RR vs KKR, IPL 2020: ರಾಜಸ್ಥಾನ್​ಗೆ 192 ರನ್​ಗಳ ಟಾರ್ಗೆಟ್ ನೀಡಿದ ಕೊಲ್ಕತ್ತಾ

IPL 2020, Kolkata Knight Riders and Rajasthan Royals: ಐಪಿಎಲ್​ನಲ್ಲಿ ಈವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 11 ಬಾರಿ ಗೆದ್ದಿದ್ರೆ, ಆರ್​ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ.

KKR

KKR

 • Share this:
  IPLನ 54ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ‌ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಆರ್​ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಕಪ್ತಾನನ ನಿರ್ಧಾರವನ್ನು ಸಮರ್ಥಿಸುವಂತೆ ಮೊದಲ ಓವರ್​ನಲ್ಲೇ ನಿತೇಶ್ ರಾಣಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ ಕಡೆ ಕಳುಹಿಸಿದ ಜೋಫ್ರಾ ಆರ್ಚರ್ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

  ಆದರೆ ಮೊದಲ ಓವರ್​ನಲ್ಲೇ ಮೊದಲ ವಿಕೆಟ್ ಪತನವಾದರೂ, ಕೆಕೆಆರ್ ಬ್ಯಾಟ್ಸ್​ಮನ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಆರ್ಚರ್ ಓವರ್​ನ್ನು ಹೊರತುಪಡಿಸಿ ಶುಭ್​ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಇತರೆ ಬೌಲರುಗಳನ್ನು ದಂಡಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 55 ಕ್ಕೆ ಬಂದು ನಿಂತಿತು.

  ತಂಡದ ಮೊತ್ತ 73 ಆಗಿದ್ದ ವೇಳೆ ರಾಹುಲ್ ತೆವಾಠಿಯಾ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಶುಭ್​ಮನ್ ಗಿಲ್ (36) ಬಟ್ಲರ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಸುನೀಲ್ ನರೈನ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. 39 ರನ್​ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ ತ್ರಿಪಾಠಿ (39) ಉತ್ತಪ್ಪ ಹಿಡಿದ ಉತ್ತಮ ಕ್ಯಾಚ್​ಗೆ ನಿರ್ಗಮಿಸಲೇಬೇಕಾಯಿತು. ಬಳಿಕ ಬಂದ ದಿನೇಶ್ ಕಾರ್ತಿಕ್ (0) ಬಂದ ವೇಗದಲ್ಲೇ ಹಿಂತಿರುಗಿದರು.

  ಈ ಹಂತದಲ್ಲಿ ಜೊತೆಗೂಡಿದ ಇಯಾನ್ ಮೋರ್ಗನ್ ಹಾಗೂ ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ರಸೆಲ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್​ಗಳ ಮೂಲಕ ರಂಜಿಸಿದರು. ಕೇವಲ 11 ಎಸೆತಗಳಲ್ಲಿ 25 ರನ್ ಬಾರಿಸಿದ ರಸೆಲ್ ತ್ಯಾಗಿ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು.

  ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ನಾಯಕ ಮೋರ್ಗನ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕಮಿನ್ಸ್ ಜೊತೆಗೂಡಿ ಬೆನ್ ಸ್ಟೋಕ್ಸ್ ಎಸೆದ 19ನೇ ಓವರ್​ನಲ್ಲಿ 23 ರನ್ ಕಲೆಹಾಕಿದರು. ಇನ್ನು ಕೊನೆಯ ಓವರ್​ನಲ್ಲಿ 9 ರನ್ ಕಲೆಹಾಕಿದ ಮೋರ್ಗನ್ ತಂಡದ ಮೊತ್ತವನ್ನು 191 ಕ್ಕೆ ತಂದು ನಿಲ್ಲಿಸಿದರು.

  ಕೊನೆಯವರೆಗೂ ಬ್ಯಾಟ್ ಬೀಸಿದ ಕೆಕೆಆರ್ ನಾಯಕ 6 ಭರ್ಜರಿ ಸಿಕ್ಸರ್​ ಹಾಗೂ 5 ಬೌಂಡರಿಗಳೊಂದಿಗೆ 35 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದರು. ರಾಜಸ್ಥಾನ್ ಪರ 4 ಓವರ್​ನಲ್ಲಿ 25 ರನ್ ನೀಡಿ 3 ವಿಕೆಟ್ ಉರುಳಿಸಿ ರಾಹುಲ್ ತೆವಾಠಿಯಾ ಯಶಸ್ವಿ ಬೌಲರ್ ಎನಿಸಿಕೊಂಡರು.

  ಸ್ಕೋರ್: 191/7

  ಓವರ್: 20

  ರಾಜಸ್ಥಾನ ತಂಡ 13 ಪಂದ್ಯಗಳಿಂದ 12 ಅಂಕ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಕೋಲ್ಕತ್ತಾ ಕೂಡ 13 ಪಂದ್ಯಗಳಿಂದ 12 ಅಂಕ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಉತ್ತಮ ರನ್​ರೇಟ್​ನೊಂದಿಗೆ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ.  ಉಭಯ ತಂಡಗಳಿಗೂ ಇಂದು ಕೊನೆಯ ಪಂದ್ಯವಾಗಿದ್ದು, ಭರ್ಜರಿಯಾಗಿ ಗೆಲುವು ಸಾಧಿಸುವ ತಂಡವು ಪ್ಲೇ ಆಫ್ ಪ್ರವೇಶಿಸುವ ಅವಕಾಶ ಪಡೆಯಲಿದೆ. ಆದರೆ ಅದು ನೆಟ್ ರನ್ ರೇಟ್ ಆಧಾರದಲ್ಲಿ ಎಂಬುದು ವಿಶೇಷ.

  ಕೆಕೆಆರ್ ತಂಡದಲ್ಲಿ ನಿತೀಶ್ ರಾಣ, ನಾಯಕ ಮಾರ್ಗನ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್​ಗಳು ಮಿಂಚುತ್ತಿಲ್ಲ. ಅಲ್ಲದೆ ಕೆಕೆಆರ್ ಈ ಬಾರಿಯ ಐಪಿಎಲ್​ನಲ್ಲಿ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನೂ ಪಡೆದಿಲ್ಲ. ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಆರಂಭಿಕ ಆಟಗಾರರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ವರುಣ್ ಚಕ್ರವರ್ತಿ ಮಾತ್ರ ಬೌಲಿಂಗ್​ನಲ್ಲಿ ಉತ್ತಮ ಸ್ಪೆಲ್ ಮಾಡುತ್ತಿದ್ದಾರೆ. ಪ್ಯಾಟ್ ಕಮ್ಮಿನ್ಸ್​, ಲೂಕಿ ಫರ್ಗ್ಯುಸನ್​, ಕಮಲೇಶ್‌ ನಾಗರಕೋಟಿ, ಸುನೀಲ್ ನರೈನ್ ಮೇಲೆ ಹೆಚ್ಚು ನಿರೀಕ್ಷೆ ಇದೆ.

  ಅತ್ತ ಬೆನ್ ಸ್ಟೋಕ್ಸ್ ಅಬ್ಬರದೊಂದಿಗೆ ರಾಜಸ್ಥಾನ್ ರಾಯಲ್ಸ್ ಜಯದ ಲಯಕ್ಕೆ ಮರಳಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ 195, ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ 185 ರನ್​ಗಳನ್ನು ಚೇಸ್ ಮಾಡಿರುವ ಆರ್​ಆರ್ ಭರ್ಜರಿ ಬ್ಯಾಟಿಂಗ್ ಲಯದಲ್ಲಿದೆ. ಆರಂಭಿಕರಾಗಿ ಸ್ಟೋಕ್ಸ್ ಅಬ್ಬರಿಸುತ್ತಿದ್ದರೆ, ಸಂಜು ಸ್ಯಾಮ್ಸನ್, ಸ್ಮಿತ್ ಹಾಗೂ ಬಟ್ಲರ್ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್ ಮಾರಕ ಬೌಲಿಂಗ್ ಮುಂದುವರೆಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ​​ ತಂಡ ಪ್ರಕಟ
  Published by:zahir
  First published: