news18-kannada Updated:November 1, 2020, 9:16 PM IST
ಇಯಾನ್ ಮೋರ್ಗನ್
IPLನ 54ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ಗೆ 192 ರನ್ಗಳ ಟಾರ್ಗೆಟ್ ನೀಡಿದೆ. ನಾಯಕ ಇಯಾನ್ ಮೋರ್ಗನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಕಪ್ತಾನನ ನಿರ್ಧಾರವನ್ನು ಸಮರ್ಥಿಸುವಂತೆ ಮೊದಲ ಓವರ್ನಲ್ಲೇ ನಿತೇಶ್ ರಾಣಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್ ಕಡೆ ಕಳುಹಿಸಿದ ಜೋಫ್ರಾ ಆರ್ಚರ್ ರಾಜಸ್ಥಾನ್ಗೆ ಮೊದಲ ಯಶಸ್ಸು ತಂದುಕೊಟ್ಟರು.
ಆದರೆ ಮೊದಲ ಓವರ್ನಲ್ಲೇ ಮೊದಲ ವಿಕೆಟ್ ಪತನವಾದರೂ, ಕೆಕೆಆರ್ ಬ್ಯಾಟ್ಸ್ಮನ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಆರ್ಚರ್ ಓವರ್ನ್ನು ಹೊರತುಪಡಿಸಿ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಇತರೆ ಬೌಲರುಗಳನ್ನು ದಂಡಿಸಿದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 55 ಕ್ಕೆ ಬಂದು ನಿಂತಿತು.
ತಂಡದ ಮೊತ್ತ 73 ಆಗಿದ್ದ ವೇಳೆ ರಾಹುಲ್ ತೆವಾಠಿಯಾ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಶುಭ್ಮನ್ ಗಿಲ್ (36) ಬಟ್ಲರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಸುನೀಲ್ ನರೈನ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. 39 ರನ್ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ ತ್ರಿಪಾಠಿ (39) ಉತ್ತಪ್ಪ ಹಿಡಿದ ಉತ್ತಮ ಕ್ಯಾಚ್ಗೆ ನಿರ್ಗಮಿಸಲೇಬೇಕಾಯಿತು. ಬಳಿಕ ಬಂದ ದಿನೇಶ್ ಕಾರ್ತಿಕ್ (0) ಬಂದ ವೇಗದಲ್ಲೇ ಹಿಂತಿರುಗಿದರು.
ಈ ಹಂತದಲ್ಲಿ ಜೊತೆಗೂಡಿದ ಇಯಾನ್ ಮೋರ್ಗನ್ ಹಾಗೂ ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ರಸೆಲ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳ ಮೂಲಕ ರಂಜಿಸಿದರು. ಕೇವಲ 11 ಎಸೆತಗಳಲ್ಲಿ 25 ರನ್ ಬಾರಿಸಿದ ರಸೆಲ್ ತ್ಯಾಗಿ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು.
ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ನಾಯಕ ಮೋರ್ಗನ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕಮಿನ್ಸ್ ಜೊತೆಗೂಡಿ ಬೆನ್ ಸ್ಟೋಕ್ಸ್ ಎಸೆದ 19ನೇ ಓವರ್ನಲ್ಲಿ 23 ರನ್ ಕಲೆಹಾಕಿದರು. ಇನ್ನು ಕೊನೆಯ ಓವರ್ನಲ್ಲಿ 9 ರನ್ ಕಲೆಹಾಕಿದ ಮೋರ್ಗನ್ ತಂಡದ ಮೊತ್ತವನ್ನು 191 ಕ್ಕೆ ತಂದು ನಿಲ್ಲಿಸಿದರು.
ಕೊನೆಯವರೆಗೂ ಬ್ಯಾಟ್ ಬೀಸಿದ ಕೆಕೆಆರ್ ನಾಯಕ 6 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 35 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದರು. ರಾಜಸ್ಥಾನ್ ಪರ 4 ಓವರ್ನಲ್ಲಿ 25 ರನ್ ನೀಡಿ 3 ವಿಕೆಟ್ ಉರುಳಿಸಿ ರಾಹುಲ್ ತೆವಾಠಿಯಾ ಯಶಸ್ವಿ ಬೌಲರ್ ಎನಿಸಿಕೊಂಡರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
Published by:
zahir
First published:
November 1, 2020, 9:10 PM IST