IPL 2021- ಈ ಕನ್ನಡಿಗನಿಂದ 2-3 ಶತಕ: ಈ ಬಾರಿಯ ಐಪಿಎಲ್​ನಲ್ಲಿ ಗೌತಮ್ ಗಂಭೀರ್ ಭವಿಷ್ಯ

Gautam Gambhir’s expectation in IPL 14- ಒಂದು ಋತುವಿನಲ್ಲಿ ಈತ ಸುಲಭವಾಗಿ 2-3 ಶತಕ ಭಾರಿಸಬಲ್ಲ. ಈ ಬಾರಿಯೇ ಆ ಸಾಧನೆ ಬರಬಹುದು ಎಂದು ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಈ ಆಟಗಾರನ ಬಗ್ಗೆ ಗೌತಮ್ ಗಂಭೀರ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ

ಪಂಜಾಬ್ ಕಿಂಗ್ಸ್ ತಂಡ

  • News18
  • Last Updated :
  • Share this:
    ಬೆಂಗಳೂರು: ಈ ಬಾರಿಯ ಐಪಿಎಲ್ ಕ್ರಿಕೆಟ್ ಟೂರ್ನಿಯ ಎರಡನೇ ಲೆಗ್ ಆಟ ಆರಂಭಕ್ಕೆ ಕೆಲವೇ ದಿನ ಬಾಕಿ ಇದೆ. ವಿವಿಧ ತಂಡಗಳಲ್ಲಿರುವ ಆಟಗಾರರ ಫಾರ್ಮ್ ಇತ್ಯಾದಿ ವಿಶ್ಲೇಷಣೆಗಳು ನಡೆಯುತ್ತಿವೆ. ಭಾರತ ತಂಡದ ಮಾಜಿ ಕ್ಯಾಪ್ಟನ್ ಗೌತಮ್ ಗಂಭೀರ್ ಅವರು ಈ ಬಾರಿಯ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಅವರಿಂದ ಕೆಲ ಅಮೋಘ ಬ್ಯಾಟಿಂಗ್ ಪ್ರದರ್ಶನ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರಿಂದ ಇನ್ನೂ ಹೆಚ್ಚು ಉನ್ನತ ಸಾಧನೆ ಬರಬೇಕಿದೆ. 2016ರಲ್ಲಿ ವಿರಾಟ್ ಕೊಹ್ಲಿ ತೋರಿದ ರೀತಿ ಈ ಬಾರಿ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ‘ಗೇಮ್ ಪ್ಲಾನ್’ ಶೋನಲ್ಲಿ ಮಾತನಾಡುತ್ತಿದ್ದ ಗೌರವ್ ಗಂಭೀರ್, ಚುಟುಕು ಕ್ರಿಕೆಟ್​ನಲ್ಲಿ ಒಂದು ಋತುವಿನಲ್ಲಿ ಕೆಎಲ್ ರಾಹುಲ್ 2-3 ಶತಕಗಳನ್ನ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿ ಅದು ಸಾಧ್ಯ ಆಗಬಹುದು ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

    “ಕೆಎಲ್ ರಾಹುಲ್ ಅವರಿಂದ ಇನ್ನೂ ಅತ್ಯುತ್ತಮ ಪ್ರದರ್ಶನ ಬಂದಿಲ್ಲ. ಅವರು ಸಾಕಷ್ಟು ರನ್ ಗಳಿಸಿರುವುದು ಹೌದು. ಆದರೆ ಅವರ ಅತ್ಯುತ್ತಮ ಆಟದ ಪ್ರತಿಫಲ ಸಂಪೂರ್ಣವಾಗಿ ಬಂದಿಲ್ಲ. ವಿರಾಟ್ ಕೊಹ್ಲಿ ಒಮ್ಮೆ ತೋರಿದ ರೀತಿಯ ಪ್ರದರ್ಶನವನ್ನು ಅವರಿಂದ ನಿರೀಕ್ಷಿಸಬಹುದು. ಚುಟುಕು ಕ್ರಿಕೆಟ್​ನಲ್ಲಿ ಒಂದು ಋತುವಿನಲ್ಲಿ 2-3 ಶತಕಗಳನ್ನ ಅವರು ಒಳ್ಳೆಯ ಸ್ಟ್ರೈಕ್ ರೇಟ್​ನಲ್ಲೇ ಗಳಿಸಬಲ್ಲರು. ಈ ಬಾರಿ ಅದು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದೇನೆ. ದುಸ್ತರ ಸ್ಥಿತಿಯಲ್ಲಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಅದು ಅತ್ಯಗತ್ಯವೂ ಆಗಿದೆ” ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

    “ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡ ಗ್ಲೆನ್ ಮ್ಯಾಕ್ಸ್​ವೆಲ್ ಮೇಲೆ ಭಾರೀ ಭರವಸೆ ಇರಿಸಿಕೊಂಡಿತ್ತು. ಆದರೆ ಅವರಿಂದ ಆ ಆಟ ಬರಲಿಲ್ಲ. ಈ ಬಾರಿ ನಿಕೊಲಾಸ್ ಪೂರನ್ ಅವರೂ ನಿರೀಕ್ಷಿತ ಆಟ ತೋರಿಲ್ಲ. ಅಂತರರಾಷ್ಟ್ರೀಯ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರದಿದ್ದಾಗ ಅದು ತಂಡದ ನಾಯಕನ ಮೇಲೆ ಒತ್ತಡ ಬೀರುತ್ತದೆ” ಎಂದು ಕೆ ಎಲ್ ರಾಹುಲ್ ಬಗ್ಗೆ ಗೌತಮ್ ಗಂಭೀರ್ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.

    ಒಳ್ಳೆಯ ಫಾರ್ಮ್​ನಲ್ಲಿ ಕೆ ಎಲ್ ರಾಹುಲ್: 

    ಕೆಎಲ್ ರಾಹುಲ್ ಅವರು ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೋವಿಡ್ ಕಾರಣಕ್ಕೆ ಮುಂದೂಡಿಕೆ ಆಗುವ ಮುನ್ನ ನಡೆದಿದ್ದ ಐಪಿಎಲ್ ಪಂದ್ಯಗಳಲ್ಲಿ ಅವರು 331 ರನ್ ಗಳಿಸಿದ್ದಾರೆ. ನಾಲ್ಕು ಅರ್ಧಶತಕಗಳನ್ನ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 136 ಇದೆ. 66 ಸರಾಸರಿಯಲ್ಲಿ ರನ್ ಗಳಿಸಿದ್ಧಾರೆ. ಸದ್ಯ ಐಪಿಎಲ್-14 ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟುಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. 380 ರನ್ ಗಳಿಸಿದ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: Novak Djokovic- ಹತಾಶೆ, ಕ್ಷಮೆ, ಅಭಿನಂದನೆ- ಇತಿಹಾಸದ ಹೊಸ್ತಿಲಲ್ಲಿ ಚಾಂಪಿಯನ್ ಆಟಗಾರ ಎಡವಿದ ಕ್ಷಣಗಳು

    ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಕೆಎಲ್ ರಾಹುಲ್ 39.38 ಸರಾಸರಿಯಲ್ಲ 315 ರನ್ ಗಳಿಸಿದ್ದಾರೆ. ನಿರೀಕ್ಷಿಸಿದಷ್ಟು ರನ್ ಗಳಿಸದೇ ಇದ್ದರೂ ಅವರ ಬ್ಯಾಟಿಂಗ್ ಲಯ ಸಾಕಷ್ಟು ಭರವಸೆ ಮೂಡಿಸಿದೆ. ಅವರು ಇದೇ ಫಾರ್ಮ್ ಅನ್ನು ಐಪಿಎಲ್​ನಲ್ಲಿ ಮುಂದುವರಿಸಿದರೆ ಗೌತಮ್ ಗಂಭೀರ್ ನುಡಿದ ಭವಿಷ್ಯ ನಿಜವಾದರೂ ಆಗಬಹುದು.

    ಎಂಟು ಪಂದ್ಯಗಳಿಂದ ಕೇವಲ 6 ಅಂಕ ಗಳಿಸಿ ಆರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ತನ್ನ ನಾಯಕ ಇನ್ನೂ ಅಸಾಧಾರಣ ಪ್ರದರ್ಶನದ ತುರ್ತು ಅಗತ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳು 10 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಆರ್​ಸಿಬಿ ತಂಡ ಈ ಬಾರಿ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಕಾಣಿಸುತ್ತಿದೆ.
    Published by:Vijayasarthy SN
    First published: