IPL 2022: ನಾಯಕರಿಲ್ಲದ ತಂಡಗಳು; ನಾಯಕರಾಗಬಲ್ಲ ಆಟಗಾರರು, ಇಲ್ಲಿದೆ ಡೀಟೇಲ್ಸ್

IPL team captains: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ತಂಡಗಳು ನಾಯಕನ ಆಯ್ಕೆ ಮಾಡಿಕೊಂಡಿವೆ. ಇನ್ನೂ ಕೆಲ ತಂಡಗಳಿಗೆ ನಾಯಕನ ಅಗತ್ಯವಿದೆ. ಅಂಥ ತಂಡಗಳು ಮತ್ತು ನಾಯಕರಾಗಬಲ್ಲ ಆಟಗಾರರತ್ತ ಒಂದು ಅವಲೋಕನ.

ಐಪಿಎಲ್ ಟ್ರೋಫಿ

ಐಪಿಎಲ್ ಟ್ರೋಫಿ

  • Share this:
ಬೆಂಗಳೂರು, ಜ. 12: ಐಪಿಎಲ್ ಟೂರ್ನಿ ಆರಂಭಕ್ಕೆ 2-3 ತಿಂಗಳು ಮಾತ್ರ ಬಾಕಿ ಇದೆ. ಇನ್ನು ಸರಿಯಾಗಿ ಒಂದು ತಿಂಗಳಿಗೆ ಹರಾಜು ಕಾರ್ಯಕ್ರಮ ನಡೆಯಲಿದೆ. ವಿವಿಧ ತಂಡಗಳು ಈಗಾಗಲೇ ಕೆಲ ಆಟಗಾರರನ್ನ ಉಳಿಸಿಕೊಂಡು ಉಳಿದವರನ್ನ ರಿಲೀಸ್ ಮಾಡಿಯಾಗಿದೆ. ಕೆಲ ತಂಡಗಳು ಈಗಾಗಲೇ ನಾಯಕನನ್ನ ಆಯ್ಕೆ ಮಾಡಿಕೊಂಡು ಆತನ ಸುತ್ತ ತಂಡ ಕಟ್ಟುವ ಯೋಜನೆಯಲ್ಲಿವೆ. ಇನ್ನೂ ಕೆಲ ತಂಡಗಳು ಯಾವ ನಾಯಕನನ್ನು ಆರಿಸಿಕೊಳ್ಳಬೇಕೆಂಬ ಅನಿಶ್ಚಿತ ಸ್ಥಿತಿಯಲ್ಲಿ ಇವೆ. ಈಗ ವಿವಿಧ ತಂಡಗಳಿಂದ ರಿಲೀಸ್ ಆದ ಆಟಗಾರರ ಪೈಕಿ ಕ್ಯಾಪ್ಟನ್ಸಿ ಗುಣ ಇರುವ ಆಟಗಾರರು ಯಾರ್ಯಾರಿದ್ಧಾರೆ ಎಂಬುದನ್ನ ಅವಲೋಕಿಸಿದರೆ 10-15 ಆಟಗಾರರು ಕಣ್ಮುಂದೆ ಬರುತ್ತಾರೆ.

ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈಗಾಗಲೇ ನಾಯಕ ಸ್ಥಾನವನ್ನು ಫಿಕ್ಸ್ ಮಾಡಿಕೊಂಡಿವೆ. ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡೆ ಇನ್ನೂ ನಿಗೂಢವಾಗಿದೆ. ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಹೊಸ ತಂಡಗಳಾದ ಅಹ್ಮದಾಬಾದ್ ಮತ್ತು ಲಕ್ನೋ ತಂಡಗಳಿಗೆ ಹೊಸ ನಾಯಕರು ಬೇಕಾಗಿದ್ಧಾರೆ.

ನಾಯಕ ಸ್ಥಾನ ಫಿಕ್ಸ್ ಆಗಿರುವ ತಂಡಗಳು:
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ
ಸನ್​ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿಸಿಕೊಂಡಿರುವ ನಾಲ್ವರು ಆಟಗಾರರ ಪೈಕಿ ಎಂಎಸ್ ಧೋನಿ ಈಗಾಗಲೇ ಅನುಭವಿ ಕ್ಯಾಪ್ಟನ್ ಆಗಿದ್ಧಾರೆ. ರವೀಂದ್ರ ಜಡೇಜಾ ದೂರದೃಷ್ಟಿಯಿಂದ ಉಳಿಸಿಕೊಳ್ಳಲಾಗಿರುವ ಆಟಗಾರ. ಈ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆಗೆ ಎಂಎಸ್ ಧೋನಿಯೇ ನಾಯಕನಾಗುವ ಸಾಧ್ಯತೆ ಹೆಚ್ಚು.

ನಾಯಕನ ಅಗತ್ಯ ಇರುವ ತಂಡಗಳು:
ಪಂಜಾಬ್ ಕಿಂಗ್ಸ್:
ಕೋಲ್ಕತಾ ನೈಟ್ ರೈಡರ್ಸ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಅಹ್ಮದಾಬಾದ್:
ಲಕ್ನೋ:

ಪಂಜಾಬ್ ಕಿಂಗ್ಸ್ ತಂಡ ಉಳಿಸಿಕೊಂಡಿರುವ ಇಬ್ಬರು ಆಟಗಾರರ ಪೈಕಿ ಮಯಂಕ್ ಅಗರ್ವಾಲ್ ಅವರಿಗೆ ಕ್ಯಾಪ್ಟನ್ಸಿ ಸಿಗುತ್ತಾ ಎಂಬ ಕುತೂಹಲ ಇದೆ. ಮಯಂಕ್ ಅವರನ್ನ ಬ್ಯಾಟರ್ ಆಗಿ ದೂರದೃಷ್ಟಿಯಿಂದ ಮಾತ್ರವೇ ಪಂಜಾಬ್ ಕಿಂಗ್ಸ್ ರೀಟೈನ್ ಮಾಡಿಕೊಂಡಿದೆಯಾ ಎಂಬುದು ಗೊತ್ತಿಲ್ಲ.

ಇದನ್ನೂ ಓದಿ: IPL 2022: ಅಹ್ಮದಾಬಾದ್ ಫ್ರಾಂಚೈಸಿಗೆ ಗ್ರೀನ್ ಸಿಗ್ನಲ್; ಫೆ. 12-13ರಂದು ಐಪಿಎಲ್ ಹರಾಜು ಫಿಕ್ಸ್

ಆರ್​ಸಿಬಿ ತಂಡ ಉಳಿಸಿಕೊಂಡ ನಾಲ್ಕು ಆಟಗಾರರಲ್ಲಿ ಇಬ್ಬರು ಬಿಗ್ ಪ್ಲೇಯರ್ಸ್. ಇವರಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗೋದಿಲ್ಲ ಎಂದು ಹೇಳಿದ್ಧಾರೆ. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನೇ ಕ್ಯಾಪ್ಟನ್ ಆಗಿ ಮಾಡಲಾಗುತ್ತಾ ಎಂಬುದು ಇನ್ನೂ ಸುಳಿವಿಲ್ಲ.

ರಿಲೀಸ್ ಆದವರ ಪೈಕಿ ನಾಯಕರಾಗಬಲ್ಲ ಆಟಗಾರರು ಇವರು:

1) ಮನೀಶ್ ಪಾಂಡೆ
2) ಶ್ರೇಯಸ್ ಅಯ್ಯರ್: ಕೆಕೆಆರ್
3) ಕೆಎಲ್ ರಾಹುಲ್: ಲಕ್ನೋ
4) ಡೇವಿಡ್ ವಾರ್ನರ್
5) ಆರ್ ಅಶ್ವಿನ್
6) ಸ್ಟೀವ್ ಸ್ಮಿತ್
7) ಪೃಥ್ವಿ ಶಾ
8) ಇಯಾನ್ ಮಾರ್ಗನ್
9) ಕ್ವಿಂಟನ್ ಡೀಕಾಕ್

ಶ್ರೇಯಸ್ ಅಯ್ಯರ್ ಐಪಿಎಲ್​ನಲ್ಲಿ ನಾಯಕ ಸ್ಥಾನಕ್ಕೆ ಹೇಳಿ ಮಾಡಿಸಿದ ಆಟಗಾರ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದವರು. ಈ ಬಾರಿ ಶ್ರೇಯಸ್ ಅಯ್ಯರ್ ಅವರನ್ನ ಪಡೆಯಲು ಕೋಲ್ಕತಾ ನೈಟ್ ರೈಡರ್ಸ್ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಪ್ರಯತ್ನಿಸುತ್ತಿವೆ.

ಕೆಎಲ್ ರಾಹುಲ್ ಅವರನ್ನ ಲಕ್ನೋ ಫ್ರಾಂಚೈಸಿ ಖರೀದಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಲಕ್ನೋ ಕ್ಯಾಪ್ಟನ್ ಕೆಎಲ್ ರಾಹುಲ್ ಫಿಕ್ಸ್ ಎಂಬಂತಹ ಸುದ್ದಿ ಇದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಧಾನದಲ್ಲಿ ತುಸು ಬದಲಾವಣೆ ಆಗಬೇಕು: ಸಂಜಯ್ ಮಂಜ್ರೇಕರ್

ನಾಯಕ ಸ್ಥಾನಕ್ಕೆ ಡೇವಿಡ್ ವಾರ್ನರ್​ಗೆ ಬೇಡಿಕೆ ಇದೆ.  ಕೆಕೆಆರ್ ಮತ್ತು ಆರ್​ಸಿಬಿ ತಂಡಗಳು ಡೇವಿಡ್ ವಾರ್ನರ್ ಸೆಳೆಯಲು ಪ್ರಯತ್ನಿಸಿದರೆ ಅಚ್ಚರಿ ಇಲ್ಲ.

ಮನೀಶ್ ಪಾಂಡೆ ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದವರು. ನಾಯಕತ್ವದ ಗುಣ ಇರುವವರು. ಆರ್ ಅಶ್ವಿನ್ ಕ್ರಿಕೆಟ್ ಚಾಣಾಕ್ಷ್ಯತೆಗೆ ಹೆಸರುವಾಸಿ. ಒಮ್ಮೆಯೂ ಅವರು ತಂಡವನ್ನ ಮುನ್ನಡೆಸದೇ ಹೋದರೂ ಅವರಲ್ಲಿ ಆ ಸಾಮರ್ಥ್ಯವಂತೂ ಇದೆ. ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಕೂಡ ನಾಯಕಸ್ಥಾನಕ್ಕೆ ಹೇಳಿಮಾಡಿಸಿದ ಆಟಗಾರ.

ಇತ್ತೀಚೆಗೆ ನಿವೃತ್ತಿಯಾದ ಸೌತ್ ಆಫ್ರಿಕಾದ 29 ವರ್ಷದ ಆಟಗಾರ ಕ್ವಿಂಟನ್ ಡೀಕಾಕ್ ಅವರು ಐಪಿಎಲ್ ತಂಡವೊಂದಕ್ಕೆ ನಾಯಕರಾಗಿ ಆಯ್ಕೆಯಾದರೆ ಅಚ್ಚರಿ ಇಲ್ಲ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ಧಾರೆ. ಈ ಬಾರಿಯೂ ಅವರಿಗೆ ನಾಯಕ ಸ್ಥಾನ ಒಲಿದುಬರಬಹುದು. ಮುಂಬೈನ ಪೃಥ್ವಿ ಶಾ ನಾಯಕರಾಗಬಲ್ಲ ಮತ್ತೊಬ್ಬ ಆಟಗಾರ.
Published by:Vijayasarthy SN
First published: