CSK vs KKR: 1 ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

KKR vs CSK Predicted Playing 11: ಕೊಲ್ಕತ್ತಾ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ಅವರದ್ದೇ ಚಿಂತೆ. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕಾರ್ತಿಕ್ ಗಳಿಸಿದ್ದು ಕೇವಲ 37 ರನ್​ಗಳು ಮಾತ್ರ. ಇದರ ಬೆನ್ನಲ್ಲೇ ನಾಯಕ ಬದಲಾವಣೆ ಕೂಗುಗಳು ಕೂಡ ಕೇಳಿ ಬರುತ್ತಿವೆ.

Dhoni vs Karthik

Dhoni vs Karthik

 • Share this:
  IPLನ 21 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಸೆಣಸಲಿವೆ. ಉಭಯ ತಂಡಗಳು ಎರಡು ಜಯ ಸಾಧಿಸಿದ್ದು, ಹೀಗಾಗಿ ಇಂದಿನ ಪಂದ್ಯದ ಮೂಲಕ ಜಯದ ಲಯವನ್ನು ಮುಂದುವರೆಸುವ ಇರಾದೆಯಲ್ಲಿದೆ. ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್​ಕೆ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಹೀಗಾಗಿ ಬುಧವಾರ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನು ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಭರ್ಜರಿ ಹೋರಾಟ ನಡೆಸಿದ ಕೆಕೆಆರ್ 18 ರನ್​ಗಳಿಂದ ಪರಾಭವಗೊಂಡಿತು. ಈ ಸೋಲಿನ ಹೊರತಾಗಿಯೂ ಕೆಕೆಆರ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿಜಯ ಸಾಧಿಸುವ ಮೂಲಕ ಆ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದ ಅಗತ್ಯವಿದೆ.

  ಇನ್ನು ಕೊಲ್ಕತ್ತಾ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ಅವರದ್ದೇ ಚಿಂತೆ. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕಾರ್ತಿಕ್ ಗಳಿಸಿದ್ದು ಕೇವಲ 37 ರನ್​ಗಳು ಮಾತ್ರ. ಇದರ ಬೆನ್ನಲ್ಲೇ ನಾಯಕ ಬದಲಾವಣೆ ಕೂಗುಗಳು ಕೂಡ ಕೇಳಿ ಬರುತ್ತಿವೆ. ತಂಡದಲ್ಲಿರುವ ಇಂಗ್ಲೆಂಡ್ ಆಟಗಾರ ಇಯಾನ್ ಮೋರ್ಗನ್ ಅವರಿಗೆ ಕಪ್ತಾನನ ಸ್ಥಾನ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ನೊಂದಿಗೆ ಭರ್ಜರಿ ಜಯ ದಾಖಲಿಸಬೇಕಾದ ಒತ್ತಡ ದಿನೇಶ್ ಕಾರ್ತಿಕ್ ಮೇಲಿದೆ.

  ಹಾಗೆಯೇ ಆರಂಭಿಕರಾಗಿ ಸುನೀಲ್ ನರೈನ್ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಹೊಂದಿದ್ದು, ಹೀಗಾಗಿ ಓಪನರ್ ಸ್ಥಾನದಲ್ಲಿ ಇಂದು ಇಂಗ್ಲೆಂಡ್ ಯುವ ಆಟಗಾರ ಟಾಮ್ ಬಾಂಟನ್ ಕಣಕ್ಕಿಳಿಯಬಹುದು. ಒಂದು ವೇಳೆ ಆರಂಭಿಕನನ್ನು ಬದಲಿಸಿದ್ರೆ ನರೈನ್ ಅಥವಾ ವೇಗಿ ಪ್ಯಾಟ್ ಕಮಿನ್ಸ್ ತಂಡದಿಂದ ಹೊರಗುಳಿಯಬೇಕಾಗಿ ಬರಬಹುದು. ಇದರ ಹೊರತಾಗಿ ಕೆಕೆಆರ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ.

  ಇತ್ತ ಸತತ ಸೋಲಿನಿಂದ ಜಯಕ್ಕೆ ಮರಳಿರುವ ಸಿಎಸ್​ಕೆ ತಂಡದಲ್ಲೂ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಈಗಾಗಲೇ ಆರಂಭಿಕರಾಗಿ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಅಬ್ಬರಿಸಿದ್ದು, ಇನ್ನು ಮಧ್ಯಮ ಕ್ರಮಾಂಕವನ್ನು ಬಲಪಡಿಸುವತ್ತ ಧೋನಿ ಯೋಚಿಸಲಿದ್ದಾರೆ. ಅದರಂತೆ ಇದೀಗ ತಂಡದಲ್ಲಿ ಆಲ್​ರೌಂಡರ್​ಗಳಾಗಿ ಸ್ಯಾಮ್ ಕರ್ರನ್ ಹಾಗೂ ಡ್ವೇನ್ ಬ್ರಾವೊ ಇರುವುದು ಸಿಎಸ್​ಕೆ ತಂಡದ ಬ್ಯಾಟಿಂಗ್-ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಿದೆ ಎನ್ನಬಹುದು. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕಣಕ್ಕಿಳಿದ ತಂಡವನ್ನೇ ಧೋನಿ ಇಂದು ಕೂಡ ಮೈದಾನಕ್ಕಿಳಿಸಲಿದೆ.

  ಉಭಯ ತಂಡಗಳ ಸಂಭ​ವ​ನೀಯ ಆಟ​ಗಾ​ರರ ಪಟ್ಟಿ ಹೀಗಿದೆ:

  ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ), ಶೇನ್‌ ವಾಟ್ಸನ್‌, ಫಾಫ್‌ ಡು ಪ್ಲೆಸಿ, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌, ರವೀಂದ್ರ ಜಡೇಜಾ, ಸ್ಯಾಮ್‌ ಕರ್ರನ್‌, ಡ್ವೇನ್‌ ಬ್ರಾವೊ, ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌, ಪೀಯೂಷ್‌ ಚಾವ್ಲಾ.

  ಕೊಲ್ಕತ್ತಾ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್(ನಾಯಕ) ಟಾಮ್ ಬಾಂಟನ್‌/ ಸುನೀಲ್ ನರೇನ್‌, ಶುಭ್‌ಮನ್‌ ಗಿಲ್‌, ನಿತೀಶ್‌ ರಾಣಾ, ಇಯಾನ್‌ ಮೋರ್ಗನ್‌, ಆಂಡ್ರೆ ರಸೆಲ್‌, ರಾಹುಲ್‌ ತ್ರಿಪಾಠಿ, ಪ್ಯಾಟ್‌ ಕಮಿನ್ಸ್‌, ಕಮಲೇಶ್ ನಾಗ​ರ​ಕೋಟಿ, ಶಿವಂ ಮಾವಿ, ವರುಣ್‌ ಚಕ್ರ​ವರ್ತಿ.

  ಪಿಚ್ ರಿಪೋರ್ಟ್‌: ಅಬುಧಾಬಿ ಪಿಚ್​ನಲ್ಲಿ ಮೊದಲ ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚು ಲಾಭ. ಮೊದಲ ಇನಿಂಗ್ಸ್​ನಲ್ಲಿ 170-180 ರನ್​ಗಳಿಸಿದ ತಂಡಗಳು ಬಹುತೇಕ ಜಯಗಳಿಸಿದೆ. ಚೇಸಿಂಗ್ ಕಷ್ಟಕರವಾಗಿರುವ ಈ ಪಿಚ್​ನಲ್ಲಿ ಯಾವ ತಂಡವೂ 200 ಕ್ಕಿಂತ ಹೆಚ್ಚಿನ ರನ್ ದಾಖಲಿಸಿಲ್ಲ. ಹಾಗೆಯೇ ಸ್ಪಿನ್ನರ್​ಗಳಿಗೆ ಹೆಚ್ಚಿನ ಪೂರಕವಾಗಿರುವ ಈ ಪಿಚ್​ನಲ್ಲಿ, ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಮತ್ತಷ್ಟು ಅನುಕೂಲಕವಾಗಿದೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: