HOME » NEWS » Ipl » KKR SCORE 53 RUNS FOR THE FIRST WICKET THE WORST RECORD BREAKING KNIGHT RIDERS EVER MAK

SRH vs KKR: ಮೊದಲ ವಿಕೆಟ್​ಗೆ 53 ರನ್​ ಪೇರಿಸಿದ ಕೋಲ್ಕತ್ತಾ; ಕೊನೆಗೂ ತನ್ನ ಕೆಟ್ಟ ದಾಖಲೆ ಮುರಿದ ನೈಟ್​ ರೈಡರ್ಸ್​!

ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ಮುಖಾಮುಖಿ ಯಾಗಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್​ ಮೊದಲ ವಿಕೆಟ್​ಗೆ 53ರನ್​ಗಳ ಜೊತೆಯಾಟ ನೀಡಿದೆ.

news18-kannada
Updated:April 11, 2021, 8:23 PM IST
SRH vs KKR: ಮೊದಲ ವಿಕೆಟ್​ಗೆ 53 ರನ್​ ಪೇರಿಸಿದ ಕೋಲ್ಕತ್ತಾ; ಕೊನೆಗೂ ತನ್ನ ಕೆಟ್ಟ ದಾಖಲೆ ಮುರಿದ ನೈಟ್​ ರೈಡರ್ಸ್​!
SRH - KKR
  • Share this:
ಕೋಲ್ಕತ್ತಾ ನೈಟ್​ ರೈಡರ್ಸ್​ ಐಪಿಎಲ್​ನಲ್ಲಿ ಎರಡು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ ತಂಡ. ಇಯಾನ್ ಮಾರ್ಗನ್, ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್​ ಹಾಗೂ ಸುನೀಲ್​ ನರೈನ್​ ನಂತಹ ಅದ್ಭುತ ಆಟಗಾರರನ್ನು ಈ ತಂಡ ಹೊಂದಿದೆ. ಇದೇ ಕಾರಣಕ್ಕೆ ಐಪಿಎಲ್​ 2020 ಸೀಸನ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಗೆಲ್ಲುವ ಫೇವರಿಟ್​ ತಂಡ ಎಂದೇ ಹೇಳಲಾಗಿತ್ತು. ಆದರೆ, ಕಳೆದ ವರ್ಷ ಕೊರೋನಾ ಕಾರಣಕ್ಕೆ ದುಬೈನಲ್ಲಿ ನಡೆದ ಈ ಟೂರ್ನಿಯಲ್ಲಿ ಕೆಕೆಆರ್​ ಅತ್ಯಂತ ಕೆಟ್ಟ ಪ್ರದರ್ಶ ನೀಡಿತ್ತು. ಅದರಲ್ಲೂ ವಿಶೇಷ ಅಂದ್ರೆ ಕಳೆದ ಸೀಸನ್​ನಲ್ಲಿ ಕೆಕೆಆರ್​ ಎಲ್ಲಾ ಪಂದ್ಯದಲ್ಲೂ ಪವರ್​ ಪ್ಲೇನಲ್ಲಿ ಕನಿಷ್ಟ 2 ವಿಕೆಟ್​ ಕಳೆದುಕೊಂಡಿತ್ತು. ಅಲ್ಲದೆ, ಮೊದಲ ವಿಕೆಟ್​ಗೆ 50 ರನ್​ ಜೊತೆಯಾಟ ನೀಡಿದ್ದು 14 ಪಂದ್ಯಗಳ ಪೈಕಿ ಕೇವಲ ಒಂದು ಬಾರಿ ಮಾತ್ರ. ಆದರೆ, ಈ ವರ್ಷ ತನ್ನ ಕೆಟ್ಟ ಈ ದಾಖಲೆಯನ್ನು ಕೆಕೆಆರ್​ ಮುರಿದಿದೆ.

ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ಮುಖಾಮುಖಿ ಯಾಗಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್​ ಮೊದಲ ವಿಕೆಟ್​ಗೆ 53ರನ್​ಗಳ ಜೊತೆಯಾಟ ನೀಡಿದೆ. ಬಲಗೈ ಬ್ಯಾಟ್ಸ್​ಮನ್ ಗಿಲ್ ಮತ್ತು ಎಡಗೈ ಬ್ಯಾಟ್ಸ್​ಮನ್​ ನಿತೀಶ್​ ರಾಣಾ ಮೊದಲ ವಿಕೆಟ್​ಗೆ 53 ರನ್​ ದಾಖಲಿಸುವ ಮೂಲಕ ಕೆಕೆಆರ್​ಗೆ ಆಸರೆಯಾಗಿದ್ದಾರೆ. ಅಲ್ಲದೆ, ತಂಡದ ಅತಿದೊಡ್ಡ ಸಮಸ್ಯೆಗೆ ಅಂತ್ಯ ಹಾಡಿದ್ದಾರೆ.

ಆರಂಭದಿಂದಲೇ ಅಬ್ಬರದ ಆಟ ಪ್ರದರ್ಶಿಸಿದ ಈ ಜೋಡಿ ಬೌಂಡರಿ ಸಿಕ್ಸ್ ಮೂಲಕ ತಮಗೆ ನೀಡಿದ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿತ್ತು. ಆದರೆ, ಶುಭ್ಮನ್ ಗಿಲ್ ಅವರನ್ನು ಬೌಲ್ಡ್ ಮಾಡುವ ಮೂಲಕ ರಶೀದ್ ಖಾನ್ ಕೆಕೆಆರ್​ಗೆ ಆಘಾತ ನೀಡಿದ್ದಾರೆ. ಈ ಮೂಲಕ ಕೋಲ್ಕತ್ತಾ ಅಪರೂಪಕ್ಕೆ ಎಂಬಂತೆ ಮೊದಲ ವಿಕೆಟ್​ಗೆ ಉತ್ತಮ ಜೊತೆಯಾಟ ನೀಡಿದೆ. ಅಲ್ಲದೆ ಪವರ್​ ಪ್ಲೇನಲ್ಲಿ ವಿಕೆಟ್​ ನೀಡದೆ ಇರುವುದೂ ಸಹ ಇದೇ ಮೊದಲು.​

ಇದನ್ನೂ ಓದಿ: SRH vs KKR: ವಾರ್ನರ್ vs ಮೋರ್ಗನ್: ಕಣಕ್ಕಿಳಿಯುವ ಸಂಭಾವ್ಯ ಇಲೆವೆನ್ ಹೀಗಿದೆಅಸಲಿಗೆ ಕೋಲ್ಕತ್ತಾ ಐಪಿಎಲ್​ ಟೂರ್ನಿಯಲ್ಲಿ ಎರಡು ಬಾರಿ ಕಪ್​ ಗೆದ್ದಿದ್ದರೂ ಸಹ ಆರಂಭದಿಂದಲೂ ಕೆಕೆಆರ್​ಗೆ ಆರಂಭಿಕ ಆಟಗಾರರಲ್ಲಿ ಸಮಸ್ಯೆ ಇದೆ. 2008ರಲ್ಲಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆಕೆಆರ್​ ತಂಡದ ಬ್ರೆಂಡನ್ ಮೆಕಲಂ ಆರ್​ಸಿಬಿ ತಂಡದ ವಿರುದ್ಧ ಓಪನಿಂಗ್ ಬಂದು ಅಬ್ಬರಿಸಿದ್ದರು. ಆ ಪಂದ್ಯದಲ್ಲಿ ಅವರು 153 ರನ್ ಬಾರಿಸಿದ್ದರು. ಬೌಂಡರಿ ಸಿಕ್ಸರ್​ ಮಳೆಗೆರೆದಿದ್ದರು.

ಆದರೆ, ಕೆಕೆಆರ್​ ಮತ್ತೆ ಅಂತಹ ಆರಂಭ ನೀಡುವಲ್ಲಿ ಸತತ ವಿಫಲವಾಗಿದೆ. ಅಂಕಿ ಅಂಶಗಳ ಪ್ರಕಾರ ಕಳೆದ 13 ಐಪಿಎಲ್ ಸೀಸನ್​ನಲ್ಲಿ ಕೆಕೆಆರ್​ ಆರಂಭಿಕ ಆಟಗಾರರು 50 ರನ್ ಜೊತೆಯಾಟ ನೀಡಿರುವುದು ಕೇವಲ 8 ಬಾರಿ ಮಾತ್ರ. ಈ ಮೂಲಕ ಅತಿಹೆಚ್ಚು ಜೊತೆಯಾಟ ನೀಡಇರುವವರ ಪಟ್ಟಿಯಲ್ಲಿ ಕೋಲ್ಕತ್ತಾ ಕೊನೆಯ ಸ್ಥಾನದಲ್ಲಿದೆ. 13 ಬಾರಿ 50 ರನ್ ಜೊತೆಯಾಟ ನೀಡುವ ಮೂಲಕ ಈ ಪಟ್ಟಿಯಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ ಮೊದಲ ಸ್ಥಾನದಲ್ಲಿದೆ.
Published by: MAshok Kumar
First published: April 11, 2021, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories