HOME » NEWS » Ipl » KKR VS RCB IPL MATCH POSTPONED AFTER 2 PLAYERS CONFIRMED COVID POSITIVE SNVS

IPL - ಸ್ಕ್ಯಾನ್ ಮಾಡಿಸಲು ಹೊರಹೋದವರಿಗೆ ಕೋವಿಡ್ ಸೋಂಕು; ಇವತ್ತಿನ ಆರ್​ಸಿಬಿ ಪಂದ್ಯ ಮುಂದೂಡಿಕೆ

ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ, ಆರ್​ಸಿಬಿ ಜೊತೆ ಕೆಕೆಆರ್ ಆಡಬೇಕಿದ್ದ ಇವತ್ತಿನ ಪಂದ್ಯವನ್ನ ಮುಂದೂಡಲಾಗಿದೆ.

cricketnext
Updated:May 3, 2021, 1:43 PM IST
IPL - ಸ್ಕ್ಯಾನ್ ಮಾಡಿಸಲು ಹೊರಹೋದವರಿಗೆ ಕೋವಿಡ್ ಸೋಂಕು; ಇವತ್ತಿನ ಆರ್​ಸಿಬಿ ಪಂದ್ಯ ಮುಂದೂಡಿಕೆ
ವರುಣ್ ಚಕ್ರವರ್ತಿ
  • Share this:
ಅಹ್ಮದಾಬಾದ್(ಮೇ 03): ಸ್ವಲ್ಪ ಯಾಮಾರಿದೂ ಕೋವಿಡ್ ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಐಪಿಎಲ್ ಸಾಕ್ಷಿಯಾಗಿದೆ. ಕೋವಿಡ್ ಸೋಂಕು ಸುಳಿಯದ ರೀತಿಯಲ್ಲಿ ಐಪಿಎಲ್ ಟೂರ್ನಿಗೆ ಬಯೋಬಬಲ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಆಟಗಾರರು ಮತ್ತು ಐಪಿಎಲ್ ಸಿಬ್ಬಂದಿ ಎಲ್ಲರಿಗೂ ಹೊರಗಿನ ವಾತಾವರಣ ಸೋಂಕದ ರೀತಿ ಬಯೋಬಬಲ್ ರೂಪಿಸಲಾಗಿದೆ. ಪ್ರತಿಯೊಬ್ಬ ಆಟಗಾರರಿಗೂ ನಿಯಮಿತವಾಗಿ ಕೋವಿಡ್ ಪರೀಕ್ಷೆಗಳನ್ನ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್​ಗಳಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದೀಗ ಐಪಿಎಲ್ ಮೇಲೆ ಕರಿಛಾಮೆ ಮುಸುಕಿದಂತಾಗಿದೆ. ಇವರಿಬ್ಬರಿಗೆ ಸೋಂಕು ದೃಢಪಡುತ್ತಿದ್ದಂತೆಯೇ ಇವತ್ತು ನಿಗದಿಯಾಗಿದ್ದ ಕೆಕೆಆರ್ ಮತ್ತು ಆರ್​ಸಿಬಿ ಐಪಿಎಲ್ ಪಂದ್ಯವನ್ನ ಮುಂದೂಡಿಕೆ ಮಾಡಲಾಗಿದೆ.

ಐಪಿಎಲ್ ಕೂಡ ಈ ಬೆಳವಣಿಗೆಯನ್ನ ಖಚಿತಪಡಿಸಿದೆ ಎಂದು ಮೂಲಗಳು ಹೇಳಿವೆ. ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಬ್ಬರಿಗೆ ಸೋಂಕು ಹೇಗೆ ತಗುಲಿತು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಗಾಯಗೊಂಡಿದ್ದ ವರುಣ್ ಚಕ್ರವರ್ತಿ ಇತ್ತೀಚೆಗಷ್ಟೇ ಸಕಲ ಮುಂಜಾಗ್ರತೆಯಿಂದಲೇ ಐಪಿಎಲ್ ಬಯೋಬಬಲ್ ವ್ಯವಸ್ಥೆಯಿಂದ ಹೊರಬಂದು ಹೊರಗೆ ತಮ್ಮ ಭುಜದ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದರು. ಅಲ್ಲಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ವರುಣ್ ಮೂಲಕ ಸಂದೀಪ್ ವಾರಿಯರ್​ಗೂ ಸೋಂಕು ತಗುಲಿರಬಹುದು ಎಂದು ಸಂದೇಹಿಸಲಾಗಿದೆ.

ಇದನ್ನೂ ಓದಿ: Mamata vs Modi - 2024ರ ಚುನಾವಣೆಯಲ್ಲಿ ಮೋದಿ ಎದುರಿಸಲು ವಿಪಕ್ಷಗಳ ಏಕೈಕ ಆಶಾಕಿರಣ ದೀದಿ

ಕೋಲ್ಕತಾ ನೈಟ್ ರೈಡರ್ಸ್​ನ ಎಲ್ಲಾ ಆಟಗಾರರಿಗೂ ಪರೀಕ್ಷೆ ಮಾಡಲಾಗಿದೆ. ಇವರಿಬ್ಬರು ಬಿಟ್ಟರೆ ಬೇರಾರಿಗೂ ಸೋಂಕು ಖಚಿತವಾಗಿಲ್ಲ. ಈಗ ದಿನವು ಪರೀಕ್ಷೆ ನಡೆಸಲು ಕೆಕೆಆರ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಪರೀಕ್ಷೆ ನಡೆಸಿದ ಎರಡು ದಿನಗಳಿಗೆ ಮುನ್ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರು ಯಾರಾರೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದನ್ನು ವೈದ್ಯಕೀಯ ತಂಡ ಗೊತ್ತು ಮಾಡುತ್ತಿದೆ.

ಇದೀಗ ಮುಂದೂಡಿಕೆಯಾಗಿರುವ ಈ ಪಂದ್ಯ ಯಾವಾಗ ನಡೆಯುತ್ತದೆ ಎಂಬುದು ಗೊತ್ತಾಗಿಲ್ಲ. ಕೆಕೆಆರ್ ತಂಡದ ಉಳಿದೆಲ್ಲಾ ಆಟಗಾರರು ಸುರಕ್ಷಿವಾಗಿರುವುದು ಖಚಿತವಾದ ಬಳಿಕವಷ್ಟೇ ಪಂದ್ಯ ನಿಗದಿಯಾಗುವ ಸಾಧ್ಯತೆ ಇದೆ. ಸದ್ಯ ಕೋಲ್ಕತಾ ನೈಟ್ ರೈಡರ್ಸ್ ತಂಡ ಏಳು ಪಂದ್ಯಗಳಲ್ಲಿ ಗೆದ್ದಿರುವುದು ಎರಡನ್ನೇ. ನಾಲ್ಕು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಆರ್​ಸಿಬಿ ತಂಡ ಐದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
Published by: Vijayasarthy SN
First published: May 3, 2021, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories