LSG vs DC Live Score, IPL 2023: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್

LSG vs DC Live Score, IPL 2023: IPL 2023 ರ ಮೂರನೇ ಪಂದ್ಯದಲ್ಲಿ KL ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (LSG vs DC) ತಂಡಗಳು ಮುಖಾಮುಖಿಯಾಗುತ್ತಿವೆ.

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (LSG vs DC) ನಡುವಿನ ಐಪಿಎಲ್‌ನ ಮೂರನೇ ಪಂದ್ಯವು ಲಕ್ನೋದ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್​ ಪಂತ್ ಇಲ್ಲದೆ ಕಣಕ್ಕಿಳಿಯಿತು. ಗಾಯಗೊಂಡಿರುವ ಪಂತ್ ಬದಲಿಗೆ ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಎಲ್‌ಎಸ್‌ಜಿ ನಾಯಕತ್ವ ಕೆಎಲ್ ರಾಹುಲ್ ಕೈಯಲ್ಲಿದೆ. ಅಂತಿಮವಾಗಿ ಡೆಲ್ಲಿ ತಂಡವು ಲಕ್ನೋ ವಿರುದ್ಧ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ತಂಡ ಐಪಿಎಲ್​ 16ನೇ ಆವೃತ್ತಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. 

ಮತ್ತಷ್ಟು ಓದು ...
01 Apr 2023 23:29 (IST)

ಲಕ್ನೋ ತಂಡಕ್ಕೆ ಭರ್ಜರಿ ಜಯ

ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿಗೆ 194 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಲಕ್ನೋ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ  9 ವಿಕೆಟ್​ ನಷ್ಟಕ್ಕೆ 143  ರನ್​ ಗಳಿಸುವ ಮೂಲಕ 50 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

01 Apr 2023 23:01 (IST)

ವಾರ್ನರ್​ ಏಕಾಂಗಿ ಹೋರಾಟ

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್​ ವಾರ್ನರ್​ ತಂಡದ ಪರ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಅವರು ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ.

01 Apr 2023 22:50 (IST)

ಸಂಕಷ್ಟದಲ್ಲಿ ಡಿಸಿ

ಪಂದ್ಯ ಅಂತಿಮ ಘಟ್ಟ ತಲುಪುತ್ತಿದ್ದು, ಡೆಲ್ಲಿ ತಂಡಕ್ಕೆ 36 ಎಸೆತದಲ್ಲಿ 98 ರನ್​ ಬೇಕಾಗಿದ್ದು, ಸಂಕಷ್ಟದಲ್ಲಿದೆ.

01 Apr 2023 22:38 (IST)

ಸೋಲಿನತ್ತ ಮುಖ ಮಾಡಿದ ಡೆಲ್ಲಿ

ಆರಂಭಿಕ 4 ಓವರ್‌ಗಳವರೆಗೂ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ತೋರಿತ್ತು. ಆದರೆ ಮಾರ್ಕ್ ವುಡ್ ಕೂಡ ತಮ್ಮ ಮಾರಕ ಬೌಲಿಂಗ್‌ನಿಂದ ಸರ್ಫರಾಜ್‌ರನ್ನು ಔಟ್ ಮಾಡಿದ್ದಾರೆ. ದೆಹಲಿಗೆ ಮೂರು ಶಾಕ್ ಕೊಟ್ಟಿದ್ದಾರೆ. ಡೆಲ್ಲಿ ಗೆಲುವಿಗೆ ಇನ್ನೂ 108  ರನ್‌ಗಳ  ಅಗತ್ಯವಿದೆ.

01 Apr 2023 22:06 (IST)

ಬ್ಯಾಕ್​ ಟು ಬ್ಯಾಕ್​ ವಿಕೆಟ್​

ಲಕ್ನೋದ ವೇಗದ ಬೌಲರ್ ಮಾರ್ಕ್​ವುಡ್ ಸತತ ಎರಡು ಎಸೆತಗಳಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಮೊದಲು ಪೃಥ್ವಿಯನ್ನು ಔಟ್ ಮಾಡಿದ ಅವರು ಮಿಚೆಲ್ ಮಾರ್ಷ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು.

01 Apr 2023 21:58 (IST)

ಹ್ಯಾಟ್ರಿಕ್​ ಮಾಡ್ತಾರಾ ಮಾರ್ಕ್​ ವುಡ್​?

ಲಕ್ನೋ ಪರ ಭರ್ಜರಿ ಬೌಲಿಂಗ್​ ಪ್ರದರ್ಶಿಸುತ್ತಿರುವ ಮಾರ್ಕ್​ ವುಡ್​ ಬ್ಯಾಕ್​ ಟು ಬ್ಯಾಕ್​ 2 ವಿಕೆಟ್​ ಪಡೆಯುವ ಮೂಲಕ ಹ್ಯಾಟ್ರಿಕ್​ ಸಾಧನೆಗೆ ಸನಿಹವಾಗಿದ್ದಾರೆ.

01 Apr 2023 21:27 (IST)

ಡೆಲ್ಲಿ ಬೌಲಿಂಗ್​

ಇನ್ನು, ಟಾಸ್​ ಗೆದ್ದು ಬೌಲಿಂಗ್​ ಮಾಡಿದ ಡೆಲ್ಲಿ ತಂಡ ಲಕ್ನೋ ಬ್ಯಾಟರ್​ಗಳ ಎದುರು ಮಂಕಾದರು. ಡೆಲ್ಲಿ ಪರ ಖಲೀಲ್ ಅಹಮದ್ ಮತ್ತು ಚೇತನ್ ಸಕಾರಿಯಾ ತಲಾ 2 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಅಕ್ಷರ್​ ಪಟೇಲ್​ ಮತ್ತು ಕುಲ್​ದೀಪ್​ ಯಾದವ್​ ತಲಾ 1 ವಿಕೆಟ್​ ಪಡೆದರು.

01 Apr 2023 21:21 (IST)

ಲಕ್ನೋ ತಂಡದ ಆಟಗಾರರ ಸ್ಕೋರ್​:

ಕೆಎಲ್ ರಾಹುಲ್ 8 ರನ್, ಕೈಲೆ ಮೇಯರ್ಸ್​ ಭರ್ಜರಿ ಆಟದ ಮೂಲಕ 73 ರನ್, ದೀಪಕ್​ ಹೂಡ 17 ರನ್, ಕೃನಾಲ್ ಪಂಡ್ಯ 15 ರನ್, ಮಾರ್ಕೋಸ್​ ಸ್ಟೋಯ್ನಿಸ್ 12 ರನ್, ಆಯೂಶ್​ ಬದೋನಿ 18 ರನ್, ನಿಕೋಲಸ್​ ಪೂರನ್​ 36 ರನ್​ ಗಳಿಸಿದರು.

 

01 Apr 2023 21:20 (IST)

ಕೈಲ್ ಅಬ್ಬರಕ್ಕೆ ಸುಸ್ತಾದ ಬೌಲರ್​ಗಳು, ಡೆಲ್ಲಿ ತಂಡಕ್ಕೆ ಬಿಗ್​ ಟಾರ್ಗೆಟ್​

ಓವರ್​: 20
ಲಕ್ನೋ ಸ್ಕೋರ್​: 193
ವಿಕೆಟ್​: 6
ಡೆಲ್ಲಿ ಟಾರ್ಗೆಟ್​: 194

 

01 Apr 2023 21:13 (IST)

ಲಕ್ನೋ ಉತ್ತಮ ಮೊತ್ತ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದಾರೆ. ನಿಕೋಲಸ್ ಪೂರನ್ 36 ರನ್ ಗಳಿಸಿ ಔಟಾದರು. ಅವರು ಪೃಥ್ವಿ ಶಾ ಕೈಯಲ್ಲಿ ಖಲೀಲ್ ಅಹ್ಮದ್ ಕ್ಯಾಚ್ ನೀಡಿ ಔಟ್​ ಆದರು. 165 ರನ್ ಗಳಿಸುವಷ್ಟರಲ್ಲಿ ಸೂಪರ್ ಜೈಂಟ್ಸ್ ಐದನೇ ವಿಕೆಟ್ ಕಳೆದುಕೊಂಡಿತು.

01 Apr 2023 20:48 (IST)

ಉತ್ತಮ ಮೊತ್ತದತ್ತ ಲಕ್ನೋ

ಟೈಂ ಔಟ್​ ನೀಡಲಾಗಿದೆ

ಓವರ್​: 16
ರನ್​: 131
ವಿಕೆಟ್​: 4

01 Apr 2023 20:27 (IST)

ದೀಪಕ್ ಹೂಡಾ ಔಟ್, ಲಕ್ನೋ ಸ್ಕೋರ್ 11 ಓವರ್‌ಗಳಲ್ಲಿ 98/2

17 ರನ್​ ಗಳಿಸಿ ದೀಪಕ್​ ಹೂಡ ಕುಲ್​ದೀಪ್​ ಯಾದವ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

01 Apr 2023 20:10 (IST)

ಕೆಎಲ್ ರಾಹುಲ್ ಔಟ್

ಖಲೀಲ್ ಅಹ್ಮದ್ ಮತ್ತು ಮುಖೇಶ್ ಕುಮಾರ್ ಈ ಸಮಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್​ ರಾಹುಲ್​ ಕೇವಲ 8 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಈ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು.

 

01 Apr 2023 19:36 (IST)

ಆರಂಭಿಕರಾಗಿ ಕಣಕ್ಕಿಳಿದ ರಾಹುಲ್

ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆರಂಭಿಸಿದೆ. ಆರಂಭಿಕ ಜೋಡಿ ಕೆಎಲ್ ರಾಹುಲ್ ಮತ್ತು ಕೈಲ್ ಮೈಯರ್ಸ್ ಕ್ರೀಸ್‌ಗೆ ಇಳಿದಿದ್ದಾರೆ. ವೇಗದ ಬೌಲರ್ ಖಲೀಲ್ ಅಹ್ಮದ್ ಡೆಲ್ಲಿ ಪರ ಬೌಲಿಂಗ್ ಆರಂಭಿಸುತ್ತಿದ್ದಾರೆ.

01 Apr 2023 19:31 (IST)

ಪಿಚ್​ ರಿಪೋರ್ಟ್​:

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೇಲ್ಮೈ ನಿಧಾನವಾಗಿದೆ ಮತ್ತು ಬ್ಯಾಟರ್‌ಗಳು ವಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಮಧ್ಯದಲ್ಲಿ ಸಮಯ ಬೇಕಾಗುತ್ತದೆ. ಈ ಸ್ಥಳದಲ್ಲಿ ಒಂಬತ್ತು ಟಿ20 ಪಂದ್ಯಗಳನ್ನು ಆಡಲಾಗಿದ್ದು, ಐದು ಪಂದ್ಯಗಳನ್ನು ತಂಡವು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.

01 Apr 2023 19:27 (IST)

ಲಕ್ನೋ ಸೂಪರ್​ ಜೈಂಟ್ಸ್​ ಪ್ಲೇಯಿಂಗ್​ 11

ಕೆಎಲ್ ರಾಹುಲ್ (ನಾಯಕ), ಮೇಯರ್ಸ್​, ಪೂರನ್ (ವಿಕೆಟ್ ಕೀಪರ್), ಹೂಡ, ಸ್ಟೋಯ್ನಿಸ್, ಬದೋನಿ, ಕೃನಾಲ್ ಪಂಡ್ಯ, ರವಿ ಬಿಷ್ಣೋಯಿ, ಜಯದೇವ್ ಉನದ್ಕಟ್, ಆವೇಶ್ ಖಾನ್, ಮಾರ್ಕ್​ ವುಡ್.

01 Apr 2023 19:27 (IST)

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11

ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಲೇ ರೂಸೋ, ಮಿಚೆಲ್ ಮಾರ್ಷ್​, ಸರ್ಫರಾಜ್ ಖಾನ್, ಪೊವೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹಮದ್, ಮುಖೇಶ್ ಕುಮಾರ್.

01 Apr 2023 19:10 (IST)

ಟಾಸ್​ ಗೆದ್ದ ಡೆಲ್ಲಿ, ಬೌಲಿಂಗ್​ ಆಯ್ಕೆ

ಈಗಾಗಲೇ ಟಾಸ್​ ಗೆದ್ದ ಡೆಲ್ಲಿ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಲಕ್ನೋ ತಂಡವು ಬ್ಯಾಟಿಂಗ್​ ಆರಂಭಿಸಲಿದೆ.

01 Apr 2023 19:05 (IST)

ದಕ್ಷಿಣ ಆಫ್ರಿಕಾ ಆಟಗಾರರು ಅಲಭ್ಯ:

ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಆಫ್ರಿಕಾದ ಆಟಗಾರರಿಗಾಗಿ ಕಾಯುತ್ತಿದೆ. ಎಲ್‌ಎಸ್‌ಜಿ ಆರಂಭಿಕ ಪಂದ್ಯಗಳಲ್ಲಿ ಕ್ವಿಂಟನ್ ಡಿ ಕಾಕ್ ಹಾಗೂ ಡೆಲ್ಲಿ ತಂಡ ಎನ್ರಿಕ್ ನಾರ್ಕಿಯಾ ಮತ್ತು ಲುಂಗಿ ನಿಗಿಡಿ ಇಲ್ಲದೆ ಪ್ರವೇಶಿಸಲಿದೆ. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ODI ನಂತರ ಮೂವರೂ ಆಟಗಾರರು ತಂಡಗಳನ್ನು ಸೇರಿಕೊಳ್ಳಲಿದೆ.

01 Apr 2023 19:02 (IST)

ಲಕ್ನೋ-ಡೆಲ್ಲಿ ಹೆಡ್​ ಟು ಹೆಡ್​

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ ಮೇಲುಗೈ ಸಾಧಿಸಿದೆ. ಕಳೆದ ಋತುವಿನಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ತಂಡ ಎದುರಾಳಿ ತಂಡದ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.