IPL

  • associate partner
HOME » NEWS » Ipl » KKR VS MI PREVIEW ROHIT SHARMA AND DINESH KARTHIK TO FACE EACH OTHER TODAY RMD

KKR vs MI Preview: ಕೋಲ್ಕತ್ತಾ ವಿರುದ್ಧ ಮುಂಬೈ ಸೋತಿದ್ದೇ ಹೆಚ್ಚು; ಏನಾಗಲಿದೆ ಇಂದಿನ ಪಂದ್ಯ?

Dream11 IPL 2020: ಕೆಕೆಆರ್​ನಲ್ಲಿ ಶುಭಮಾನ್​ ಗಿಲ್​ ಜೊತೆ ಸುನೀಲ್​ ನಾರಾಯಣ್​ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆಲ್​ರೌಂಡರ್​ ಆಗಿ ರಾಹುಲ್​ ತ್ರಿಪಾಠಿ ಅಥವಾ ರಿಂಕು ಸಿಂಗ್​ ಪಂದ್ಯವನ್ನಾಡಬಹುದು. ಮುಂಬೈ ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕೆ ಇಳಿಯಲಿದೆ.

news18-kannada
Updated:September 23, 2020, 10:36 AM IST
KKR vs MI Preview: ಕೋಲ್ಕತ್ತಾ ವಿರುದ್ಧ ಮುಂಬೈ ಸೋತಿದ್ದೇ ಹೆಚ್ಚು; ಏನಾಗಲಿದೆ ಇಂದಿನ ಪಂದ್ಯ?
KKR
  • Share this:
ಅಬುಧಾಬಿಯ ಶೇಖ್​ ಜಯೇದ್​ ಮೈದಾನದಲ್ಲಿ ಐಪಿಎಲ್​ನಲ್ಲಿ ಎರಡು ಬಾರಿ ಚಾಂಪಿಯನ್ಸ್​ ಆಗಿರುವ ಕೋಲ್ಕತ್ತಾ ನೈಟ್​ ರೈಡರ್ಸ್​, ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಕೆಕೆಆರ್​ಗೆ 13ನೇ ಆವೃತ್ತಿಯಲ್ಲಿ ಇದು ಮೊದಲ ಪಂದ್ಯವಾಗಿದ್ದು, ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಇನ್ನು, ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ಪಡೆ ಸಿಎಸ್​ಕೆ ವಿರುದ್ಧ ಮೊದಲ ಪಂದ್ಯ ಸೋತಿತ್ತು. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆದ್ದು ಬೀಗುವ ನಿರೀಕ್ಷೆಯಲ್ಲಿದೆ. ದಿನೇಶ್​ ಕಾರ್ತಿಕ್​ ನೇತೃತ್ವದ ಕೆಕೆಆರ್​ ಈಗಾಗಲೇ ಬಲಿಷ್ಠ ತಂಡಗಳ ಸಾಲಿಗೆ ಸೇರಿದೆ.  ಮುಂಬೈ ಇಂಡಿಯನ್ಸ್​ ಹಾಗೂ ಕೆಕೆಆರ್​ 12 ಆವೃತ್ತಿಗಳಲ್ಲಿ 25 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ ಮುಂಬೈ ಇಂಡಿಯನ್ಸ್​ ಗೆದ್ದಿದ್ದು ಕೇವಲ 9 ಪಂದ್ಯಗಳಲ್ಲಿ. ಆದರೆ, ಕೆಕೆಆರ್​ ಬರೋಬ್ಬರಿ 19 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹೀಗಾಗಿ, ಮುಂಬೈ ವಿರುದ್ಧ ಗೆಲುವಿನ ದಾಖಲೆ ಹೊಂದಿರುವ ದಿನೇಶ್​ ಕಾರ್ತಿಕ್​ ಪಡೆ ಇಂದು ಕೂಡ ಗೆಲುವಿನ ಕಾಥೆ ತೆಗೆಯುವ ತವಕದಲ್ಲಿದೆ.

ಕೆಕೆಆರ್​ನಲ್ಲಿ ಶುಭಮಾನ್​ ಗಿಲ್​ ಜೊತೆ ಸುನೀಲ್​ ನಾರಾಯಣ್​ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆಲ್​ರೌಂಡರ್​ ಆಗಿ ರಾಹುಲ್​ ತ್ರಿಪಾಠಿ ಅಥವಾ ರಿಂಕು ಸಿಂಗ್​ ಪಂದ್ಯವನ್ನಾಡಬಹುದು. ಕನ್ನಡಿಗ ಪ್ರಸಿದ್ಧ ಕೃಷ್ಣ, ಕಮಲೇಶ್​ ನಾಗರಕೋಟಿ ಹಾಗೂ ಶಿವಂ ಮಾವಿ ಈ ಮೂವರಲ್ಲಿ ಇಬ್ಬರು ವೇಗಿಗಳು ಬಾಲ್​ ಹಾಕಲಿದ್ದಾರೆ. ವಿದೇಶಿ ಆಗಟರಾರಲ್ಲಿ ರಸೇಲ್​, ಸುನೀಲ್​ ನಾರಾಯಣ್, ಮಾರ್ಗನ್​ ಆಯ್ಕೆ ಖಚಿತವಾಗಿದ್ದು, ಮತ್ತೊಂದು ಸ್ಥಾನಕ್ಕೆ ಪ್ಯಾಟ್​ ಕಮ್ಮಿನ್ಸ್​ ಅಥವಾ ಟಾಮ್​ ಬಾಂಟಮ್​ ಕಣಕ್ಕೆ ಇಳಿಬಹುದು. ಮುಂಬೈ ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕೆ ಇಳಿಯಲಿದೆ.

ಕೆಕೆಆರ್​ ಸಂಭಾವ್ಯ ತಂಡ: ಶುಭಮಾನ್​ ಗಿಲ್​, ಸುನೀಲ್​ ನಾರಾಯಣ್​, ನಿತೇಶ್​ ರಾಣಾ, ದಿನೇಶ್​ ಕಾರ್ತಿಕ್​ (ನಾಯಕ, ವಿಕೀ), ಇವೊಯಿನ್ ಮಾರ್ಗನ್​, ಆಂಡ್ರೆ ರಸೆಲ್​, ರಿಂಕು ಸಿಂಗ್​/ ರಾಹುಲ್​ ತ್ರಿಪಾಠಿ, ಪ್ಯಾಟ್​ ಕಮ್ಮಿನ್ಸ್​, ಕುಲದೀಪ್​ ಯಾದವ್​, ಕಮಲೇಶ್​ ನಾಗರಕೋಟಿ/ಶಿವಂ ಮಾವಿ, ಪ್ರಸಿದ್ಧ ಕೃಷ್ಣ.ಮುಂಬೈ ಇಂಡಿಯನ್ಸ್: ರೋಹಿತ್​ ಶರ್ಮಾ (ನಾಯಕ), ಕ್ವಿಂಟನ್​ ಡಿಕಾಕ್, ಸೂರ್ಯಕುಮಾರ್, ಸೌರಭ್​ ತಿವಾರಿ/ಇಶಾನ್​ ಕಿಶನ್​, ಹಾರ್ದಿಕ್​ ಪಾಂಡ್ಯ, ಕಥರಾನ್​ ಪೊಲ್ಲಾರ್ಡ್​, ಕೃನಾ​ಲ್​ ಪಾಂಡ್ಯ, ಜೇಮ್ಸ್​ ಪ್ಯಾಟಿನ್​ಸನ್​, ರಾಹುಲ್​ ಚಹರ್​, ಟ್ರೆಂಟ್​ ಬೌಟ್​/ನಥಾನ್​ ಕಾಲ್ಟರ್​, ಜಸ್​ ಪ್ರೀತ್​ ಬುಮ್ರಾ.
Published by: Rajesh Duggumane
First published: September 23, 2020, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories