HOME » NEWS » Ipl » KINGS XI PUNJAB CAPTAIN KL RAHUL HOSPITALISED WITH ACUTE APPENDICITIS TO UNDERGO SURGERY HG

Kings XI Punjab: ಪಂಜಾಬ್​ ತಂಡಕ್ಕೆ ಆಘಾತ!; ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಕೆ.ಎಲ್​ ರಾಹುಲ್​!

ಭಾನುವಾರದ ಪಂಜಾಬ್​ ಕಿಂಗ್ಸ್​ -ಡೆಲ್ಲಿ ಕ್ಯಾಪಿಟಲ್​ ನಡುವೆ ಪಂದ್ಯ ನಡೆಯಲಿದೆ. ಆದರೆ ನಾಯಕ ರಾಹುಲ್​ ಮಾತ್ರ ಆಡುತ್ತಿಲ್ಲ. ಹೊಟ್ಟೆ ನೋವಿನಿಂದಾಗಿ ಕನ್ನಡಿಗ ರಾಹುಲ್​ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

news18-kannada
Updated:May 2, 2021, 6:42 PM IST
Kings XI Punjab: ಪಂಜಾಬ್​ ತಂಡಕ್ಕೆ ಆಘಾತ!; ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಕೆ.ಎಲ್​ ರಾಹುಲ್​!
ಕೆ.ಎಲ್​ ರಾಹುಲ್
  • Share this:
ಕಿಂಗ್ಸ್​ ಇಲೆವನ್ ಪಂಜಾಬ್​ ​ತಂಡದ ನಾಯಕ ಕೆ.ಎಲ್ ರಾಹುಲ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯ ಕಾರಣದಿಂದಾಗಿ ಇಂದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್​ ಆಡುತ್ತಿಲ್ಲ ಎಂಬ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ. ಈ ವಿಚಾರ ತಂಡಕ್ಕೂ ದೊಡ್ಡ ಆಘಾತನೀಡಿದ್ದಲ್ಲದೆ, ಅಭಿಮಾನಿಗಳಿಗೂ ಬೇಸರ ತರಿಸಿದೆ.

ಭಾನುವಾರದ ಪಂಜಾಬ್​ ಕಿಂಗ್ಸ್​ -ಡೆಲ್ಲಿ ಕ್ಯಾಪಿಟಲ್​ ನಡುವೆ ಪಂದ್ಯ ನಡೆಯಲಿದೆ. ಆದರೆ ನಾಯಕ ರಾಹುಲ್​ ಮಾತ್ರ ಆಡುತ್ತಿಲ್ಲ. ಹೊಟ್ಟೆ ನೋವಿನಿಂದಾಗಿ ಕನ್ನಡಿಗ ರಾಹುಲ್​ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಪಂಜಾವ್​ ಕಿಂಗ್ಸ್​ ಇಲೆವನ್​ ತಂಡ ರಾಹುಲ್​ ಅನಾರೋಗ್ಯದ ಬಗ್ಗೆ ಹೇಳಿಕೆ ನೀಡಿದ್ದು, ಇದರಿಂದಾಗಿ ಇಂದಿನ ಪಂದ್ಯದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಕಳೆದ ರಾತ್ರಿ ರಾಹುಲ್​ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಲಾಗಿದೆ. ಪರೀಕ್ಷೆ ನಡೆಸಿದ ಬಳಿಕ ರಾಹುಲ್​ ಕರುಳ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಈ ಅನಾರೋಗ್ಯದಿಂದ ಬೇಗನೆ ಹೊರಬರಲು ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ.ಇಂದು 7:30ಕ್ಕೆ ಸರಿಯಾಗಿ ಪಂಜಾಬ್​ ಮತ್ತು ಡೆಲ್ಲಿ ತಂಡದ ನಡುವೆ ಹಣಾಹಣಿ ನಡೆಯಲಿದೆ. ಆದೆರೆ ರಾಹುಲ್​ ಬದಲಿಗೆ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕಾದುನೋಡಬೇಕಿದೆ. ಮಾತ್ರವಲ್ಲದೆ, ಇಂದಿನ ಪಂದ್ಯದಲ್ಲಿ ಜಯ ಯಾರ ಪಾಲಿಗೆ ಒಳಿಯಲಿದೆ ಎಂಬುದು ಕುತೂಹಲ ಹುಟ್ಟಿಸಿದೆ.
Published by: Harshith AS
First published: May 2, 2021, 6:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories