IPL

  • associate partner
HOME » NEWS » Ipl » KXIP VS MI PREDICTED PLAYING 11 ZP

KXIP vs MI: ಪಂಜಾಬ್ ಪಡೆಯಲ್ಲಿ 2 ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

ಪಂಜಾಬ್ ಆರಂಭಿಕ ಆರ್ಭಟ ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ಹೇಳಿಕೊಳ್ಳುವಂತಹ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿಲ್ಲ ಎಂದೇ ಹೇಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲೂ ರಾಹುಲ್ ಹಾಗೂ ಮಯಾಂಕ್ ತಂಡದ ಟ್ರಂಪ್​ ಕಾರ್ಡ್​ಗಳಾಗಿದ್ದಾರೆ.

news18-kannada
Updated:October 1, 2020, 6:06 PM IST
KXIP vs MI: ಪಂಜಾಬ್ ಪಡೆಯಲ್ಲಿ 2 ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ
KXIP vs MI
  • Share this:
ಅಬುಧಾಬಿಯ ಶೇಖ್ ಝಾಯದ್ ಕ್ರಿಕೆಟ್ ಮೈದಾನದಲ್ಲಿ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಒಂದು ಗೆಲುವಿನ ಹೊರತಾಗಿ ಉಭಯ ತಂಡಗಳು ಎರಡು ಸೋಲಿನ ರುಚಿ ಅನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವುದು ಎರಡೂ ತಂಡಕ್ಕೂ ಅನಿವಾರ್ಯ. ಬಲಾಬಲದ ಲೆಕ್ಕಾಚಾರದಲ್ಲಿ ಎರಡೂ ಸಮಬಲ ಹೊಂದಿದ್ದು, ಅನುಭವಿ ಆಟಗಾರರನ್ನು ಗಣನೆಗೆ ತೆಗೆದುಕೊಂಡರೆ ಮುಂಬೈ ಫೇವರೆಟ್ ಎನಿಸಿದೆ. ಏಕೆಂದರೆ ಮುಂಬೈ ಪಾಳಯದಲ್ಲಿ ರೋಹಿತ್ ಶರ್ಮಾ, ಡಿಕಾಕ್, ಪೊಲಾರ್ಡ್, ಪಾಂಡ್ಯರಂತಹ ಅಂತರಾಷ್ಟ್ರೀಯ ಬ್ಯಾಟ್ಸ್​ಮನ್​ಗಳಿದ್ದಾರೆ.

ಹಾಗೆಯೇ ವಿಶ್ವದ ಅಗ್ರ ಬೌಲರುಗಳಾದ ಟ್ರೆಂಟ್ ಬೌಲ್ಟ್ ಹಾಗೂ ಜಸ್​​ಪ್ರೀತ್ ಬುಮ್ರಾ ಮುಂಬೈ ತಂಡದ ವೇಗದ ಅಸ್ತ್ರಗಳು. ಇದರೊಂದಿಗೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸಂಚಲನ ಸೃಷ್ಟಿಸಿದ ಇಶಾನ್ ಕಿಶನ್ ಹಾಗೂ ಸ್ಪಿನ್ನರ್ ರಾಹುಲ್ ಚಹರ್ ರೋಹಿತ್ ಶರ್ಮಾ ಅವರ ಶಕ್ತಿಯಾಗಿ ಮಾರ್ಪಟಿದ್ದಾರೆ.

ಇತ್ತ ಪಂಜಾಬ್ ಆರಂಭಿಕ ಆರ್ಭಟ ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ಹೇಳಿಕೊಳ್ಳುವಂತಹ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿಲ್ಲ ಎಂದೇ ಹೇಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲೂ ರಾಹುಲ್ ಹಾಗೂ ಮಯಾಂಕ್ ತಂಡದ ಟ್ರಂಪ್​ ಕಾರ್ಡ್​ಗಳಾಗಿದ್ದಾರೆ. ಇನ್ನು ಕಳೆದ ಮೂರು ಪಂದ್ಯಗಳನ್ನಾಡಿರುವ ನಿಕೋಲಸ್ ಪೂರನ್ ಅಥವಾ ಗ್ಲೆನ್ ಮ್ಯಾಕ್ಸ್​ವೆಲ್ ಇಂದು ಹೊರಗುಳಿಯುವ ಸಾಧ್ಯತೆಯಿದೆ. ಇವರ ಸ್ಥಾನದಲ್ಲಿ ಕ್ರಿಸ್​ ಗೇಲ್​ಗೆ ಅವಕಾಶ ನೀಡಬಹುದು. ಹಾಗೆಯೇ ಕರುಣ್ ನಾಯರ್ ಸ್ಥಾನದಲ್ಲಿ ದೀಪಕ್ ಹೂಡಾ ಕಣಕ್ಕಿಳಿಯಬಹುದು.

ಇದರ ಹೊರತಾಗಿ ಪಂಜಾಬ್ ಪಡೆಗೆ ಬೌಲಿಂಗ್​ನದ್ದೇ ಚಿಂತೆ. ಏಕೆಂದರೆ 223 ರನ್​ಗಳನ್ನು ಬಾರಿಸಿ ಸೋತಿರುವ ಇತಿಹಾಸ ಇದೀಗ ಕಿಂಗ್ಸ್ ಪರವಿದೆ. ರಾಜಸ್ಥಾನ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕಾಟ್ರೆಲ್ ಕೈಚೆಲ್ಲಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಜೇಮ್ಸ್ ನೀಶಮ್, ರವಿ ಬಿಷ್ಣೋಯ್ ಹಾಗೂ ಮೊಹಮ್ಮದ್ ಶಮಿಯನ್ನು ಒಳಗೊಂಡಿರುವ ಕಿಂಗ್ಸ್ ಬೌಲಿಂಗ್ ವಿಭಾಗವು ಮತ್ತಷ್ಟು ಕರಾರುವಾಕ್ ದಾಳಿ ನಡೆಸಬೇಕಿದೆ. ಇಲ್ಲದಿದ್ರೆ ಮುಂಬೈ ಬ್ಯಾಟ್ಸ್​ಮನ್​ಗಳು ಅಬ್ಬರಿಸುವುದರಲ್ಲಿ ಯಾವುದೇ ಡೌಟ್ ಇಲ್ಲ.

ಇನ್ನು ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡದೊಂದಿಗೆ ಇಂದು ಕೂಡ ಮುಂಬೈ ಇಂಡಿಯನ್ಸ್ ಮೈದಾನಕ್ಕಿಳಿಯುವ ಸಾಧ್ಯತೆಯಿದ್ದು, ಪಂಜಾಬ್ ತಂಡದಲ್ಲಿ ಮಾತ್ರ ಬದಲಾವಣೆ ಕಂಡು ಬರಬಹುದು. ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ.

KXIP: ಕೆಎಲ್ ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಗ್ಲೆನ್ ಮ್ಯಾಕ್ಸ್​​ವೆಲ್, ನಿಕೋಲಸ್ ಪೂರನ್/ಗೇಲ್, ಜೇಮ್ಸ್ ನೀಶಮ್, ಸರ್ಫರಾಜ್ ಖಾನ್, ಮೊಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ದೀಪಕ್ ಹೂಡಾ, ಮಂದೀಪ್ ಸಿಂಗ್

MI: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ , ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾPOINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
Published by: zahir
First published: October 1, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories