ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಆ್ಯಂಡ್ರೆ ರಸೆಲ್ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ.. ಎಲ್ಲರಿಗೂ ಗೊತ್ತು. ರಸೆಲ್ ಬ್ಯಾಟಿಂಗ್ ಅಬ್ಬರಕ್ಕೆ ಮಾರುಹೋಗದವರಿಲ್ಲ. ಒಂದು ಬಾರಿ ಕ್ರೀಸ್ಗೆ ಬಂದರೆ ರಸೆಲ್ ಎದುರಾಳಿಯ ಚೆಂಡನ್ನು ಧೂಳಿಪಟ ಮಾಡಿರುವ ಅನೇಕ ಉದಾಹರಣೆಗಳಿವೆ. ಆದರೆ ಈ ವರ್ಷದ ಐಪಿಎಲ್ ಪಂದ್ಯದಲ್ಲಿ ರಸೆಲ್ ಅಬ್ಬರ ಕೊಂಚ ಕಡಿಮೆಯಾದಂತೆ ಕಾಣುತ್ತಿದೆ.
ರಸೆಲ್ ಕೊಲ್ಕತ್ತಾ ತಂಡದಲ್ಲಿ ಆಡುತ್ತಿದ್ದಾರೆ. ಈ ವರ್ಷದ ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ ಕೆಕೆಆರ್ ತಂಡ ಆರು ಪಂದ್ಯವನ್ನು ಎದುರಿಸಿದ್ದು, ಅದರಲ್ಲಿ 4 ಪಂದ್ಯದಲ್ಲಿ ಜಯಶಾಲಿಯಾಗಿದೆ. ಇತ್ತ ರಸೆಲ್ ಬ್ಯಾಟಿಂಗ್ ಪ್ರದರ್ಶನದಲ್ಲಿ ಕೂಡ ಅಷ್ಟೇನು ಹೇಳಿಕೊಳ್ಳುವಂತಿಲ್ಲ. ಈವರೆಗೆ ಆರ್ ಇನ್ಸಿಂಗ್ನಲ್ಲಿ ಕೇವಲ 10 ರನ್ಗಳ ಗಡಿಯನ್ನು ಅವರು ದಾಟಿದಾರಷ್ಟೆ.
ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ರಸೆಲ್ ಕೇವಲ 22 ಎಸೆತದಲ್ಲಿ 54 ರನ್ ಬಾರಿಸುವ ಮೂಲಕ ಬೆರಗುಗೊಳಿಸುವಂತೆ ಮಾಡಿದ್ದರು. ಆ ಬಳಿಕ ಅದೇ ಫಾರ್ಮ್ಗೆ ರಸೆಲ್ ಬರಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ರಸೆಲ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್. ಐಪಿಎಲ್ ಪ್ರಾರಂಭಕ್ಕೂ ಮುನ್ನ ಅದರ ತಯಾರಿ ಕುರಿತಾಗಿ ಫೋಟೋ, ವಿಡಿಯೋ ಸ್ಟೇಟಸ್ ಹಾಕುತ್ತಿದ್ದರು. ಇದೀಗ ಪಂದ್ಯದ ಸಮಯದಲ್ಲಿ ಸ್ಟೇಟಸ್ ಹಾಕುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ರಸೆಲ್ ಎಣ್ಣೆ ಬಾಟಲಿ ಹಿಡಿದುಕೊಂಡ ಫೋಟೋವೊಂದನ್ನ ತಮ್ಮ ಸ್ಟೇಟಸ್ ಹಾಕಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಗುಸು ಗುಸು ಮಾತುಗಳು ಜೋರಾಗಿದೆ.
ಹೌದು. ರಸೆಲ್ ಓಲ್ಡ್ ಮಾಂಕ್ ಎಣ್ಣೆ ಬಾಟಲಿ ಹಿಡಿದಿರುವ ಫೋಟೋವನ್ನು ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ. ‘ಇಟ್ಸ್ ಓಕೆ ನಾಟ್ ಟು ಬಿ ಓಕೆ’ ‘ಹೆಲ್ಪ್ ಆಲ್ ದ ಟೈಮ್’ ಎಂದು ಬರೆದಿದ್ದಾರೆ. ಆದರೆ ಈ ಫೋಟೋ ನೋಡಿದಾಗ ರಸೆಲ್ ಮತ್ತೆ ಫಾರ್ಮ್ಗೆ ಬರಲು ಚಿಂತಿಸುತ್ತಿದ್ದಾರಾ? ಅಥವಾ ಮುಂದಿನ ಪಂದ್ಯದಲ್ಲಿ ಅಬ್ಬರಿಸಲು ಪ್ಲಾನ್ ಹಾಕಿಕೊಂಡಿದ್ದಾರಾ? ಎಂಬ ಅನುಮಾನ ಅಭಿಮಾನಿಗಳ ಮನದಲ್ಲಿ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ