IPL

  • associate partner

KXIP vs RCB: ಬೆಂಗಳೂರು ವಿರುದ್ಧ ಕನ್ನಡಿಗನ ಸ್ಪೋಟಕ ಶತಕ: ಆರ್​ಸಿಬಿಗೆ ಕಠಿಣ ಸವಾಲು

KXIP vs RCB: 60ನೇ ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿ ಐಪಿಎಲ್​ನಲ್ಲಿ ಅತೀ ವೇಗದಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ 63 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು.

news18-kannada
Updated:September 24, 2020, 9:35 PM IST
KXIP vs RCB: ಬೆಂಗಳೂರು ವಿರುದ್ಧ ಕನ್ನಡಿಗನ ಸ್ಪೋಟಕ ಶತಕ: ಆರ್​ಸಿಬಿಗೆ ಕಠಿಣ ಸವಾಲು
KL-RAHUL
  • Share this:
ದುಬೈ: IPL 13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಅವರ ಮನಮೋಹಕ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 207 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಆದರೆ ನಾಯಕ ನಿರೀಕ್ಷೆಯಂತೆ ಆರ್​ಸಿಬಿ ಬೌಲರುಗಳು ಆರಂಭಿಕ ಯಶಸ್ಸು ಸಾಧಿಸಲಿಲ್ಲ.

ಮಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್, ಉಮೇಶ್ ಯಾದವ್​ ಅವರ ಮೊದಲ ಓವರ್​ನಲ್ಲಿ 8 ರನ್ ಕಲೆಹಾಕಿದರು. ಡೇಲ್ ಸ್ಟೇನ್ ಎಸೆದ 2ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ಐಪಿಎಲ್​ನಲ್ಲಿ 2 ಸಾವಿರ ರನ್ ಪೂರೈಸಿದ ಸಾಧನೆ ಮೆರೆದರು. 60ನೇ ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿ ಐಪಿಎಲ್​ನಲ್ಲಿ ಅತೀ ವೇಗದಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ 63 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು.

ಆರ್​ಸಿಬಿ ಬೌಲರುಗಳ ವಿರುದ್ಧ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ರಾಹುಲ್-ಮಯಾಂಕ್ ಪವರ್​ಪ್ಲೇನಲ್ಲಿ ಅರ್ಧಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಚಹಾಲ್ ಅವರ 7ನೇ ಓವರ್​ನಲ್ಲಿ ಚೆಂಡನ್ನು ಗುರುತಿಸುವಲ್ಲಿ ಎಡವಿದ ಮಯಾಂಕ್ (26) ಕ್ಲೀನ್ ಬೌಲ್ಡ್ ಆಗುವ ಮೂಲಕ ಹೊರ ನಡೆದರು.

ನಂತರ ಜೊತೆಗೂಡಿ ಪೂರನ್ ಹಾಗೂ ರಾಹುಲ್ ಎಚ್ಚರಿಕೆಯ ಆಟದೊಂದಿಗೆ ರನ್ ಕದಿಯುವಲ್ಲಿ ಹೆಚ್ಚಿನ ಒತ್ತು ನೀಡಿದರು. ಪರಿಣಾಮ ಮೊದಲ 10 ಓವರ್​ಗಳಲ್ಲಿ ಕಿಂಗ್ಸ್ ಮೊತ್ತವು 90 ಕ್ಕೆ ಬಂದು ನಿಂತಿತು. ಇದರ ಬೆನ್ನಲ್ಲೇ ತಮ್ಮ ಅರ್ಧಶತಕ ಪೂರೈಸಿದ ಪಂಜಾಬ್ ನಾಯಕ ಬ್ಯಾಟ್ ಮೇಲೆಕ್ಕೆತ್ತಿದರು. 36 ಎಸೆತಗಳನ್ನು ಎದುರಿಸಿದ ರಾಹುಲ್ ಈ ವೇಳೆಗೆ 1 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದ್ದರು. 12 ಓವರ್​ಗಳಲ್ಲಿ 100 ರನ್ ಪೂರೈಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಆದರೆ ಶಿವಂ ದುಬೆ ಎಸೆತದಲ್ಲಿ ಎಬಿಡಿಗೆ ಕ್ಯಾಚ್ ನೀಡುವುದರೊಂದಿಗೆ ಪೂರನ್ (17) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಸ್ಪೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ (5) ಕೂಡ ವಿಕೆಟ್ ಒಪ್ಪಿಸಿ ಹೊರ ನಡೆದರು.

83 ​ ಹಾಗೂ 89 ರನ್​ ಗಳಿಸಿದ್ದ ವೇಳೆ ಕೊಹ್ಲಿ ಬಿಟ್ಟ 2 ಕ್ಯಾಚ್​ನಿಂದ ಜೀವದಾನ ಪಡೆದ ಕೆಎಲ್ ರಾಹುಲ್, ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಸ್ಟೇನ್ ಅವರ 19ನೇ ಓವರ್​ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಸಿಕ್ಸ್ ಹಾಗೂ ಫೋರ್​ ಬಾರಿಸಿ  62 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ಈ ಓವರ್​ನಲ್ಲಿ ಒಟ್ಟು 26 ರನ್ ಕಲೆಹಾಕಿದರು.


ಕೊನೆಯ ಓವರ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 23 ರನ್​ ಬಾಚಿದ ರಾಹುಲ್ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಕೊನೆಯ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ಪಂಜಾಬ್ ಮೊತ್ತವನ್ನು 206ಕ್ಕೆ ತಂದು ನಿಲ್ಲಿಸಿದರು.

ನಾಯಕನ ಆಟವಾಡಿದ ಕೆಎಲ್ ರಾಹುಲ್ 69 ಎಸೆತಗಳಲ್ಲಿ 132 ರನ್ ಚಚ್ಚುವ ಮೂಲಕ ಹೊಸ ದಾಖಲೆ ಬರೆದರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ರಾಹುಲ್ ಬ್ಯಾಟ್​ನಿಂದ ಸಿಡಿದದ್ದು ಭರ್ಜರಿ 7 ಸಿಕ್ಸರ್​ಗಳು ಹಾಗೂ 14 ಬೌಂಡರಿಗಳು. ಆರ್​ಸಿಬಿ ಪರ 2 ವಿಕೆಟ್ ಪಡೆದ ಶಿವಂ ದುಬೆ ಯಶಸ್ವಿ ಬೌಲರ್ ಎನಿಸಿಕೊಂಡರು.

POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ KXIP vs RCB ಹೈವೋಲ್ಟೇಜ್ ಪಂದ್ಯ
Published by: zahir
First published: September 24, 2020, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading