IPL 2021, KKR vs PBKS Preview| ಗೆಲ್ಲಲೇಬೇಕಾದ ಒತ್ತಡದಲ್ಲಿ ಕೋಲ್ಕತ್ತಾ​ ಮತ್ತು ಪಂಜಾಬ್; ಯಾರ ಪಾಲಾಗಲಿದೆ ಗೆಲುವು?

ಕೆಕೆಆರ್ ಪಾಲಿಗೆ ಇಂದಿನ ಪಂದ್ಯ ಮಹತ್ವವಾದದ್ದು. ಪ್ಲೇ ಆಫ್​ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಈ ಗೆಲುವು ಅಗತ್ಯ. ಅಲ್ಲದೆ, ತಂಡವೂ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮತ್ತೊಂದೆಡೆ ಸ್ಪೋಟಕ ಬ್ಯಾಟ್ಸ್​ಮನ್​ಗಳ ದೊಡ್ಡ ದಂಡೇ ಇರುವ ಪಂಜಾಬ್ ಯಾವುದೇ ಕ್ಷಣದಲ್ಲಿ ಯಾವುದೇ ತಂಡಕ್ಕೆ ಮಾರಕವಾಗಬಲ್ಲದು.

ಇಯಾನ್ ಮಾರ್ಗನ್-ಕೆ.ಎಲ್. ರಾಹುಲ್.

ಇಯಾನ್ ಮಾರ್ಗನ್-ಕೆ.ಎಲ್. ರಾಹುಲ್.

 • Share this:
  ದುಬೈ (ಅಕ್ಟೋಬರ್​ 01); ಐಪಿಎಲ್ 2021ರ (IPL 2021) ಪ್ಲೇ ಆಫ್​ನಲ್ಲಿ (Play Off) ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಗೆಲ್ಲಲೇಬೇಕಾದ ಇಂದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ (Kolkata Knight Riders)  ಮುಖಾಮುಖಿಯಾಗುತ್ತಿದೆ. 11 ಪಂದ್ಯಗಳಲ್ಲಿ 5 ಗೆಲುವು ಸಾಧಿಸುವ ಮೂಲಕ 10 ಅಂಕ ಪಡೆದಿರುವ ಕೆಕೆಆರ್ (KKR) ಅಂಕಪಟ್ಟಿಯಲ್ಲಿ 4 ಸ್ಥಾನದಲ್ಲಿದೆ. ಅಷ್ಟೇ ಅಂಕ ಗಳಿಸಿರುವ ಮುಂಬೈ ಇಂಡಿಯನ್ಸ್ (Mumbai Indians) ನೆಟ್​ ರನ್​ರೇಟ್ ಕಡಿಮೆ ಇರುವ ಕಾರಣಕ್ಕೆ 5ನೇ ಸ್ಥಾನದಲ್ಲಿದೆ. ಆದರೆ, 4 ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್​ 6ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್​ಗೆ ಅವಕಾಶ ಪಡೆಯಲು ಕೆಕೆಆರ್​ ಗೆ ಈ ಪಂದ್ಯದ ಗೆಲುವು ಅನಿವಾರ್ಯವಾದರೆ, ಪಂಜಾಬ್ ಪಾಲಿಗೆ ಗೆಲ್ಲಲೇಬೇಕಾದ ಒತ್ತಡ ಇದೆ.

  ಬಲಿಷ್ಠ ಕೆಕೆಆರ್​ ಗೆಲ್ಲುವ ಫೇವರಿಟ್;

  ಕೆಕೆಆರ್ ಪಾಲಿಗೆ ಇಂದಿನ ಪಂದ್ಯ ಮಹತ್ವವಾದದ್ದು. ಪ್ಲೇ ಆಫ್​ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಕೆಕೆಆರ್​ಗೆ ಈ ಗೆಲುವು ಅಗತ್ಯವಾಗಿದೆ. ಅಲ್ಲದೆ, ತಂಡವೂ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರಂಭಿಕರಾದ ವೆಂಕಟೇಶ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಅಗತ್ಯವಾದ ಆರಂಭವನ್ನು ಒದಗಿಸುವಲ್ಲಿ ಇತ್ತೀಚೆಗೆ ಸಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ, ತ್ರಿಪಾಠಿ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್ ಸೇರಿದಂತೆ ಹೊಡಿ ಬಡಿ ಆಟಗಾರರ ದೊಡ್ಡ ದಂಡೆ ಕೆಕೆಆರ್​ ತಂಡದಲ್ಲಿದೆ.

  ಇನ್ನೂ ಬೌಲಿಂಗ್ ವಿಭಾಗದಲ್ಲಿರುವ ವರುಣ್ ಚಕ್ರವರ್ತಿ ಮತ್ತು ಸುನೀಲ್ ನಾರಾಯಣ್ ಮಿಸ್ಟ್ರಿ ಬೌಲಿಂಗ್ ತಂಡಕ್ಕಿರುವ ದೊಡ್ಡ ಪ್ಲಸ್ ಪಾಯಿಂಟ್. ಲೂಕಿ ಫರ್ಗ್ಯೂಸನ್ ವೇಗ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ತಬ್ಬಿಬ್ಬುಗೊಳಿಸಿದರೂ ಅಚ್ಚರಿ ಇಲ್ಲ. ಹೀಗಾಗಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿರುವುದೂ ಸಳ್ಳಲ್ಲ.

  ವಿಚಿತ್ರ ಸ್ಥಿತಿಯಲ್ಲಿ ಪಂಜಾಬ್;

  ಪಂಜಾಬ್ ಕಿಂಗ್ಸ್ ತಂಡದ್ದು ವಿಚಿತ್ರ ಸ್ಥಿತಿ. ಇಡೀ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಗೆಲುವಿನ ಸಮೀಪ ಬಂದು ಸೋತ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡವೂ ಒಂದು. ತೀರಾ ಸುಲಭವಾಗಿ ಗೆಲ್ಲಬಹುದಾದ ಪಂದ್ಯಗಳನ್ನ ಅದು ಕೈಚೆಲ್ಲಿದ್ದುಂಟು. ಒಂದು ವಾರದ ಹಿಂದೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲ್ಲಲು 2 ಓವರ್​ನಲ್ಲಿ ಕೇವಲ 8 ರನ್ ಅಗತ್ಯವಿತ್ತು. ಎಂಟು ವಿಕೆಟ್ ಕೈಲಿದ್ದ ಪಂಜಾಬ್ ಬಹಳ ಸುಲಭವಾಗಿ ಗೆಲ್ಲುತ್ತದೆಂದು ಯಾರು ಬೇಕಾದರೂ ಬೆಟ್ ಕಟ್ಟಬಹುದಿತ್ತು. ಆದರೆ, ಆಗಿದ್ದೇ ಬೇರೆ, ಆ ಪಂದ್ಯದಲ್ಲಿ ಪಂಜಾಬ್ ಮೂರು ರನ್​ಗಳಿಂದ ಸೋತಿತು. ರಾಯಲ್ಸ್​ನ ವೇಗಿ ಕಾರ್ತಿಕ್ ತ್ಯಾಗಿ ಹೀರೋ ಆದರು. ಇಂಥ ಕೆಲ ನಿದರ್ಶನಗಳು ಹಲವಿವೆ.

  ಇದನ್ನೂ ಓದಿ: Chris Gayle Pulls Out Of IPL 2021| ಐಪಿಎಲ್​ ಟೂರ್ನಿಯಿಂದ ದಿಢೀರ್ ಹೊರ ನಡೆದ ಸ್ಟಾರ್ ಬ್ಯಾಟ್ಸ್​ಮನ್ ಕ್ರಿಸ್​ ಗೇಲ್!

  ಈ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ದೊಡ್ಡ ಮೊತ್ತ ಪೇರಿಸುವ ಭರವಸೆ ನೀಡಿತ್ತಾದರೂ ಅಲ್ಪ ಮೊತ್ತಕ್ಕೆ ಕುಸಿಯುವ ಮೂಲಕ ಸೋಲನುಭವಿಸಿತ್ತು. ತಂಡದಲ್ಲಿ ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್, ದೀಪಕ್ ಹೂಡ, ಮಾಕ್ರಮ್ ಸೇರಿದಂತೆ ಅನೇಕ ಸ್ಪೋಟಕ ಬ್ಯಾಟ್ಸ್​ಮನ್​ಗಳ ದೊಡ್ಡ ದಂಡೇ ಇದೆ. ಆದರೆ, ಈ ಯಾರೂ ಸಹ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡದೆ ಇರುವುದು ತಂಡದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
  Published by:MAshok Kumar
  First published: