲೆಂಡ್ ರಾಷ್ಟ್ರೀಯ ತಂಡದ ಕೋಚ್ ಆಗಿ ಬೆರಗಾಗಿಸುವ ಯಶಸ್ಸು ಗಳಿಸಿದ್ದಾರೆ. ಇವರು ಕೋಚ್ ಆಗಿದ್ದ ಅವಧಿಯಲ್ಲೇ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ ಒನ್ ಆಗಿತ್ತು. ಹಾಗೆಯೇ ಇಂಗ್ಲೆಂಡ್ 2010ರ ಟಿ20 ವಿಶ್ವಕಪ್ ಗೆದ್ದಾಗಲೂ ಇವರು ಕೋಚ್ ಆಗಿದ್ದರು. ಅದು ಇಂಗ್ಲೆಂಡ್​ನ ಮೊದಲ ಐಸಿಸಿ ಟ್ರೋಫಿ ಜಯವಾಗಿತ್ತು.


ಇದನ್ನೂ ಓದಿ: ವಿರಾಟ್ ವಿವಾದ: ಸೌರವ್ ಗಂಗೂಲಿ ವಿವರಣೆ ಕೊಡಬೇಕು ಎಂದ ಮಾಜಿ ಕ್ರಿಕೆಟಿಗ ಮದನ್ ಲಾಲ್


ಇಂಗ್ಲೆಂಡ್ ಕ್ರಿಕೆಟ್​ನಲ್ಲಿ ಕೋಚ್ ಹುದ್ದೆಗಳಲ್ಲಿ 12 ವರ್ಷ ಇದ್ದು ಅದರ ಉತ್ತುಂಗವನ್ನು ಕಂಡ ಬಳಿಕ 2019ರಲ್ಲಿ ಅವರು ಫ್ರಾಂಚೈಸಿ ಕ್ರಿಕೆಟ್​ಗೆ ಅಡಿ ಇಟ್ಟರು. ಪಾಕಿಸ್ತಾನ್ ಸೂಪರ್ ಲೀಗ್​ನ ಮುಲ್ತಾನ್ ಸುಲ್ತಾನ್ಸ್ ತಂಡದ ಮುಖ್ಯ ಕೋಚ್ ಆದರು. ಮುಲ್ತಾನ್ ತಂಡ ಈ ವರ್ಷ ಚಾಂಪಿಯನ್ ಆಯಿತು.


ವೆಸ್ಟ್ ಇಂಡೀಸ್​ನ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಕೋಚ್ ಆದ ಅವರು ಎರಡು ಸೀಸನ್​ಗಳಲ್ಲಿ ಫೈನಲ್ ತಲುಪಲು ಕಾರಣರಾದರು.


ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ವೀರೋಚಿತ ಹೋರಾಟ ತೋರಿದ ಅಫ್ಘಾನಿಸ್ತಾನದ ಕನ್ಸಲ್ಟೆಂಟ್ ಆಗಿಯೂ ಆ್ಯಂಡಿ ಫ್ಲವರ್ ಕಾರ್ಯನಿರ್ವಹಿಸಿದ್ದರು.


ಗೌತಮ್ ಗಂಭೀರ್ ಮೆಂಟಾರ್:


ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನ ಲಕ್ನೋ ತಂಡದ ಮೆಂಟಾರ್ ಆಗಿ ಆರಿಸಲಾಗಿದೆ. ಬಿಜೆಪಿಯ ಲೋಕಸಭಾ ಸದಸ್ಯರೂ ಆಗಿರುವ ಗಂಭೀರ್ ಅವರಿಗೆ ಐಪಿಎಲ್ ಹೊಸತಲ್ಲ. ಆಟಗಾರನಾಗಿ ಆಡಿದ್ಧಾರೆ, ಕ್ಯಾಪ್ಟನ್ ಆಗಿ ಮುನ್ನಡೆಸಿದ್ಧಾರೆ. ಇವರ ನಾಯಕತ್ವದಲ್ಲಿ ಕೆಕೆಆರ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ.


ಇದನ್ನೂ ಓದಿ: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ಹಾಕಿ ತಂಡ: ಕ್ರಿಕೆಟ್​ ಸೋಲಿಗೆ ರಿವೇಂಜ್​ ತೀರಿಸಿಕೊಂಡ ನಮ್ಮ ಆಟಗಾರರು!


“ತಂಡದ ವ್ಯವಸ್ಥೆಯಲ್ಲಿ ನನಗೆ ಒಂದು ಅವಕಾಶ ಕೊಟ್ಟಿದ್ದಕ್ಕೆ ಡಾ. ಸಂಜೀವ್ ಗೋಯೆಂಕಾ ಮತ್ತು ಆರ್​ಪಿಎಸ್​ಜಿ ಗ್ರೂಪ್​ಗೆ ಧನ್ಯವಾದ ಹೇಳಬಯಸುತ್ತೇನೆ. ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬ ತುಡಿತ ಈಗಲೂ ನನ್ನಲ್ಲಿ ಇದೆ. ಗೆಲುವಿನ ಹಪಾಹಪಿ ನನಗೆ ನಿರಂತರವಾಗಿ ಸ್ಪೂರ್ತಿ ನೀಡುತ್ತದೆ. ಡ್ರೆಸಿಂಗ್ ರೂಮ್​ಗಾಗಿ ನಾನು ಪೈಪೋಟಿ ನಡೆಸುವುದಿಲ್ಲ. ಉತ್ತರ ಪ್ರದೇಶದ ಆತ್ಮಾಭಿಮಾನಕ್ಕಾಗಿ ನಾನು ಸೆಣಸುತ್ತೇನೆ” ಎಂದು ಗೌತಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಸಾಂಪ್ರದಾಯಿಕ ಶೈಲಿ ಬಿಡದ ಫ್ಲವರ್:


ಕ್ರಿಕೆಟ್ ಜಗತ್ತು ಮತ್ತು ಕಾರ್ಯತಂತ್ರಗಳು ಬದಲಾಗಿವೆ. ಟೆಕ್ನಿಕ್​ನಲ್ಲಿ ಪರಿವರ್ತನೆಗಳಾಗಿವೆ. ಆಟಗಾರನಷ್ಟೇ ಡಾಟಾ ಕೂಡ ಮುಖ್ಯ ಎನಿಸಿವೆ. ಒಂದು ತಂಡದಲ್ಲಿ ಕ್ಯಾಪ್ಟನ್ ಆಗಲೀ ಕೋಚ್ ಆಗಲೀ ನಾಮಕಾವಸ್ತೆ ಎನ್ನುವಷ್ಟರಮಟ್ಟಿಗೆ ಡಾಟಾ ಹಾಸುಹೊಕ್ಕಾಗಿದೆ. ಒಂದು ಪಂದ್ಯಕ್ಕೆ ರಣತಂತ್ರ, ಕಾರ್ಯತಂತ್ರ ರೂಪಿಸಬೇಕಾದರೆ ಡಾಟಾ ಬಹಳ ಮುಖ್ಯ. ಆದರೆ, ಆ್ಯಂಡಿ ಫ್ಲವರ್ ದಶಕಗಳ ಹಿಂದಿನ ಆಟಗಾರ ಕೇಂದ್ರಿತ ಕೋಚಿಂಗ್ ವಿಧಾನವನ್ನೇ ಹೆಚ್ಚು ಇಷ್ಟಪಡುತ್ತಾರೆ.


ಡಾಟಾ ಈಗಿನ ಆಟಕ್ಕೆ ಅಗತ್ಯ. ಆದರೆ, ಒಬ್ಬ ಕೋಚ್ ಆಗಿ ನೀವು ಮನುಷ್ಯರ ಜೊತೆ ಸಂವಹನ ನಡೆಸುತ್ತೀರಿ. ಆಟಗಾರರು ಮನುಷ್ಯರೇ. ಒಬ್ಬ ಆಟಗಾರನನ್ನು ಅಭಿವೃದ್ಧಿಪಡಿಸುವುದಕ್ಕಿಂತ ಆತನ ಯೋಗಕ್ಷೇಮ ನೋಡಿಕೊಳ್ಳುವುದು ಹೆಚ್ಚು ಮುಖ್ಯ. ನೀವು ಜನರ ಬಗ್ಗೆ ಎಷ್ಟು ಕಾಳಜಿ ತೋರುತ್ತೀರಿ ಎಂಬುದು ಕೋಚ್​ಗೆ ಇರಬೇಕಾದ ಲಕ್ಷಣ ಎಂದು ತಮ್ಮ ಮನದಿಂಗಿತವನ್ನು ಆ್ಯಂಡಿ ಫ್ಲವರ್ ಹೊರಹಾಕುತ್ತಾರೆ.

First published: