IPL 2020 ಮೂಲಕ ಭಾರತದ ಯುವ ಆಟಗಾರರ ಸಾಮರ್ಥ್ಯ ಅನಾವರಣಗೊಳುತ್ತಿದೆ. ಕೆಲವರು ಬ್ಯಾಟಿಂಗ್ನಲ್ಲಿ ಮಿಂಚಿದ್ರೆ ಮತ್ತೆ ಕೆಲವರು ಬೌಲಿಂಗ್ನಲ್ಲಿ ಪರಾಕ್ರಮ ಮೆರೆಯುತ್ತಿದ್ದಾರೆ. ಹೀಗೆ ಆಡಿದ ಮೊದಲ ಪಂದ್ಯದ ಮೂಲಕವೇ ಎಲ್ಲರ ಗಮನ ಸೆಳೆದಿರುವ ಯುವ ವೇಗಿ ಹೆಸರು ಕಾರ್ತಿಕ್ ತ್ಯಾಗಿ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ರಾಜಸ್ಥಾನ್ ರಾಯಲ್ಸ್ ಪರ ಪದಾರ್ಪಣೆ ಮಾಡಿದ್ದ ಕಾರ್ತಿಕ್ ರನ್ನಿಂಗ್ ಅನ್ನು ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಬ್ರೇಟ್ ಲೀಗೆ ಹೋಲಿಸಿದ್ದರು. ಇದಕ್ಕೆ ಖುದ್ದು ಲೀ ಕೂಡ ಸಹಮತ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ಬೌಲರ್ ಶ್ರೀಶಾಂತ್ ಕೂಡ ತ್ಯಾಗಿ ಬಗ್ಗೆ ಮಾತನಾಡಿದ್ದಾರೆ.
ಅಂಡರ್ 19 ಟೀಮ್ ಇಂಡಿಯಾ ಮೂಲಕ ಬೆಳಕಿಗೆ ಬಂದಿರುವ ಕಾರ್ತಿಕ್ ತ್ಯಾಗಿ ಮುಂದೊಂದು ದಿನ ವಿಶ್ವ ಕ್ರಿಕೆಟ್ನಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀ, ಯುವ ವೇಗಿ ಯಾವುದೇ ಎಫರ್ಟ್ ಇಲ್ಲದೆ ಬೌಲಿಂಗ್ ಮಾಡುತ್ತಿರುವುದು ಅದ್ಭುತವಾಗಿದೆ. ನಾನು ಈ ಹಿಂದೆ ವಾರ್ವಿಕ್ಶೈರ್ ಪರ ಆಡುವಾಗ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್ ಕೂಡ ನನಗೆ ಈ ಬಗ್ಗೆ ಹೇಳಿದ್ದರು. ನಾವು ಜಾಸ್ತಿ ಎಫರ್ಟ್ ಹಾಕದೇ ಎಸೆಯುವ ವೇಗದ ಬೌಲ್ ಬ್ಯಾಟ್ಸ್ಮನ್ಗೆ ಅಚ್ಚರಿ ಮೂಡಿಸುತ್ತದೆ ಎಂದು. ಅದನ್ನು ಕಾರ್ತಿಕ್ ತ್ಯಾಗಿಯಲ್ಲಿ ನಾನು ಕಂಡಿರುವುದಾಗಿ ಶ್ರೀಶಾಂತ್ ಹೇಳಿದರು.
ಮುಂಬರುವ ವರ್ಷಗಳಲ್ಲಿ ಕಾರ್ತಿಕ್ ತ್ಯಾಗಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ಎದುರು ನೋಡುತ್ತಿದ್ದೇನೆ. ಖಂಡಿತವಾಗಿಯೂ ಆತ ಮ್ಯಾಚ್ ವಿನ್ನರ್ ಆಗಲಿದ್ದಾನೆ. ಅಲ್ಲದೆ ಮುಂದೊಂದು ಆತನ ಈ ಬೌಲಿಂಗ್ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭಾವಿಸುತ್ತೇನೆ ಎಂದು ಶಾಂತಕುಮಾರನ್ ಶ್ರೀಶಾಂತ್ ಹೇಳಿದರು.
ಇದೇ ವೇಳೆ ಕಾರ್ತಿಕ್ ತ್ಯಾಗಿಗೆ ಶ್ರೀಶಾಂತ್ ಸಲಹೆಯೊಂದನ್ನು ಸಹ ನೀಡಿದರು. ಬೌಲಿಂಗ್ ರನ್ನಿಂಗ್ ಬಳಿಕ ಸ್ಪಲ್ಪ ಜಂಪ್ ಪಡೆದು, ಕ್ರೀಸ್ನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇದನ್ನು ತಿದ್ದಿಕೊಂಡರೆ ಯುವ ವೇಗಿ ಇನ್ನಷ್ಟು ಅತ್ಯುತ್ತಮ ಬೌಲರ್ ಆಗಲಿದ್ದಾರೆ ಎಂದರು. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್ ಎಸೆದಿದ್ದ ಕಾರ್ತಿಕ್ ತ್ಯಾಗಿ 36 ರನ್ಗಳನ್ನು ನೀಡಿ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆದಿದ್ದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಐಪಿಎಲ್ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ