IPL

  • associate partner
HOME » NEWS » Ipl » KXIP VS RR PREDICTED PLAYING 11 IPL 2020 ZP

RR vs KXIP: ರಾಬಿನ್ vs ರಾಹುಲ್: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಎರಡು ತಂಡಗಳಲ್ಲಿ ಕನ್ನಡಿಗರಿರುವುದು ಇಂದಿನ ಪಂದ್ಯದ ಮತ್ತೊಂದು ವಿಶೇಷ. ಪಂಜಾಬ್​ನಲ್ಲಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅರ್ಗವಾಲ್ ಇದ್ದರೆ, ಅತ್ತ ರಾಜಸ್ಥಾನ್ ಪರ ರಾಬಿನ್ ಉತ್ತಪ್ಪ ಹಾಗೂ ಶ್ರೇಯಸ್ ಗೋಪಾಲ್ ಕಣಕ್ಕಿಳಿಯಲ್ಲಿದ್ದಾರೆ.

news18-kannada
Updated:October 30, 2020, 3:28 PM IST
RR vs KXIP: ರಾಬಿನ್ vs ರಾಹುಲ್: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
RR-VS-KXIP
  • Share this:
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ ಮುಖಾಮುಖಿಯಾಗಲಿದೆ. ಉಭಯ ತಂಡಗಳಿಗೂ ಇಂದಿನ ಪಂದ್ಯವು ಮಹತ್ವದಾಗಿದ್ದು, ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳುವ ತವಕದಲ್ಲಿದೆ. ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯ ಭರ್ಜರಿ ಪೈಪೋಟಿಗೆ ಕಾರಣವಾಗಲಿದೆ.

ಹಾಗೆಯೇ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬೆನ್ ಸ್ಟೋಕ್ಸ್​ ಕಳೆದ ಪಂದ್ಯದಲ್ಲಿ ಮಿಂಚಿದ್ರೆ, ಇತ್ತ ಪಂಜಾಬ್ ತಂಡದದಲ್ಲಿ ಕ್ರಿಸ್ ಗೇಲ್ ಕೊನೆಯ ಪಂದ್ಯದಲ್ಲಿ ಆರ್ಭಿಟಿಸಿದ್ದರು. ಅದೇ ರೀತಿ ಆರಂಭಿಕರಾಗಿ ಉತ್ತಮ ಫಾರ್ಮ್​ನಲ್ಲಿರುವ ಮಯಾಂಕ್ ಅಗರ್ವಾಲ್  ಇಂದು ಮತ್ತೆ ಮೈದಾನಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ದೀಪಕ್ ಹೂಡಾ ಅಥವಾ ಮಂದೀಪ್ ಸಿಂಗ್ ಹೊರಗುಳಿಯಬಹುದು. ಇನ್ನು ಸಂಜು ಸ್ಯಾಮ್ಸನ್ ಮುಂಬೈ ವಿರುದ್ಧ ಅರ್ಧಶತಕದೊಂದಿಗೆ ಫಾರ್ಮ್​ಗೆ ಮರಳಿದ್ದು, ಸ್ಮಿತ್ ಪಡೆಯ ಚಿಂತೆಯನ್ನು ದೂರ ಮಾಡಿದೆ.

ಆದರೆ ಬೌಲಿಂಗ್ ವಿಭಾಗದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮತ್ತಷ್ಟು ಹರಿತಗೊಳ್ಳಬೇಕಿದೆ. ಏಕೆಂದರೆ  ಜೋಫ್ರಾ ಆರ್ಚರ್ ಹೊರತುಪಡಿಸಿ ತಂಡದ ಬೌಲಿಂಗ್ ವಿಭಾಗದಲ್ಲಿ ಮತ್ಯಾರೂ ಭರ್ಜರಿ ಪ್ರದರ್ಶನ ನೀಡಿಲ್ಲ. ಇದೀಗ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಪಂಜಾಬ್ ಹೊಂದಿದೆ. ಈ ಹಿಂದೆ ರಾಜಸ್ಥಾನ್ ವಿರುದ್ಧ ಪಂಜಾಬ್ 223 ರನ್​ಗಳನ್ನು ಬಾರಿಸಿತ್ತು. ಅದಾಗ್ಯೂ ಆರ್​ಆರ್ ಬ್ಯಾಟಿಂಗ್​ನಲ್ಲಿ ಮಿಂಚಿದ ಪರಿಣಾಮ ರೋಚಕ ಜಯ ಸಾಧಿಸಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಬೆನ್ ಸ್ಟೋಕ್ಸ್ ಹಾಗೂ ರಾಹುಲ್ ತೆವಾಠಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ರೆ ಮಾತ್ರ ಕಿಂಗ್ಸ್ ಇಲೆವೆನ್ ತಂಡವನ್ನು ಸುಲಭವಾಗಿ ಕಟ್ಟಿಹಾಕಿಕೊಳ್ಳಬಹುದು.

ಇತ್ತ ಪಂಜಾಬ್ ತಂಡ ಸತತ 5 ಗೆಲುವುಗಳ ಮೂಲಕ ಭರ್ಜರಿ ಆತ್ಮ ವಿಶ್ವಾಸದಲ್ಲಿದೆ. ಬೌಲಿಂಗ್ ಆರಂಭಿಕರಾಗಿ ಮೊಹಮ್ಮದ್ ಶಮಿ ಹಾಗೂ ಕ್ರಿಸ್ ಜೋರ್ಡನ್ ತಂಡಕ್ಕೆ ಯಶಸ್ಸು ತಂದುಕೊಡುತ್ತಿದ್ದಾರೆ. ಹೀಗಾಗಿ ಆರಂಭಿಕ ಆಘಾತ ನೀಡುವಲ್ಲಿ ಕಿಂಗ್ಸ್ ಇಲೆವೆನ್ ಕಳೆದ ಪಂದ್ಯಗಳಲ್ಲೂ ಯಶಸ್ವಿಯಾಗಿದೆ. ಇವರ ಜೊತೆ ಆಲ್​ರೌಂಡರ್ ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಹಾಗೂ ಮುರುಗನ್ ಅಶ್ವಿನ್ ಉತ್ತಮ ಸಾಥ್ ನೀಡಿರುವುದು ರಾಹುಲ್ ಚಿಂತೆಯನ್ನು ದೂರ ಮಾಡಿದೆ.

ಹಾಗೆಯೇ ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ತಲಾ ಒಂದು ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದ್ದು, ಕಿಂಗ್ಸ್ ಪರ ಎರಡು ಪಂದ್ಯಗಳಲ್ಲಿ ಹೊರಗುಳಿದಿರುವ ಮಯಾಂಕ್  ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ  ರಾಜಸ್ಥಾನ್ ರಾಯಲ್ಸ್ ಅಂಕಿತ್ ರಜಪೂತ್ ಸ್ಥಾನದಲ್ಲಿ ಜಯದೇವ್ ಉನಾದ್ಕಟ್​ಗೆ ಅವಕಾಶ ನೀಡುವ ನಿರೀಕ್ಷೆಯಿದೆ.

ಇನ್ನು ಎರಡು ತಂಡಗಳಲ್ಲಿ ಕನ್ನಡಿಗರಿರುವುದು ಇಂದಿನ ಪಂದ್ಯದ ಮತ್ತೊಂದು ವಿಶೇಷ. ಪಂಜಾಬ್​ನಲ್ಲಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅರ್ಗವಾಲ್ ಇದ್ದರೆ, ಅತ್ತ ರಾಜಸ್ಥಾನ್ ಪರ ರಾಬಿನ್ ಉತ್ತಪ್ಪ ಹಾಗೂ ಶ್ರೇಯಸ್ ಗೋಪಾಲ್ ಕಣಕ್ಕಿಳಿಯಲ್ಲಿದ್ದಾರೆ.

ಸಂಭವನೀಯ ಉಭಯ ತಂಡಗಳು ಇಂತಿವೆ:ರಾಜಸ್ಥಾನ್ ಸಂಭವನೀಯ ಪ್ಲೇಯಿಂಗ್ ಇಲೆವೆನ್:
ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಠಿಯಾ, ಬೆನ್ ಸ್ಟೋಕ್ಸ್, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ

ಪಂಜಾಬ್ ಸಂಭವನೀಯ ಪ್ಲೇಯಿಂಗ್ ಇಲೆವೆನ್:
ಕೆ.ಎಲ್. ರಾಹುಲ್ (ನಾಯಕ) , ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮಾಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್/ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ಅರ್ಷದೀಪ್ ಸಿಂಗ್

POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by: zahir
First published: October 30, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories