• ಹೋಂ
 • »
 • ನ್ಯೂಸ್
 • »
 • IPL
 • »
 • Krunal Pandya: ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರುನಾಲ್​ ಪಾಂಡ್ಯ ವಶಕ್ಕೆ, 3 ಗಂಟೆ ವಿಚಾರಣೆ!

Krunal Pandya: ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರುನಾಲ್​ ಪಾಂಡ್ಯ ವಶಕ್ಕೆ, 3 ಗಂಟೆ ವಿಚಾರಣೆ!

ಮಂಗಳವಾರವಷ್ಟೇ ಐಪಿಎಲ್​ ಪೂರ್ಣಗೊಂಡಿತ್ತು. ಮುಂಬೈ ಇಂಡಿಯನ್ಸ್​ ಸತತ ಎರಡನೇ ಬಾರಿಗೆ ಕಪ್​ ಎತ್ತಿತ್ತು. ಇದೇ ಖುಷಿಯಲ್ಲಿ ವಾಪಾಸಾದ ಕ್ರುನಾಲ್​ಗೆ ಭಾರತದಲ್ಲಿ ಶಾಕ್​ ಎದುರಾಗಿದೆ.

 • Share this:

  ಮುಂಬೈ ತಂಡದ ಆಲ್​ರೌಂಡರ್​ ಕ್ರುನಾಲ್​ ಪಾಂಡ್ಯಗೆ ಸಂಕಷ್ಟವೊಂದು ಎದುರಾಗಿದೆ. ಐಪಿಎಲ್​ನಲ್ಲಿ ಕಪ್​ ಎತ್ತಿ ಭಾರತಕ್ಕೆ ವಾಪಾಸಾದ ಅವರಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಷ್ಟಕ್ಕೂ ಕ್ರುನಾಲ್​ರನ್ನು ವಿಚಾರಣೆ ನಡೆಸಲು ಕಾರಣವೇನು? ಅದಕ್ಕೆ ಇಲ್ಲಿದೆ ಉತ್ತರ.

  ಮಂಗಳವಾರವಷ್ಟೇ ಐಪಿಎಲ್​ ಪೂರ್ಣಗೊಂಡಿತ್ತು. ಮುಂಬೈ ಇಂಡಿಯನ್ಸ್​ ಸತತ ಎರಡನೇ ಬಾರಿಗೆ ಕಪ್​ ಎತ್ತಿತ್ತು. ಇದೇ ಖುಷಿಗೆ ಕ್ರುನಾಲ್​ ಪಾಂಡ್ಯ ವಜ್ರದಿಂದ ಮಾಡಲಾದ ಆಡೆಮರ್ಸ್ ಪಿಗುಯೆಟ್ ಕಂಪೆನಿಯ ಎರಡು ವಾಚ್​ ಹಾಗೂ ರೊಲೆಕ್ಸ್​ ಕಂಪೆನಿಯ ಎರಡು ವಾಚ್​ಅನ್ನು ಖರೀದಿಸಿ ತಂದಿದ್ದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಈ ಬಗ್ಗೆ ಅಧಿಕಾರಿಗಳಿಗೆ ಕ್ರುನಾಲ್​ ಮಾಹಿತಿ ನೀಡಿಲ್ಲ. ಹೀಗಾಗಿ ವಶಕ್ಕೆ ಪಡೆದು, 3 ಗಂಟೆ ವಿಚಾರಣೆ ನಡೆಸಲಾಗಿದೆ.  ಸುಂಕ​ ಕಾಯ್ದೆ ಪ್ರಕಾರ ವಿದೇಶದಿಂದ 50 ಸಾವಿರ ಅದಕ್ಕೂ ಕಡಿಮೆ ಬೆಲೆಯ ವಸ್ತುಗನ್ನು ತಂದರೆ ಅದಕ್ಕೆ ಭಾರತದಲ್ಲಿ ತೆರಿಗೆ ತುಂಬಬೇಕೆಂದಿಲ್ಲ. ಅದಕ್ಕೂ ದುಬಾರಿ ವಸ್ತು ಖರೀದಿ ಮಾಡಿದರೆ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಸುಂಕ​ ಅಧಿಕಾರಿಗೆ ಮಾಹಿತಿ ನೀಡಬೇಕು. ಇಂಥ ವಸ್ತುಗಳಿಗೆ ಶೇ.36ರವರೆಗೆ ತೆರಿಗೆ ಪಾವತಿ ಮಾಡಬೇಕು. ಹೀಗಾಗಿ,  ಬಹುತೇಕರು ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳಿಗೆ ಮಾಹಿತಿ ನೀಡದೇ ತೆರಳಲು  ಪ್ರಯತ್ನಿಸುತ್ತಾರೆ. ಒಂದೊಮ್ಮೆ ಕ್ರುನಾಲ್​ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಅವರು ಸುಂಕ ಕಾಯ್ದೆಯಡಿ ಕ್ರಮವನ್ನು ಎದುರಿಸಬೇಕಾಗುತ್ತದೆ.

  Published by:Rajesh Duggumane
  First published: