ಚುಟುಕು ಸಮರ ಮತ್ತೆ ಆರಂಭವಾಗ್ತಿದೆ. ಐಪಿಎಲ್ ಹಬ್ಬವನ್ನು (IPL Festival) ಆಚರಿಸೋಕೆ ಕ್ರಿಕೆಟ್ ಅಭಿಮಾನಿಗಳು (Cricket Fans) ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನೂ ಒಂದೂವರೆ ತಿಂಗಳಂತೂ ಕ್ರಿಕೆಟ್ ಹಬ್ಬ ಇರುತ್ತೆ. ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ (IPl2023) ವೇದಿಕೆ ಸಿದ್ಧವಾಗಿದೆ. ಇಂದಿನಿಂದ ಐಪಿಎಲ್ 16ನೇ ಸೀಸನ್ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಂಡವನ್ನು ಎದುರಿಸಲಿದೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ತವರಿನಲ್ಲಿ ಐಪಿಎಲ್ ತಂಡಗಳು ಅಭಿಮಾನಿಗಳ ಕ್ರಿಕೆಟ್ ಆಡುತ್ತಿದೆ.
ಸ್ಟಾರ್ ಆಟಗಾರರು ಮಿಂಚೋಕೆ ರೆಡಿಯಾಗಿದ್ರೆ, ನಾವೇನ್ ಕಡಿಮೆ ಇಲ್ಲ ಅನ್ನೋದನ್ನು ಪ್ರೂವ್ ಮಾಡೋದಕ್ಕೆ ಹೊಸ ಆಟಗಾರರ ಸಜ್ಜಾಗಿದ್ದಾರೆ. ಇದೆಲ್ಲದರ ನಡುವೆ ಬೇಸರದ ಸಂಗತಿ ಏನೆಂದರೆ ಸಾಕಷ್ಟು ಮಂದಿ ಆಟಗಾರರು ಐಪಿಎಲ್ ಆರಂಭಕ್ಕೂ ಮುನ್ನವೇ ಟೂರ್ನಿಯಿಂದ ಹೊರಗುಳಿದಿದ್ದಾರೆ. ಗಾಯಗೊಂಡು ಟೂರ್ನಿಯಿಂದ ಹೊರನಡೆದ ಆಟಗಾರರ ಪಟ್ಟಿ ಇಲ್ಲಿದೆ.
IPL 2023 ರಲ್ಲಿ ಗಾಯಗೊಂಡು ಹೊರನಡೆದ ಆಟಗಾರರ ಪಟ್ಟಿ
1: ರಿಷಭ್ ಪಂತ್ (ದೆಹಲಿ ಕ್ಯಾಪಿಟಲ್ಸ್): ರಸ್ತೆ ಅಪಘಾತದ ನಂತರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಈ ಬಾರಿಯ ಟೂರ್ನಿಯಿಂದ ಹೊರಗುಳಿದಿದ್ದಾರೆ.
2: ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್): ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ವೇಗದ ಬೌಲರ್ ಹೊರಗುಳಿದಿದ್ದಾರೆ
4: ಝೈ ರಿಚರ್ಡ್ಸನ್ (ಮುಂಬೈ ಇಂಡಿಯನ್ಸ್): ಮಂಡಿ ಗಾಯದಿಂದಾಗಿ ವೇಗಿ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ
5: ಕೈಲ್ ಜೇಮಿಸನ್ (ಚೆನ್ನೈ ಸೂಪರ್ ಕಿಂಗ್ಸ್): ಕೆಳ ಬೆನ್ನಿನ ಒತ್ತಡದ ಮುರಿತದಿಂದಾಗಿ ಆಲ್ ರೌಂಡರ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಇಂದು ಚೆನ್ನೈ-ಗುಜರಾತ್ ಪಂದ್ಯ; ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್ 11, ಹೆಡ್ ಟು ಹೆಡ್
6: ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್): ಕಾಲು ಮುರಿತದಿಂದಾಗಿ ವೇಗದ ಬೌಲರ್ ಔಟ್
7: ವಿಲ್ ಜಾಕ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಸ್ನಾಯು ಗಾಯದಿಂದಾಗಿ ಬ್ಯಾಟ್ಸ್‌ಮನ್ ಹೊರಗುಳಿದಿದ್ದಾರೆ
8: ಮುಖೇಶ್ ಚೌಧರಿ (ಚೆನ್ನೈ ಸೂಪರ್ ಕಿಂಗ್ಸ್): ಎಡಗೈ ಸೀಮರ್ ಬೆನ್ನಿನ ಸಮಸ್ಯೆಯಿಂದ ಹೊರಗುಳಿದಿದ್ದಾರೆ
9: ಶ್ರೇಯಸ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್): ಬೆನ್ನುನೋವಿನಿಂದ ಟೂರ್ನಿಯಿಂದ ಹೊರನಡೆದಿದ್ದಾರೆ.
10: ರಜತ್ ಪಾಟಿದಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಹಿಮ್ಮಡಿ ಗಾಯದಿಂದಾಗಿ ಬ್ಯಾಟ್ಸ್‌ಮನ್ ಮೊದಲಾರ್ಧದಲ್ಲಿ ಹೊರಗುಳಿಯಲಿದ್ದಾರೆ
11: ಜೋಶ್ ಹ್ಯಾಜಲ್‌ವುಡ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಅಕಿಲ್ಸ್ ಟೆಂಡೊನಿಟಿಸ್‌ನಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಟೂರ್ನಿಯ ಆರಂಭಿಕ ಪಂದ್ಯಗಳಿಮದ ಹೊರಗುಳಿಯಲಿದ್ದಾರೆ.
12: ಲಿಯಾಮ್ ಲಿವಿಂಗ್ಸ್ಟೋನ್ (ಪಂಜಾಬ್ ಕಿಂಗ್ಸ್): ಫಿಟ್‌ನೆಸ್ ಕ್ಲಿಯರೆನ್ಸ್‌ಗಾಗಿ ಲಿವಿಂಗ್ಸ್ಟೋನ್ ಕಾಯುತ್ತಿದ್ದಾರೆ.
13: ಮೊಹ್ಸಿನ್ ಖಾನ್ (ಲಕ್ನೋ ಸೂಪರ್ ಜೈಂಟ್ಸ್): ಭುಜದ ಶಸ್ತ್ರಚಿಕಿತ್ಸೆಯಿಂದಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
52 ದಿನ ನಡೆಯಲಿದೆ ಚುಟುಕು ಸಮರ!
ಈ ವರ್ಷ 52 ದಿನಗಳ ಅವಧಿಯಲ್ಲಿ 12 ಸ್ಥಳಗಳಲ್ಲಿ ಒಟ್ಟು 70 ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಐಪಿಎಲ್ 2023 ರ ವೇಳಾಪಟ್ಟಿಯಂತೆ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಕ್ರಮವಾಗಿ 7 ಹೋಮ್ ಪಂದ್ಯಗಳನ್ನು ಮತ್ತು 7 ಬೇರೆಡೆ ಪಂದ್ಯಗಳನ್ನು ಆಡುತ್ತವೆ.
ಮೊದಲ ಪಂದ್ಯದ ಮಾಹಿತಿ!
ಐಪಿಎಲ್ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ಆಗಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾದಲ್ಲಿ ಡಿಜಿಟಲ್‌ನಲ್ಲಿ ನೇರ ಪ್ರಸಾರ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ