IPL

  • associate partner
HOME » NEWS » Ipl » KKR VS MI CAN KKR KICK OFF WITH A WIN IPL TODAY MATCH PREDICTION WHO WILL WIN IPL MATCH TODAY VB

KKR vs MI: ಕೋಲ್ಕತ್ತಾ ರೈಡರ್ಸ್ ಮೇಲೆ ನಡೆಯುತ್ತಾ ಬ್ಲೂ ಬಾಯ್ಸ್ ಸವಾರಿ?: ಇಂದಿನ ಪಂದ್ಯದಲ್ಲಿ ಯಾವ ಆಟಗಾರ ಹೈಲೈಟ್?

Dream11 IPL Today match: ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ತಂಡ ಮೇಲುಗೈ ಸಾಧಿಸಿ 19ರಲ್ಲಿ ಗೆಲುವು ದಾಖಲಿಸಿದ್ರೆ, ಕೆಕೆಆರ್‌ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

news18-kannada
Updated:September 23, 2020, 4:25 PM IST
KKR vs MI: ಕೋಲ್ಕತ್ತಾ ರೈಡರ್ಸ್ ಮೇಲೆ ನಡೆಯುತ್ತಾ ಬ್ಲೂ ಬಾಯ್ಸ್ ಸವಾರಿ?: ಇಂದಿನ ಪಂದ್ಯದಲ್ಲಿ ಯಾವ ಆಟಗಾರ ಹೈಲೈಟ್?
KKR
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದ್ದು ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಇಂದು ಮತ್ತೊಂದು ಹೈವೋಲ್ಟೇ ಪಂದ್ಯ ನಡೆಯುತ್ತಿದ್ದು, ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಉಭಯ ತಂಡಗಳು ಘಟಾನುಘಟಿ ಆಟಗಾರರನ್ನ ಹೊಂದಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಅದರಲ್ಲೂ ಆ್ಯಂಡ್ರೋ ರಸೆಲ್ ಆರ್ಭಟ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ  ಉಭಯ ತಂಡಗಳಿಗೂ ಮುಖ್ಯವಾಗಿದ್ದು ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಎದುರು ಸೋತಿರುವ ಮುಂಬೈ ಇಂಡಿಯನ್ಸ್ ಗೆಲುವಿನ ಹಳಿಗೇರುವ ತವಕದಲ್ಲಿದೆ. ಮತ್ತೊಂದೆಡೆ, ಯುವ ಹಾಗೂ ಅನುಭವಿ ಪಡೆ ಹೊಂದಿರುವ ಕೆಕೆಆರ್ ಶುಭಾರಂಭದ ನಿರೀಕ್ಷೆಯಲ್ಲಿದೆ.

ಇಂದಿನ ಪಂದ್ಯದಲ್ಲಿ ಮುಖ್ಯವಾಗಿ ಆಟಗಾರರ ಮುಖಾಮುಖಿ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ. ಮುಖ್ಯವಾಗಿ ಆ್ಯಂಡ್ರೋ ರಸೆಲ್ ಹಾಗೂ ಕೀರೊನ್ ಪೊಲಾರ್ಡ್​ ನಡುವಣ ಕಾದಾಟ ಹೇಗಿರಲಿದೆ ಎಂಬುದು ಕಾದುನೋಡಬೇಕಿದೆ.

ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮ್ಯಾಚ್‌ ವಿನ್ನರ್‌ ಆಗಿರುವ ಇವರು, 2019ರ ಐಪಿಎಲ್‌ನಲ್ಲಿ ಒಟ್ಟು 510 ರನ್‌ಗಳನ್ನು ಚಚ್ಚಿದ್ದರು. 56.66ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದ ದಿ ಜಯಂಟ್‌ ಸ್ಟ್ರೈಕ್‌ರೇಟ್‌ ಬರೋಬ್ಬರಿ 204.81 ಎಂಬುದು ವಿಶೇಷ. ಅಲ್ಲದೆ ಮೊನ್ನೆಯಷ್ಟೆ ಅಭ್ಯಾಸ ನಡೆಸುತ್ತಿರುವ ವೇಳೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆಂಡನ್ನು ಕ್ಯಾಮೆರಾಕ್ಕೆ ಹೊಡೆದಿದ್ದರು. ಈ ಮೂಲಕ ಎದುರಾಳಿಗೆ ದೊಡ್ಡ ಸಂದೇಶ ರವಾನಿಸಿದ್ದಾರೆ.

ಇನ್ನೂ ಕೆಕೆಆರ್ ತಂಡದ ಆರಂಭಿಕ ಯುವ ಬ್ಯಾಟ್ಸ್​ಮನ್​ ಶುಭ್ಮನ್ ಗಿಲ್ ಅವರ ಮೇಲೂ ಸಾಕಷ್ಟು ಭರವಸೆ ಇಡಲಾಗಿದೆ. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೆಕೆಆರ್ ಸೇರಿರುವುದು ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಸುನೀಲ್ ನಾರಾಯಣ್, ಕುಲದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿ ಮೋಡಿ ಮಾಡಲು ಅಣಿಯಾಗಿದ್ದರೆ, ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.

KKR
KKR


ಇತ್ತ ಮೊದಲ ಪಂದ್ಯದಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಚೆನ್ನೈ ವಿರುದ್ಧ ಸೌರಭ್ ತಿವಾರಿ ಮಿಂಚಿರುವ ಕಾರಣ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದು, ಇಶಾನ್ ಕಿಶನ್ ಹೊರಗುಳಿಯುವುದು ಅನಿವಾರ್ಯ. ವೇಗಿ ಟ್ರೆಂಟ್ ಬೌಲ್ಟ್ ಬದಲಿಗೆ ನಥಾನ್ ಕೌಲ್ಟರ್ ನಿಲ್‌ಗೆ ಅವಕಾಶ ನೀಡಬಹುದು. ಅಂತೆಯೆ ಕ್ರಿಸ್ ಲಿನ್ ಅವಕಾಶ ಪಡೆಯುವ ಅಂದಾಜಿದೆ.IPL 2020: ಮೋಸದಾಟಕ್ಕೆ ಮುಂದಾಗಿ ಕ್ರೀಡಾ ಸ್ಪೂರ್ತಿ ಮರೆತ್ರಾ ಧೋನಿ..?

ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್​ ಕಳೆದ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸಿ ಔಟ್ ಆಗಿದ್ದರು. ಇಂದಿನ ಪಂದ್ಯದಲ್ಲಿ ಇವರಿಬ್ಬರು ಪಂದ್ಯವನ್ನು ಹೇಗೆ ಫಿನಿಶ್ ಮಾಡಲಿದ್ದಾರೆ ಎಂಬುದು ನೋಡಬೇಕಿದೆ.

ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ತಂಡ ಮೇಲುಗೈ ಸಾಧಿಸಿ 19ರಲ್ಲಿ ಗೆಲುವು ದಾಖಲಿಸಿದ್ರೆ, ಕೆಕೆಆರ್‌ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.
Published by: Vinay Bhat
First published: September 23, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories