• ಹೋಂ
  • »
  • ನ್ಯೂಸ್
  • »
  • IPL
  • »
  • LSG vs DC, IPL 2023: ಟಾಸ್​ ಗೆದ್ದ ಡೆಲ್ಲಿ, ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್​

LSG vs DC, IPL 2023: ಟಾಸ್​ ಗೆದ್ದ ಡೆಲ್ಲಿ, ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್​

LSG vs DC

LSG vs DC

LSG vs DC, IPL 2023: ಗಾಯದ ಸಮಸ್ಯೆಯಿಂದ ಈ ಟೂರ್ನಿಯಿಂದ ಹೊರಗುಳಿದಿರುವ ರಿಷಭ್ ಪಂತ್ ಬದಲಿಗೆ, ಡೇವಿಡ್ ವಾರ್ನರ್​ ಅವರು ಡೆಲ್ಲಿ ನಾಯಕರಾಗಿದ್ದಾರೆ.

  • Share this:

ಐಪಿಎಲ್​ 2023 ರ ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (LSG vs DC) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ತವರು ಮೈದಾನವಾದ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Sports City) ನಡೆಯುತ್ತಿದೆ. ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ. ಇಬ್ಬರೂ ಗೆಲುವಿನೊಂದಿಗೆ ಪ್ರಾರಂಭಿಸಲು ಕಾತುರರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಈ ಟೂರ್ನಿಯಿಂದ ಹೊರಗುಳಿದಿರುವ ರಿಷಭ್ ಪಂತ್ (Rishabh Pant) ಬದಲಿಗೆ, ಡೇವಿಡ್ ವಾರ್ನರ್​ ಅವರು ಡೆಲ್ಲಿ ನಾಯಕರಾಗಿದ್ದಾರೆ. ಈಗಾಗಲೇ ಟಾಸ್​ ಗೆದ್ದ ಡೆಲ್ಲಿ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಲಕ್ನೋ ತಂಡವು ಬ್ಯಾಟಿಂಗ್​ ಆರಂಭಿಸಲಿದೆ.


ಲಕ್ನೋ- ಡೆಲ್ಲಿ ಬಲಾಬಲ:


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ ಮೇಲುಗೈ ಸಾಧಿಸಿದೆ. ಕಳೆದ ಋತುವಿನಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ತಂಡ ಎದುರಾಳಿ ತಂಡದ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.ದಕ್ಷಿಣ ಆಫ್ರಿಕಾ ಆಟಗಾರರು ಅಲಭ್ಯ:


ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಆಫ್ರಿಕಾದ ಆಟಗಾರರಿಗಾಗಿ ಕಾಯುತ್ತಿದೆ. ಎಲ್‌ಎಸ್‌ಜಿ ಆರಂಭಿಕ ಪಂದ್ಯಗಳಲ್ಲಿ ಕ್ವಿಂಟನ್ ಡಿ ಕಾಕ್ ಹಾಗೂ ಡೆಲ್ಲಿ ತಂಡ ಎನ್ರಿಕ್ ನಾರ್ಕಿಯಾ ಮತ್ತು ಲುಂಗಿ ನಿಗಿಡಿ ಇಲ್ಲದೆ ಪ್ರವೇಶಿಸಲಿದೆ. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ODI ನಂತರ ಮೂವರೂ ಆಟಗಾರರು ತಂಡಗಳನ್ನು ಸೇರಿಕೊಳ್ಳಲಿದೆ.


ಇದನ್ನೂ ಓದಿ: RCB vs MI Match: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

ಗಾಯಗೊಂಡಿರುವ ರಿಷಭ್ ಪಂತ್ ಬದಲಿಗೆ ಸರ್ಫರಾಜ್ ಖಾನ್ ವಿಕೆಟ್ ಕೀಪಿಂಗ್​ ಜವಾಬ್ದಾರಿ ನಿಭಾಯಿಸಲಿದ್ದಾರೆ. ಯಶ್ ಧುಲ್ ರೂಪದಲ್ಲಿ ತಂಡವು ಉತ್ತಮ ಯುವ ಬ್ಯಾಟರ್ ಹೊಂದಿದೆ. ಈ ವೇಳೆ ಅಕ್ಷರ್ ಪಟೇಲ್ ಕೂಡ ಬಲಿಷ್ಠ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ಬಗ್ಗೆ ಮಾತನಾಡುತ್ತಾ, ಎನ್ರಿಚ್ ನಾರ್ಕಿಯಾ ಮತ್ತು ಮುಸ್ತಾಫಿಜುರ್ ರೆಹಮಾನ್ ಮೊದಲ ಪಂದ್ಯದಲ್ಲಿ ಲಭ್ಯವಿರುವುದಿಲ್ಲ. ಮತ್ತೊಂದೆಡೆ, ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅನುಪಸ್ಥಿತಿಯಲ್ಲಿ ಲಕ್ನೋ ಆಡಲಿದೆ. ನಂತರ ಡಿಕಾಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ವೇಗಿ ಅವೇಶ್ ಖಾನ್ ಮತ್ತು ಜಯದೇವ್ ಉನದ್ಕತ್ ಬೌಲಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಪಿಚ್​ ರಿಪೋರ್ಟ್​:


ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೇಲ್ಮೈ ನಿಧಾನವಾಗಿದೆ ಮತ್ತು ಬ್ಯಾಟರ್‌ಗಳು ವಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಮಧ್ಯದಲ್ಲಿ ಸಮಯ ಬೇಕಾಗುತ್ತದೆ. ಈ ಸ್ಥಳದಲ್ಲಿ ಒಂಬತ್ತು ಟಿ20 ಪಂದ್ಯಗಳನ್ನು ಆಡಲಾಗಿದ್ದು, ಐದು ಪಂದ್ಯಗಳನ್ನು ತಂಡವು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.
ಡೆಲ್ಲಿ-ಲಕ್ನೋ ಪ್ಲೇಯಿಂಗ್​ 11:


ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಲೇ ರೂಸೋ, ಮಿಚೆಲ್ ಮಾರ್ಷ್​, ಸರ್ಫರಾಜ್ ಖಾನ್, ಪೊವೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹಮದ್, ಮುಖೇಶ್ ಕುಮಾರ್.


ಲಕ್ನೋ ಸೂಪರ್​ ಜೈಂಟ್ಸ್​ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ನಾಯಕ), ಮೇಯರ್ಸ್​, ಪೂರನ್ (ವಿಕೆಟ್ ಕೀಪರ್), ಹೂಡ, ಸ್ಟೋಯ್ನಿಸ್, ಬದೋನಿ, ಕೃನಾಲ್ ಪಂಡ್ಯ, ರವಿ ಬಿಷ್ಣೋಯಿ, ಜಯದೇವ್ ಉನದ್ಕಟ್, ಆವೇಶ್ ಖಾನ್, ಮಾರ್ಕ್​ ವುಡ್.

top videos
    First published: