:ಮುಂಬೈ: ಐಪಿಎಲ್ 2022 ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಐಪಿಎಲ್ ತಂಡಗಳಿಗೆ ನಾಲ್ವರು ಆಟಗಾರರನ್ನ ಉಳಿಸಿಕೊಳ್ಳುವ (IPL players retention) ಅವಕಾಶ ಕೊಡಲಾಗಿತ್ತು. ನಿನ್ನೆ ಕೊನೆಯ ದಿನವಾಗಿದ್ದು, ಎಂಟು ತಂಡಗಳು ಆಟಗಾರರ ರಿಟೆನ್ಷನ್ ಪಟ್ಟಿ ಕೊಟ್ಟಿವೆ. ಅದರಂತೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಗರಿಷ್ಠ ನಾಲ್ವರು ಆಟಗಾರರನ್ನ ಉಳಿಸಿಕೊಂಡಿವೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಹೈದರಾಬಾದ್ ಸನ್ ರೈಸರ್ಸ್ ತಂಡಗಳು ತಲಾ ಮೂವರು ಆಟಗಾರರನ್ನ ರೀಟೈನ್ ಮಾಡಿಕೊಂಡಿವೆ. ಪಂಜಾಬ್ ಕಿಂಗ್ಸ್ ತಂಡ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ.
ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಅವರು ಅತಿ ಹೆಚ್ಚು ಹಣ ಪಡೆದಿದ್ದಾರೆ. ಈ ಮೂವರಿಗೆ ಅವರ ಫ್ರಾಂಚೈಸಿಗಳು 16 ಕೋಟಿ ರೂ ಕೊಟ್ಟು ಉಳಿಸಿಕೊಂಡಿದ್ಧಾರೆ. ಆರ್ಸಿಬಿ ತಂಡ ವಿರಾಟ್ ಕೊಹ್ಲಿಯನ್ನ 15 ಕೋಟಿ ರೂ ಕೊಟ್ಟು ಉಳಿಸಿಕೊಂಡಿದೆ. ಕರ್ನಾಟಕದ ಮಯಂಕ್ ಅಗರ್ವಾಲ್, ಎಂಎಸ್ ಧೋನಿ, ಜಸ್ಪ್ರೀತ್ ಬುಮ್ರಾ ಮತ್ತು ಆಂಡ್ರೆ ರಸೆಲ್ 12 ಕೋಟಿ ಪಡೆದಿದ್ದಾರೆ. ಮಯಂಕ್ ಅಗರ್ವಾಲ್ ಅವರು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗುವ ಸಾಧ್ಯತೆ ಇದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡ:
1) ವಿರಾಟ್ ಕೊಹ್ಲಿ: 15 ಕೋಟಿ ರೂ
2) ಗ್ಲೆನ್ ಮ್ಯಾಕ್ಸ್ವೆಲ್: 11 ಕೋಟಿ ರೂ
3) ಮೊಹಮ್ಮದ್ ಸಿರಾಜ್: 7 ಕೋಟಿ ರೂ.
ಹರಾಜಿಗಾಗಿ ಆರ್ಸಿಬಿ ಬಳಿ ಉಳಿದಿರುವ ಹಣ: 57 ಕೋಟಿ ರೂ
ಮುಂಬೈ ಇಂಡಿಯನ್ಸ್ (MI) ತಂಡ:
1) ರೋಹಿತ್ ಶರ್ಮಾ: 16 ಕೋಟಿ ರೂ
2) ಜಸ್ಪ್ರೀತ್ ಬುಮ್ರಾ: 12 ಕೋಟಿ ರೂ
3) ಸೂರ್ಯಕುಮಾರ್ ಯಾದವ್: 8 ಕೋಟಿ ರೂ
4) ಕೀರಾನ್ ಪೊಲಾರ್ಡ್: 6 ಕೋಟಿ ರೂ
ಹರಾಜಿಗಾಗಿ ಮುಂಬೈ ಇಂಡಿಯನ್ಸ್ ಬಳಿ ಉಳಿದಿರುವ ಹಣ: 48 ಕೋಟಿ ರೂ
ಇದನ್ನೂ ಓದಿ: '83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್
ಪಂಜಾಬ್ ಕಿಂಗ್ಸ್ (PBKS) ತಂಡ:
1) ಮಯಂಕ್ ಅಗರ್ವಾಲ್: 12 ಕೋಟಿ ರೂ
2) ಅರ್ಷ್ದೀಪ್ ಸಿಂಗ್: 4 ಕೋಟಿ ರೂ
ಪಂಜಾಬ್ ಕಿಂಗ್ಸ್ ತಂಡದ ಬಳಿ ಉಳಿದಿರುವ ಹಣ 72 ಕೋಟಿ ರೂ
ಸನ್ರೈಸರ್ಸ್ ಹೈದರಾಬಾದ್ (SRH) ತಂಡ:
1) ಕೇನ್ ವಿಲಿಯಮ್ಸನ್: 14 ಕೋಟಿ ರೂ
2) ಅಬ್ದುಲ್ ಸಮದ್: 4 ಕೋಟಿ ರೂ
3) ಉಮ್ರಾನ್ ಮಲಿಕ್: 4 ಕೋಟಿ ರೂ.
ಎಸ್ಆರ್ಹೆಚ್ ತಂಡದ ಬಳಿ ಉಳಿದಿರುವ ಹಣ: 68 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ:
1) ರವೀಂದ್ರ ಜಡೇಜಾ: 16 ಕೋಟಿ ರೂ
2) ಎಂಎಸ್ ಧೋನಿ: 12 ಕೋಟಿ ರೂ
3) ಮೊಯೀನ್ ಅಲಿ: 8 ಕೋಟಿ ರೂ
4) ಋತುರಾಜ್ ಗಾಯಕ್ವಾಡ್: 6 ಕೋಟಿ ರೂ
ಸಿಎಸ್ಕೆ ಬಳಿ ಉಳಿದಿರುವ ಹಣ: 48 ಕೋಟಿ ರೂ
ಇದನ್ನೂ ಓದಿ: IPL 2022- ಐಪಿಎಲ್ನಿಂದ ಕೆಎಲ್ ರಾಹುಲ್, ರಷೀದ್ ಖಾನ್ ಒಂದು ವರ್ಷ ನಿಷೇಧ? ಕಾರಣ ಇದು
ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ:
1) ರಿಷಭ್ ಪಂತ್: 16 ಕೋಟಿ ರೂ.
2) ಅಕ್ಷರ್ ಪಟೇಲ್: 9 ಕೋಟಿ ರೂ (12 ಕೋಟಿ ರೂ ಕೊಡಬೇಕಿತ್ತು)
3) ಪೃಥ್ವಿ ಶಾ: 7.5 ಕೋಟಿ ರೂ (8 ಕೋಟಿ ರೂ ಕೊಡಬೇಕಿತ್ತು)
4) ಆನ್ರಿಕ್ ನೋರ್ಟಿಯಾ: 6.5 ಕೋಟಿ ರೂ.
ಡೆಲ್ಲಿ ತಂಡದ ಬಳಿ ಉಳಿದಿರುವ ಹಣ 47.5 ಕೋಟಿ ರೂ
ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ:
1) ಆಂಡ್ರೆ ರಸೆಲ್: 12 ಕೋಟಿ ರೂ
2) ವೆಂಕಟೇಶ್ ಅಯ್ಯರ್: 8 ಕೋಟಿ ರೂ
3) ವರುಣ್ ಚಕ್ರವರ್ತಿ: 8 ಕೋಟಿ ರೂ
4) ಸುನೀಲ್ ನರೈನ್: 6 ಕೋಟಿ ರೂ.
ಕೆಕೆಆರ್ ಬಳಿ ಉಳಿದಿರುವ ಹಣ 48 ಕೋಟಿ ರೂ
ರಾಜಸ್ಥಾನ್ ರಾಯಲ್ಸ್ (RR) ತಂಡ:
1) ಸಂಜು ಸ್ಯಾಮ್ಸನ್: 14 ಕೋಟಿ ರೂ
2) ಜೋಸ್ ಬಟ್ಲರ್: 10 ಕೋಟಿ ರೂ
3) ಯಶಸ್ವಿ ಜೈಸ್ವಾಲ್: 4 ಕೋಟಿ ರೂ
ರಾಯಲ್ಸ್ ಬಳಿ ಉಳಿದಿರುವ ಹಣ 62 ಕೋಟಿ ರೂ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ