ಡೆಲ್ಲಿ ದಾಂಡಿಗನ ಕುತ್ತಿಗೆ ಹಿಡಿದ ಕೊಲ್ಕತ್ತಾ ವೇಗಿ; ವಿಡಿಯೋ ವೈರಲ್​!

ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ವೇಗಿ ಶಿವಂ ಮಾವಿ ಎಸೆದ ಎಸೆತವನ್ನು ಗಮನಿಸಿ ಪೃಥ್ವಿ ಶಾ ಅವರು ಒಂದೊಂದರಂತೆ ಆರು ಬೌಂಡರಿ ಬಾರಿಸಿದ್ದಾರೆ. ಸರಿಯಾಗಿ ಚೆಂಡನ್ನು ನೋಡಿ ಬೌಂಡರಿ ಲೈನ್​ಗೆ ಅಟ್ಟಿದ್ದಾರೆ. ಇನ್ನು ಪೃಥ್ವಿ ಶಾ 41 ಎಸೆತದಲ್ಲಿ 81 ರನ್​ ಬಾರಿಸಿ ಗಮನಸೆಳೆದಿದ್ದಾರೆ. ಅದರಲ್ಲಿ 3 ಸಿಕ್ಸ್​ ಸೇರಿದೆ.

ಪೃಥ್ವಿ ಶಾ -ಶಿವಂ ಮಾವಿ

ಪೃಥ್ವಿ ಶಾ -ಶಿವಂ ಮಾವಿ

 • Share this:
  ಕೋವಿಡ್​ 2ನೇ ಮಹಾಅಲೆಯ ನಡುವೆ ಐಪಿಎಲ್​ 14ನೇ ಅವೃತ್ತಿ ನಡೆಯುತ್ತಿದೆ. ಕರ್ನಾಟಕವಂತೂ 14 ದಿನಗಳ ಕಾಲ ಲಾಕ್​ಡೌನ್​ ಮಾಡಿದ್ದು, ಜನತಾ ಕರ್ಫ್ಯೂ ಜಾರಿಗೆ ತಂದಿದೆ. ಹೀಗಿರುವಾಗ ಅನೇಕರು ಮನೆಯಲ್ಲಿದ್ದುಕೊಂಡು ಐಪಿಎಲ್​ ಪಂದ್ಯ ವೀಕ್ಷಿಸುತ್ತಿದ್ದಾರೆ. ನಿನ್ನೆ ನಡೆದಂತಹ 2ನೇ ಪಂದ್ಯದಲ್ಲಿ ಕೊಲ್ಕತ್ತಾ ಮತ್ತು ಡೆಲ್ಲಿ ನಡುವೆ ಜಿದ್ದಾ ಜಿದ್ದಿ ನಡೆದಿದ್ದು, ರಿಷಭ್​ ಪಂತ್​​ ನಾಯಕತ್ವದ ತಂಡ 7 ವಿಕೆಟ್​ಗಳ ಭರ್ಜರಿ ಜಯಸಾಧಿಸಿದೆ. ಅದರಲ್ಲೂ ಬ್ಯಾಟ್ಸ್​ಮನ್​ ಪೃಥ್ವಿ ಶಾ ಅಬ್ಬರ ಕ್ರಿಕೆಟ್​ ಪ್ರಿಯರ ಮನದಲ್ಲಿ ಅಚ್ಚಳಿಯಾಗಿ ಉಳಿದಿದೆ.

  ಡೆಲ್ಲಿ ಪರವಾಗಿ ಬ್ಯಾಟ್​ ಬೀಸಿದ್ದ ಪೃಥ್ವಿ ಶಾ ಒಂದೇ ಓವರ್​ನಲ್ಲಿ 6 ಬೌಂಡರಿ ಬಾರಿಸುವ ಮೂಲಕ ಕ್ರಿಕೆಟಿಗರ ಮನಗೆದ್ದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿ ಬೌಂಡರಿ ಬಾರಿಸುವ ವಿಡಿಯೋ ವೈರಲ್​ ಆಗುತ್ತಿದೆ. ಅನೇಕರು ವಿಡಿಯೋವನ್ನು ಸ್ಟೇಟಸ್​ ಹಾಕಿಕೊಂಡಿದ್ದಾರೆ.

  ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ವೇಗಿ ಶಿವಂ ಮಾವಿ ಎಸೆದ ಎಸೆತವನ್ನು ಗಮನಿಸಿ ಪೃಥ್ವಿ ಶಾ ಅವರು ಒಂದೊಂದರಂತೆ ಆರು ಬೌಂಡರಿ ಬಾರಿಸಿದ್ದಾರೆ. ಸರಿಯಾಗಿ ಚೆಂಡನ್ನು ನೋಡಿ ಬೌಂಡರಿ ಲೈನ್​ಗೆ ಅಟ್ಟಿದ್ದಾರೆ. ಇನ್ನು ಪೃಥ್ವಿ ಶಾ 41 ಎಸೆತದಲ್ಲಿ 81 ರನ್​ ಬಾರಿಸಿ ಗಮನಸೆಳೆದಿದ್ದಾರೆ. ಅದರಲ್ಲಿ 3 ಸಿಕ್ಸ್​ ಸೇರಿದೆ.

  ಇನ್ನು ಪಂದ್ಯ ಕೊನೆಯಲ್ಲಿ ಪೃಥ್ವಿ ಶಾ ಮತ್ತು ಶಿಖರ್​ ಧವನ್​ ಮಾವಿ ಬಳಿ ಹೋಗಿ ಶೇಕ್​ ಹ್ಯಾಂಡ್​ ಮಾಡುತ್ತಾರೆ. ಆದರೆ ಮಾವಿ ಮತ್ತು ಶಾ ನಡುವೆ ತಮಾಷೆಯ ಪ್ರಸಂಗ ನಡೆಯುತ್ತದೆ. ಮಾವಿ ಅವರು ಪೃಥ್ವಿ ಅವರ ಕುತ್ತಿಗೆ ಮತ್ತು ಕೈಯನ್ನು ಜೋರಾಗಿ ಹಿಡಿಯುತ್ತಾರೆ.  ಇಂಡಿಯನ್​ ಪ್ರಿಮಿಯರ್​ ಲೀಗ್​ ಟ್ವಿಟ್ಟರ್​​ ಖಾತೆ ಪೃಥ್ವಿ ಶಾ ಮತ್ತು ಮಾವಿ ನಡುವಿನ ತಮಾಷೆಯ ವಿಡಿಯೋವನ್ನು ಶೇರ್​ ಮಾಡಿದ್ದು, ಪಂದ್ಯ ಮುಗಿದ ನಂತರ ಎಲ್ಲರೂ ಸ್ನೇಹಿತರಾಗುತ್ತಾರೆ. ಇದು ಐಪಿಎಲ್​ ಆಟದ ಬ್ಯೂಟಿಯಾಗಿದೆ ಎಂದು ಅಡಿಬರಹ ನೀಡಿದೆ.
  Published by:Harshith AS
  First published: