ಅಬುಧಾಬಿಯ ಶೇಖ್ ಝಯಾದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 5ನೇ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 49 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದಲ್ಲದೆ, ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕದಿಂದ 20 ಓವರ್ನಲ್ಲಿ 195 ರನ್ ಗಳಿಸಿತು.
ಮುಂಬೈ ನೀಡಿರುವ ಕಠಿಣ ಗುರಿ ಬೆನ್ನಟ್ಟಿರುವ ಕೋಲ್ಕತಾ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್ ಶುಭ್ಮನ್ ಗಿಲ್ ಕೇವಲ 7 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸುನೀಲ್ ನರೈನ್ 10 ಬಾಲ್ಗೆ 9 ರನ್ ಬಾರಿಸಿ ಔಟ್ ಆದರು. ನಾಯಕ ದಿನೇಶ್ ಕಾರ್ತಿಕ್ ತಂಡದ ಮೊತ್ತವನ್ನು ಸೇರಿಸಲು ಪ್ರಯತ್ನಪಟ್ಟರಾದರು ರಾಹುಲ್ ಚಾಹರ್ ಎಸೆದ ಚೆಂಡಿಗೆ ಎಲ್ಬಿಡಬ್ಲ್ಯು ಆಗಿ ಔಟ್ ಆದರು.
ನಂತರ ಬಂದ ನಿತೀಶ್ ರಾಣಾ ಮೇಲೆ ತಂಡದ ನಿರೀಕ್ಷೆ ಇತ್ತಾದರು ಪೊಲಾರ್ಡ್ ಎಸೆದ ಚೆಂಡಿಗೆ ಬ್ಯಾಟ್ ಬೀಸಲು ಹೋದರು. ಪರಿಣಾಮ ಹಾರ್ದಿಕ್ ಪಾಂಡ್ಯ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನು ರಸೆಲ್ (11) ಮತ್ತು ಮಾರ್ಗನ್ (16) ಕೂಡ ಬ್ರೂಮಾ ಎಸೆದ ಬಾಲ್ಗೆ ವಿಕೆಟ್ ಒಪ್ಪಿಸಿದರು.
ಪ್ಯಾಟ್ ಕಮಿನ್ಸ್ ಮತ್ತು ನಿಖಿಲ್ ನಾಯಕ್ ಕ್ರೀಸ್ ಕ್ರೀಸ್ನಲ್ಲಿ ಹೋರಾಟ ನಡೆಸಿದರು. ಆದರೆ ಟ್ರೆಂಟ್ ಬೌಲ್ಟ್ ಎಸೆದ ಚೆಂಡಿಗೆ ಬ್ಯಾಡ್ ಬೀಸಿ ಹಾರ್ದಿಕ್ ಪಾಂಡ್ಯ ಕೈಗೆ ಕ್ಯಾಚ್ ನೀಡಿದರು. ಪ್ಯಾಟ್ ಕಮಿನ್ಸ್ (33) ಕೂಡ ಹಾರ್ದಿಕ್ ಕೈಗೆ ಕ್ಯಾಚ್ ನೀಡಿ ಔಟ್ ಆದರು.
ಶಿವಂ ಮಾಮಿ ಮತ್ತು ಕುಲದೀಪ್ ಯಾದವ್ ಮುಂದೆ ಬಹೃತ್ ಮೊತ್ತ ಟಾರ್ಗೆಟ್ ಇತ್ತಾದರು. ರನ್ಗಳನ್ನು ಸೇರಿದಲು ವಿಫಲವಾದರು. ಕೊನೆಗೆ ಮುಂಬೈ ತಂಡ 49 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇನ್ನು ಬೂಮ್ರಾ, ಬೋಲ್ಟ್, ಪ್ಯಾಟಿಸನ್ ಎರಡೆರಡು ವಿಕೆಟ್ ಕಿತ್ತರೆ. ಪೊಲಾರ್ಡ್ 1 ವಿಕೆಟ್ ತಮ್ಮದಾಗಿಸಿಕೊಂಡರುಪ್ರಾರಂಭದಲ್ಲಿ ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ (1) ಶಿವಂ ಮಾವಿ ಅವರ 2ನೇ ಓವರ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು.
ಇದರ ಬೆನ್ನಲ್ಲೇ ಕ್ರೀಸ್ಗಿಳಿದ ಸೂರ್ಯಕುಮಾರ್ ಯಾದವ್ ಮೂರನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸುವ ಮೂಲಕ 16 ರನ್ ಕಲೆಹಾಕಿದರು. ಅಲ್ಲದೆ ನಾಯಕನ ಜೊತೆಗೂಡಿ 27 ಎಸೆತಗಳಲ್ಲಿ 50 ರನ್ಗಳ ಸ್ಪೋಟಕ ಜೊತೆಯಾಟವಾಡಿದರು. ಪರಿಣಾಮ ಪವರ್ಪ್ಲೇ ನಲ್ಲಿ ಮುಂಬೈ ಇಂಡಿಯನ್ಸ್ 59 ರನ್ ಗಳಿಸುವಂತಾಯಿತು.
ಒಂದೆಡೆ ಸೂರ್ಯಕುಮಾರ್ ಅಬ್ಬರಿಸುತ್ತಿದ್ರೆ ಮತ್ತೊಂದೆಡೆ ರೋಹಿತ್ ಶರ್ಮಾ ಕೂಡ ಉತ್ತಮ ಸಾಥ್ ನೀಡಿದರು. 4 ಭರ್ಜರಿ ಸಿಕ್ಸರ್ ಸಿಡಿಸಿ ಕೆಕೆಆರ್ ಬೌಲರುಗಳ ಬೆಂಡೆತ್ತಿದರು. ಆದರೆ 28 ಎಸೆತಗಳಲ್ಲಿ 48 ರನ್ಗಳಿಸಿದ ಸೂರ್ಯಕುಮಾರ್ ಯಾದವ್ ರನೌಟ್ ಆಗುವ ಮೂಲಕ ಅರ್ಧಶತಕ ತಪ್ಪಿಸಿಕೊಂಡರು. ಇನ್ನೊಂದೆಡೆ 39 ಎಸೆತಗಳಲ್ಲಿ ಎದುರಿಸಿ ಹಿಟ್ಮ್ಯಾನ್ ತಮ್ಮ ಅರ್ಧಶತಕ ಪೂರೈಸಿದರು.
ಹಾಫ್ ಸೆಂಚುರಿ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಎಸೆದ 14ನೇ ಓವರ್ನಲ್ಲಿ 2 ಭರ್ಜರಿ ಸಿಕ್ಸರ್ ಸಿಡಿಸಿ ಐಪಿಎಲ್ನಲ್ಲಿ 200 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ಎಂಟ್ರಿ ಕೊಟ್ಟರು. ಮತ್ತೊಂದು ತುದಿಯಲ್ಲಿದ್ದ ಸೌರವ್ ತಿವಾರಿ 13 ಎಸೆತಗಳಲ್ಲಿ ಒಂದು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 21 ರನ್ಗಳಿಸಿ ಸುನೀಲ್ ನರೈನ್ಗೆ ವಿಕೆಟ್ ಒಪ್ಪಿಸಿದರು. ಇದೇ ವೇಳೆ ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 16 ಓವರ್ಗಳಲ್ಲಿ 148 ರನ್ ತಲುಪಿತ್ತು.
ಪ್ಯಾಟ್ ಕಮಿನ್ಸ್ ಅವರ 17ನೇ ಓವರ್ನಲ್ಲಿ ಸಿಡಿದ ಹಾರ್ದಿಕ್ ಪಾಂಡ್ಯ ಒಂದು ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ 19 ರನ್ ಕಲೆಹಾಕಿದರು. ಆದರೆ 18ನೇ ಓವರ್ನಲ್ಲಿ ಬಿಗ್ ಹಿಟ್ಗೆ ಕೈ ಹಾಕಿದ ಹಿಟ್ಮ್ಯಾನ್ ಕ್ಯಾಚ್ ನೀಡಿ ಹೊರ ನಡೆದರು. ಈ ವೇಳೆಗೆ ರೋಹಿತ್ ಶರ್ಮಾ 54 ಎಸೆತಗಳಲ್ಲಿ 80 ರನ್ ಪೇರಿಸಿದರು. ನಂತರ ಸಿಕ್ಸ್ ಬಾರಿಸಲು ಹೋದ ರೋಹಿತ್ ಕ್ಯಾಚ್ ನೀಡಿ ಔಟ್ ಆದರು.
ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ 200 ರನ್ಗಳನ್ನು ಪೇರಿಸುವ ಮುಂದಾಲೋಚನೆಯಲ್ಲಿದ್ದರು. ಆದರೆ ಪಾಂಡ್ಯ ಅವರ ಬ್ಯಾಟ್ ವಿಕೆಟ್ಗೆ ತಾಗಿ ಔಟ್ ಆದರು. ನಂತರ ಕ್ರುನಾಲ್ ಪಾಂಡ್ಯ ಮತ್ತು ಪೊಲಾರ್ಡ್ ತಂಡದ ಮೊತ್ತವನ್ನು 195 ಒಟ್ಟುಗೂಡಿಸಿದರು.
ಉಭಯ ತಂಡಗಳು ಬಲಿಷ್ಠವಾಗಿದ್ದು, ಘಟಾನುಘಟಿ ಆಟಗಾರರು ಎರಡು ತಂಡಗಳಲ್ಲೂ ಇದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದ್ರೆ ಮುಂಬೈ ಇಂಡಿಯನ್ಸ್ ಕೆಕೆಆರ್ ವಿರುದ್ಧ ಮೇಲುಗೈ ಸಾಧಿಸಿದೆ. ಎರಡು ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 19 ಸಲ ಮುಂಬೈ ಇಂಡಿಯನ್ಸ್ ವಿಜಯ ಸಾಧಿಸಿದೆ. ಇನ್ನು 6 ಬಾರಿ ಗೆದ್ದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಗೆಲುವಿನ ಅಂಕಿಯನ್ನು ಏರಿಸುವ ಆತ್ಮ ವಿಶ್ವಾಸದಲ್ಲಿದೆ.
ಹಾಗೆಯೇ ಉಭಯದ ತಂಡಗಳ ನಡುವಣ ಕೊನೆಯ ಐದು ಪಂದ್ಯಗಳನ್ನು ತೆಗೆದುಕೊಂಡರೂ ಮುಂಬೈ ಇಂಡಿಯನ್ಸ್ ಪಾರುಪತ್ಯವನ್ನು ಹೊಂದಿದೆ. ಏಕೆಂದರೆ ಐದರಲ್ಲಿ ಕೇವಲ ಒಂದು ಗೆಲುವು ಸಾಧಿಸುವಲ್ಲಿ ಮಾತ್ರ ದಿನೇಶ್ ಕಾರ್ತಿಕ್ ಪಡೆ ಯಶಸ್ವಿಯಾಗಿದೆ. ಆದರೆ ಈ ಬಾರಿ ಕೆಕೆಆರ್ ತಂಡದಲ್ಲಿ ಕೆಲ ಬದಲಾವಣೆಗಳಾಗಿದ್ದು, ಹೀಗಾಗಿ ಫಲಿತಾಂಶಗಳಲ್ಲೂ ವ್ಯತ್ಯಾಸಗಳಾಗುವುದನ್ನು ನಿರೀಕ್ಷಿಸಬಹುದು.
ಕೆಕೆಆರ್ ತಂಡಕ್ಕೆ ಇಂಗ್ಲೆಂಡ್ ದಾಂಡಿಗ ಇಯಾನ್ ಮೋರ್ಗನ್ ಎಂಟ್ರಿ, ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಪ್ರಮುಖ ಅಸ್ತ್ರವಾಗಬಹುದು. ಅಲ್ಲದೆ ಈಗಾಗಲೇ ಕೆಕೆಆರ್ ಬೆನ್ನಲುಬಾಗಿರುವ ಆಂಡ್ರೆ ರಸೆಲ್ ಈ ಸೀಸನ್ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಸುನೀಲ್ ನರೈನ್ ಇದ್ದು, ಇಬ್ಬರ ಮೇಲೆ ತಂಡದ ಅವಲಂಭಿತವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಪಂದ್ಯದ ಮೂಲಕ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದ್ದು, ಇವರಿಗೆ ಜೋಡಿಯಾಗಿ ನರೈನ್ ಕಣಕ್ಕಿಳಿಯಲಿದ್ದಾರೆ.
ಮತ್ತೊಂದೆಡೆ, ಮೊದಲ ಸೋಲಿನಿಂದ ಎಚ್ಚೆತ್ತಿರುವ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಖಾತೆ ತೆರೆಯಲು ಸಕಲ ಸಿದ್ದತೆಯಲ್ಲಿದೆ. ಸಿಎಸ್ಕೆ ವಿರುದ್ಧ ಕಣಕ್ಕಿಳಿದ ತಂಡವೇ ಇಂದು ಕೂಡ ಮೈದಾನಕ್ಕಿಳಿಯಲಿದೆ. ಒಟ್ಟಿನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿರುವ ಮುಂಬೈ ಇಂಡಿಯನ್ಸ್ಗೆ, ಭರ್ಜರಿ ಶುಭಾರಂಭ ತವಕದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಸವಾಲಾಗಿ ಪರಿಣಮಿಸುವುದರಲ್ಲಿ ಸಂದೇಹವೇ ಇಲ್ಲ.