IPL

  • associate partner

ಕನ್ನಡಿಗರಿಂದಲೇ ಕೂಡಿರುವ KXIP ಲೋಗೋದಲ್ಲಿದೆ ಯಾರಿಗೂ ತಿಳಿದಿರದ ರಹಸ್ಯ: ಕೇಳಿದ್ರೆ ಶಾಕ್ ಆಗ್ತೀರಾ!

ಕಿಂಗ್ಸ್​ ಇಲೆವೆನ್ ತಂಡದ ಬಗ್ಗೆ ಅನೇಕರಿಗೆ ತಿಳಿದಿರದ ಅಂಶವೊಂದಿದೆ. KXIP ಎಂದರೆ ಇದು ಕೇವಲ ಪಂಜಾಬ್ ರಾಜ್ಯದ ತಂಡ ಎಂದು ಅನೇಕರು ಗ್ರಹಿಸಿರುವುದು. ಆದರೆ, ಈ ತಂಡ ಐದು ರಾಜ್ಯಗಳನ್ನು ಪ್ರತಿನಿಧಿಸುತ್ತಿದೆ ಎಂದರೆ ನಂಬಲೇಬೇಕು.

news18-kannada
Updated:October 27, 2020, 8:02 PM IST
ಕನ್ನಡಿಗರಿಂದಲೇ ಕೂಡಿರುವ KXIP ಲೋಗೋದಲ್ಲಿದೆ ಯಾರಿಗೂ ತಿಳಿದಿರದ ರಹಸ್ಯ: ಕೇಳಿದ್ರೆ ಶಾಕ್ ಆಗ್ತೀರಾ!
KXIP
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬಹುತೇಕ ಕನ್ನಡಿಗರಿಂದಲೇ ಕೂಡಿರುವ ತಂಡವೆಂದರೆ ಅದು ಕಿಂಗ್ಸ್​ ಇಲೆವನ್ ಪಂಜಾಬ್. ನಾಯಕ ಕೆ. ಎಲ್ ರಾಹುಲ್, ಮುಖ್ಯ ಕೋಚ್ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಹೀಗೆ ಕನ್ನಡಿಗರ ದಂಡೇ ಪಂಜಾಬ್ ತಂಡದಲ್ಲಿದೆ. ಸದ್ಯ ಆಡಿದ 12 ಪಂದ್ಯಗಳಲ್ಲಿ 6 ಜಯ, 6 ಸೋಲಿನೊಂದಿಗೆ 12 ಅಂಕ ಕಲೆಹಾಕಿರುವ ರಾಹುಲ್ ಪಡೆ ಪ್ಲೇ ಆಫ್ ಕನಸು ಕಾಣುತ್ತಿದೆ. ಹೆಚ್ಚಿನ ಕನ್ನಡಿಗರಿಗೆ ಮೆಚ್ಚಿನ ತಂಡ ಆರ್​ಸಿಬಿ ಆದರೆ, ಇನ್ನೂ ಕೆಲವರು ಕನ್ನಡಿಗರಿಂದ ಕೂಡಿರುವ ಕಿಂಗ್ಸ್​ ಇಲೆವೆನ್ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ, ಅನೇಕರಿಗೆ ಪಂಜಾಬ್ ಲೋಗೋದಲ್ಲಿರುವ ರಹಸ್ಯದ ಬಗ್ಗೆ ತಿಳಿದಿಲ್ಲ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ಈ ಬಾರಿ ಐಪಿಎಲ್ ಟೂರ್ನಿಯ ಮೊದಲ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯ ಪಾತಾಳ ತಲುಪಿದ್ದ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡ ಇದೀಗ ಅಚ್ಚರಿ ಎಂಬಂತೆ ಸತತ 5 ಪಂದ್ಯಗಳನ್ನು ಗೆದ್ದು 4ನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ಸ್‌ ಸ್ಥಾನ ಖಾತ್ರಿ ಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

SRH vs DC, IPL 2020 Live Score:

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಬಂದ ಮೇಲಂತು ಪಂಜಾಬ್ ಬ್ಯಾಟಿಂಗ್ ಶಕ್ತಿ ಇನ್ನಷ್ಟು ಬಲಿಷ್ಠವಾಗಿದೆ. ರಾಹುಲ್ ಭರ್ಜರಿ ಫಾರ್ಮ್​ನಲ್ಲಿದ್ದು ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಬೌಲರ್​ಗಳು ಸಹ ಫಾರ್ಮ್​ಗೆ ಬಂದಿದ್ದು ಪ್ರಶಸ್ತಿ ಗೆಲ್ಲುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

ಆದರೆ, ಕಿಂಗ್ಸ್​ ಇಲೆವೆನ್ ತಂಡದ ಬಗ್ಗೆ ಅನೇಕರಿಗೆ ತಿಳಿದಿರದ ಅಂಶವೊಂದಿದೆ. KXIP ಎಂದರೆ ಇದು ಕೇವಲ ಪಂಜಾಬ್ ರಾಜ್ಯದ ತಂಡ ಎಂದು ಅನೇಕರು ಗ್ರಹಿಸಿರುವುದು. ಆದರೆ, ಈ ತಂಡ ಐದು ರಾಜ್ಯಗಳನ್ನು ಪ್ರತಿನಿಧಿಸುತ್ತಿದೆ ಎಂದರೆ ನಂಬಲೇಬೇಕು. ಹೌದು, ಇದನ್ನು ಸ್ವತಃ ಪಂಜಾಬ್ ತನ್ನ ಲೋಗೋದಲ್ಲಿ ಬರೆದುಕೊಂಡಿದೆ. ಆದರೆ, ಅನೇಕರು ಈ ವಿಷಯವನ್ನು ಗಮನಿಸಿಲ್ಲವಷ್ಟೆ.

ಪಂಜಾಬ್ ಲೋಗೋ ಮೇಲೆ “K.J.H.P.H” ಎಂದು ಬರೆಯಲಾಗಿದೆ. ಇದರ ಅರ್ಥ ಕಾಶ್ಮೀರ, ಜಮ್ಮು, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ. ಹೀಗೆ ಒಟ್ಟು 5 ರಾಜ್ಯಗಳನ್ನು ಕಿಂಗ್ಸ್​ ಇಲೆವೆನ್ ತಂಡ ಪ್ರತಿನಿಧಿಸುತ್ತಿದೆ.

ಟೂರ್ನಿಯ ಆರಂಭದಲ್ಲಿ ಸೋಲುಗಳಿಂದ ಕಂಗೆಟ್ಟಿದ್ದ ಪಂಜಾಬ್ ಸದ್ಯ ಸತತ 5 ಜಯದೊಂದಿಗೆ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ಜೊತೆಗೆ ನಾವು ಪ್ಲೇ ಆಫ್ ಪ್ರವೇಶಿಸಿ ಕಪ್ ಗೆಲ್ಲುತ್ತೇವೆ ಎಂದು ನಾಯಕ ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.Varun Chakravarthy: ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ವರುಣ್ ಚಕ್ರವರ್ತಿ

ಅಲ್ಲದೆ 'ಕಿಂಗ್ಸ್ ಇಲೆವೆನ್ ತಂಡದ ಯಶಸ್ಸಿನಲ್ಲಿ ಅನಿಲ್ ಕುಂಬ್ಳೆ ಪಾತ್ರವನ್ನೂ ಮರೆಯದಿರಿ. ಅವರು ವೃತ್ತಿಜೀವನದುದ್ದಕ್ಕೂ ಹೋರಾಟ ಮನೋಭಾವ ಹೊಂದಿದ್ದರು. ಈಗ ಅದೇ ಹೋರಾಟ ಮನೋಭಾವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲೂ ಕಾಣಿಸುತ್ತಿದೆ' ಎಂದು ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಮೆಚ್ಚುಗೆಯ ಮಾತನ್ನಾಡಿದ್ದಾರೆ.
Published by: Vinay Bhat
First published: October 27, 2020, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading