Video- ಕೆಎಲ್ ರಾಹುಲ್ ರನೌಟ್ ವಾಪಸ್ ಪಡೆದ ಪಾಂಡ್ಯ; ಆಟಗಾರರ ಕ್ರೀಡಾಸ್ಫೂರ್ತಿಗೆ ಭಾರೀ ಮೆಚ್ಚುಗೆ

Watch the video- ಗೇಲ್ ಹೊಡೆದ ಚೆಂಡು ನಾನ್​ಸ್ಟ್ರೈಕರ್​ನಲ್ಲಿದ್ದ ಕೆಎಲ್ ರಾಹುಲ್ ಅವರ ಕೈಗೆ ಹೊಡೆದು ಹೋಯಿತು. ಅದನ್ನ ಹಿಡಿದ ಕೃಣಾಲ್ ಪಾಂಡ್ಯ ಕ್ಷಣಮಾತ್ರದಲ್ಲಿ ಚೆಂಡಿನಿಂದ ವಿಕೆಟ್ ಉರುಳಿಸಿದರು. ರಾಹುಲ್ ಔಟಾಗಿದ್ದರೂ ಪಾಂಡ್ಯ ತಮ್ಮ ರನೌಟ್ ಅಪೀಲ್ ವಾಪಸ್ ಪಡೆದು ಕ್ರೀಡಾಸ್ಫೂರ್ತಿ ಮೆರೆದರು.

ಕೆಎಲ್ ರಾಹುಲ್ ಅವರು ಕೃಣಾಲ್ ಪಾಂಡ್ಯಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು

ಕೆಎಲ್ ರಾಹುಲ್ ಅವರು ಕೃಣಾಲ್ ಪಾಂಡ್ಯಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು

 • Cricketnext
 • Last Updated :
 • Share this:
  ಅಬುಧಾಬಿ, ಸೆ. 28: ಕ್ರೀಡೆ ಕೇವಲ ಗೆಲ್ಲುವ ಉದ್ದೇಶಕ್ಕಾಗಿ ಇಲ್ಲ, ಅದು ವ್ಯಕ್ತಿ ವ್ಯಕ್ತಿ ನಡುವಿನ ಸಂಬಂಧವನ್ನು ಇನ್ನಷ್ಟು ಪಕ್ವಗೊಳಿಸುತ್ತದೆ. ಕ್ರೀಡಾಸ್ಫೂರ್ತಿ ಇಲ್ಲದೇ ಒಬ್ಬ ಆಟಗಾರ ಅದ್ಭುತ ಕ್ರೀಡಾಪಟುವಾಗಲು ಸಾಧ್ಯವಿಲ್ಲ. ಈ ಬಾರಿಯ ಐಪಿಎಲ್​ನಲ್ಲಿ ಆಟಗಾರರು ಕ್ರೀಡಾಸ್ಫೂರ್ತಿ ಮೆರೆದಿರುವ ಕೆಲ ನಿದರ್ಶನಗಳು ಇವೆ. ನಿನ್ನೆ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವೂ ಇಂಥದ್ದೊಂದು ಕ್ರೀಡಾಸ್ಫೂರ್ತಿ ಘಟನೆಗೆ ಸಾಕ್ಷಿಯಾಯಿತು. ಪಂಜಾಬ್ ತಂಡದ ನಾಯಕ ಕೆ ಎಲ್ ರಾಹುಲ್ ಅವರನ್ನ ಅದ್ಭುತ ರೀತಿಯಲ್ಲಿ ರನೌಟ್ ಮಾಡಿದ್ದ ಕೃಣಾಲ್ ಪಾಂಡ್ಯ, ಕೆಲ ಕ್ಷಣದಲ್ಲೇ ತಮ್ಮ ರನ್ ಔಟ್ ಅಪೀಲನ್ನು ವಾಪಸ್ ತೆಗೆದುಕೊಂಡರು. ಮುಂಬೈ ತಂಡದ ಕ್ಯಾಪ್ಟನ್ ಕೂಡ ಈ ನಿರ್ಧಾರವನ್ನು ಬೆಂಬಲಿಸಿದ್ದು ವಿಶೇಷ.

  ಘಟನೆ ಏನು?: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ಬ್ಯಾಟಿಂಗ್ ಮಾಡುತ್ತಿದ್ದರು. ಕೃನಾಲ್ ಪಾಂಡ್ಯ ಓವರ್​ನಲ್ಲಿ ಕ್ರಿಸ್ ಗೇಲ್ ನೇರವಾಗಿ ಹೊಡೆದ ಚೆಂಡು ರಾಹುಲ್ ಅವರ ಕೈಗೆ ಬಡಿದು ಹೋಗುತ್ತಿತ್ತು. ಅಂಪೈರ್ ಬಳಿ ಇದ್ದ ಕೃಣಾಲ್ ಪಾಂಡ್ಯ ತಮ್ಮ ಬಳಿ ಬಂದ ಆ ಚೆಂಡನ್ನ ಹಿಡಿದು ಕ್ಷಣಮಾತ್ರದಲ್ಲಿ ವಿಕೆಟ್ ಉರುಳಿಸಿದರು. ಈ ವೇಳೆ ಕೆಎಲ್ ರಾಹುಲ್ ಕ್ರೀಸ್​ನಿಂದ ಹೊರಗಿದ್ದರು. ಗೇಲ್ ಹೊಡೆದ ಚೆಂಡಿನಿಂದ ಕೈಗೆ ಪೆಟ್ಟು ತಿಂದ ನೋವಿನಲ್ಲೂ ಇದ್ದರು. ಮಿಂಚಿನ ವೇಗದಲ್ಲಿ ವಿಕೆಟ್ ಉರುಳಿಸಿದ್ದ ಕೃಣಾಲ್ ಪಾಂಡ್ಯ ಅದೇ ಉಸುರಿನಲ್ಲಿ ರನ್ ಔಟ್​ಗೆ ಅಪೀಲ್ ಮಾಡಿದರು. ಅಂಪೈರ್ ಇನ್ನೇನು ಔಟೆಂದು ಕೈ ಎತ್ತಲು ಹೋಗುವಷ್ಟರಲ್ಲಿ ಪಾಂಡ್ಯ ತಮ್ಮ ಮನಸು ಬದಲಿಸಿ ರನ್ ಔಟ್ ಅಪೀಲ್ ಹಿಂಪಡೆದುಕೊಳ್ಳುವುದಾಗಿ ಅಂಪೈರ್​ಗೆ ಮನವಿ ಮಾಡಿದರು. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ಇದನ್ನ ಬೆಂಬಲಿಸಿದರು. ಕೃಣಾಲ್ ಪಾಂಡ್ಯ ಅವರ ಕ್ರೀಡಾಸ್ಫೂರ್ತಿಗೆ ಕೆಎಲ್ ರಾಹುಲ್ ಥಂಬ್ಸ್ ಅಪ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.


  ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಈ ಕ್ರೀಡಾಸ್ಫೂರ್ತಿಗೆ ಸಾಕಷ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ, ಪಂಜಾಬ್ ಕಿಂಗ್ಸ್ ತಂಡದಂತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದು ಬಹಳ ಮಹತ್ವದ ಪಂದ್ಯವಾಗಿತ್ತು. ಕೆಎಲ್ ರಾಹುಲ್ ಒಳ್ಳೆಯ ಫಾರ್ಮ್​ನಲ್ಲಿದ್ದರು. ಅವರು ಹೆಚ್ಚು ಹೊತ್ತು ಕ್ರೀಸ್​ನಲ್ಲಿದ್ದು ಅರ್ಧಶತಕ ಗಳಿಸಿದ್ದರೆ ಪಂಜಾಬ್ ಕಿಂಗ್ಸ್ ತಂಡ ದೊಡ್ಡ ಮೊತ್ತ ಕಳುಹಿಸುವ ಅಪಾಯ ಇತ್ತು. ಇಂಥ ಸಂದರ್ಭದಲ್ಲೂ ಕೆಎಲ್ ರಾಹುಲ್ ನಿಯಮದ ಪ್ರಕಾರವೇ ಔಟಾದರೂ ಮುಂಬೈ ಆಟಗಾರರು ತಮ್ಮ ರನೌಟ್ ಮನವಿಯನ್ನ ವಾಪಸ್ ಪಡೆದುಕೊಂಡಿದ್ದು ಗಮನಾರ್ಹ.

  ಇದನ್ನೂ ಓದಿ: MI vs PBKS- ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ನಗೆ ಬೀರಿದ ಮುಂಬೈ; ಪಂಜಾಬ್​ಗೆ ನಿರಾಸೆ

  ಈ ಪಂದ್ಯವನ್ನ ಅಂತಿಮವಾಗಿ ಮುಂಬೈ ಇಂಡಿಯನ್ಸ್ ಗೆದ್ದುಕೊಂಡಿತು. ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ ಮತ್ತು ಕೀರಾನ್ ಪೊಲಾರ್ಡ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಮುಂಬೈಗೆ ಬಹಳ ಅಮೂಲ್ಯವಾದ ಗೆಲುವು ತಂದುಕೊಟ್ಟರು. ಕಳೆದ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸಿಕ್ಕ ಮೊದಲ ಗೆಲುವು ಇದಾಗಿದೆ. ಈ ಜಯದೊಂದಿಗೆ ರೋಹಿತ್ ಶರ್ಮಾ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಪ್ಲೇ ಆಫ್ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅಷ್ಟೇ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್​​ಸಿಬಿ ತಂಡ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ 10 ಅಂಕಗಳಿರುವ ಕೆಕೆಆರ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಕೂಡ 10 ಅಂಕಗಳನ್ನ ಹೊಂದಿದ್ದು ಐದನೇ ಸ್ಥಾನದಲ್ಲಿದೆ. ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳು ತಲಾ ಎಂಟು ಅಂಕಗಳನ್ನ ಹೊಂದಿವೆ.
  Published by:Vijayasarthy SN
  First published: