ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ರದ್ದಾದರೆ, ಅತ್ತ ವೆಸ್ಟ್ ಇಂಡೀಸ್ನಲ್ಲಿ ಕೆರಿಬಿಯರ್ ಪ್ರೀಮಿಯರ್ ಲೀಗ್ ಚುಟುವಟಿಕೆಗಳು ಶರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಹರಾಜಿಗಾಗಿ ಆಟಗಾರರ ರಿಟೈನ್ ಹಾಗೂ ರಿಲೀಸ್ ಪ್ರಕ್ರಿಯೆಗಳು ಆರಂಭವಾಗಿವೆ. ಅದರಂತೆ ಈ ಬಾರಿ ಕೂಡ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಕೀರನ್ ಪೊಲಾರ್ಡ್ ಅವರನ್ನು ಉಳಿಸಲಾಗಿದ್ದು, ಅವರಿಗೆ ತಂಡದ ನಾಯಕತ್ವನ್ನು ವಹಿಸಲಾಗಿದೆ. ಈ ಹಿಂದೆ ಟಿಕೆಆರ್ ತಂಡವನ್ನು ಡ್ವೇನ್ ಬ್ರಾವೋ ಮುನ್ನಡೆಸುತ್ತಿದ್ದರು. ಆದರೆ ಕಳೆದ ಸೀಸನ್ನಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಬ್ರಾವೋ ಅವರ ಬದಲಿಗೆ ಕೀರನ್ ಪೊಲಾರ್ಡ್ಗೆ ನಾಯಕನ ಪಟ್ಟ ನೀಡಲಾಗಿತ್ತು.
ಕಳೆದ ಸೀಸನ್ನಲ್ಲಿ ಪೊಲಾರ್ಡ್ ನಾಯಕತ್ವದಲ್ಲಿ ಆಡಿದ್ದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು ಲೀಗ್ ಹಂತದ ಎಲ್ಲಾ 10 ಪಂದ್ಯಗಳನ್ನು ಗೆದ್ದು ಫೈನಲ್‌ನಲ್ಲಿ ಸೇಂಟ್ ಲೂಸಿಯಾ ಅಥ್ಲೀಟ್‌ಗಳನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತ್ತು. ಇದೀಗ ಈ ಬಾರಿ ಟಿಕೆಆರ್‌ಗಾಗಿ ಪ್ರಶಸ್ತಿಯನ್ನು ಉಳಿಸುವ ಜವಾಬ್ದಾರಿಯನ್ನು ಪೊಲಾರ್ಡ್ಗೆ ವಹಿಸಲಾಗಿದೆ. ಅತ್ತ ನಾಯಕನ ಸ್ಥಾನ ಕಳೆದುಕೊಳ್ಳುವುದರೊಂದಿಗೆ ಬ್ರಾವೊ ಟಿಕೆಆರ್ ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೆ ಈ ಬಾರಿ ಸೆಂಟ್ ಕಿಟ್ಸ್ ನೆವಿಸ್ ಪ್ಯಾಟ್ರಯಟ್ಸ್ ಪರ ಆಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ