IPL

  • associate partner

ರಾಹುಲ್ ಮಿಂಚಿನ ಬ್ಯಾಟಿಂಗ್​ಗೆ ಕೊಹ್ಲಿ ಪಡೆ ಸುಸ್ತು; ಬೆಂಗಳೂರು ವಿರುದ್ಧ ಮಿಂಚಿದ‌ ಕರ್ನಾಟಕದ ಹುಡುಗ

KXIP vs RCB: ಆರ್​ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ  ಚೊಚ್ಚಲ ಬ್ಯಾಟಿಂಗ್​  ಬೀಸುವ ಮೂಲಕ ರಾಹುಲ್ 69 ಬಾಲ್​ಗೆ​ 132 ರನ್​ ಬಾರಿಸಿದ್ದಾರೆ.

news18-kannada
Updated:September 24, 2020, 10:09 PM IST
ರಾಹುಲ್ ಮಿಂಚಿನ ಬ್ಯಾಟಿಂಗ್​ಗೆ ಕೊಹ್ಲಿ ಪಡೆ ಸುಸ್ತು; ಬೆಂಗಳೂರು ವಿರುದ್ಧ ಮಿಂಚಿದ‌ ಕರ್ನಾಟಕದ ಹುಡುಗ
ಕೆಎಲ್ ರಾಹುಲ್  
  • Share this:
ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್  ಭರ್ಜರಿ ಬ್ಯಾಟ್​ ಬೀಸುವ ಮೂಲಕ ಶತಕ ದಾಟಿಸಿದ್ದಾರೆ. ಆ ಮೂಲಕ ತಂಡದ ಮೊತ್ತವನ್ನು 206ಕ್ಕೆ ಏರಿಸಿದ್ದಾರೆ. ಆರ್​ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ  ಚೊಚ್ಚಲ ಬ್ಯಾಟಿಂಗ್​  ಬೀಸುವ ಮೂಲಕ ರಾಹುಲ್ 69 ಬಾಲ್​ಗೆ​ 132 ರನ್​ ಬಾರಿಸಿದ್ದಾರೆ. ಅದರಲ್ಲಿ 14 ಫೋರ್​​ ಮತ್ತು 7 ಸಿಕ್ಸ್​ ಬಾರಿಸುವ ಮೂಲಕ ಪಂಜಾಬ್​ ತಂಡದ ಆಕರ್ಷಣೆಯ ಕೇಂದ್ರ ಬಿಂದುವಾಗಿ  ರಾಹುಲ್ ಇಂದು​ ಗುರುತಿಸಿಕೊಂಡಿದ್ದಾರೆ. ಮತ್ತೊಂದೆಡೆ ಕೆ‌ಎಲ್ ರಾಹುಲ್ ಸಿಡಿಸಿದ 132 ರನ್ ಐಪಿಎಲ್  ನಲ್ಲಿ ಭಾರತೀಯ ಆಟಗಾರನೊಬ್ಬ ಕಲೆಹಾಕಿದ ಗರಿಷ್ಠ ಸ್ಕೋರ್ ಆಗಿದೆ.

ರಾಹುಲ್​ ಸಾಧನೆ;

ಇಂದಿನ ಪಂದ್ಯದಲ್ಲಿ ರಾಹುಲ್​ ಶತಕ ಬಾರಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈವರೆಗೆಗಿನ ರಾಹುಲ್​ ಐಪಿಎಲ್​ನಲ್ಲಿ ಕಲೆ ಹಾಕಿರುವ ರನ್​ಗಳ ಮೊತ್ತ 2 ಸಾವಿರವಾಗಿದೆ. ಹೌದು. ರಾಹುಲ್​  ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ವೇಗವಾಗಿ 2 ಸಾವಿರ ರನ್​ ಬಾರಿಸಿ ದಾಖಲೆಯನ್ನು ಗುರುತಿಸಿಕೊಂಡಿದ್ದಾರೆ.

ಕಳೆದ ಬಾರಿ ಡೆಲ್ಲಿ ವಿರುದ್ಧ ಸೋತಿದ್ದ ಪಂಜಾಬ್​ ಇಂದು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ತಂಡದ ಕೋಚ್​​ ಅನಿಲ್​ ಕುಂಬ್ಲೇ ಪಂಜಾಬ್​ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಈ ಪರಿಣಾಮೇ ಇದು ಪಂಜಾಬ್​ ಅಧಿಕ ಮೊತ್ತವನ್ನು ಪೇರಿಸಲು ಸಹಾಯವಾಗಿದೆ. ಈ ಮೊತ್ತ ಆರ್​ಸಿಬಿ ಸವಾಲಾಗಿದೆ.
Published by: Harshith AS
First published: September 24, 2020, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading