news18-kannada Updated:October 11, 2020, 8:49 AM IST
KL Rahul
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ನಡೆದ 24ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2 ರನ್ಗಳ ರೋಚಕ ಗೆಲುವು ಸಾಧಿಸಿತ್ತು. ಕನ್ನಡಿಗರಾದ ನಾಯಕ ಕೆ. ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಹೋರಟಕ್ಕೆ ಫಲ ಸಿಗದೆ ಪಂಜಾಬ್ ಟೂರ್ನಿಯಲ್ಲಿ 6ನೇ ಸೋಲುಕಂಡಿತು. ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ನಾಯಕ ಕೆಎಲ್ ರಾಹುಲ್ ಅತ್ತಿದ್ದು, ವಿಡಿಯೋ ವೈರಲ್ ಆಗಿದೆ.
ಕೆಕೆಆರ್ ನೀಡಿದ್ದ 165 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಮೊದಲ 6 ಓವರ್ನಲ್ಲಿ 47 ರನ್ ಹರಿದುಬಂತು.ಪವರ್ ಪ್ಲೇ ಓವರ್ ನಂತರ ಬಿರುಸಿನ ಬ್ಯಾಟಿಂಗ್ ನಡೆಸಿದ ಇವರಿಬ್ಬರು (115 ರನ್) ಶತಕದ ಜೊತೆಯಾಟ ಆಡಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ರಾಹುಲ್- ಮಯಾಂಕ್ ಪಂಜಾಬ್ ಬೌಲರ್ಗಳ ಬೆವರಿಳಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು. ಆದರೆ ಮ್ಯಾಕ್ಸ್ವೆಲ್ ಬೌಂಡರಿ ಬಾರಿಸಲಷ್ಟೇ ಶಕ್ತರಾಗಿ ಪಂಜಾಬ್ ಸೋಲೊಪ್ಪಿಗೊಂಡಿತು.
ಬೌಂಡರಿ ಗಡಿಗೆ ಸಿಡಿದ ಬಾಲು ಒಂದಿಂಚು ಮುಂದೆ ಬಿದ್ದಿದ್ದರೂ ಸಿಕ್ಸ್ ಆಗಿ ಬಿಡುತ್ತಿತ್ತು. ಆಗ ಸೂಪರ್ ಓವರ್ ಆಗುತ್ತಿತ್ತು. ಆದರೆ, ಆ ಅವಕಾಶ ಕೂಡ ಕೈ ತಪ್ಪಿತ್ತು. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಹೊರತಾಗಿಯೂ ಪಂಜಾಬ್ ಸೋಲನ್ನು ಕಾಣುತ್ತಿದೆ. ನಿನ್ನೆ ಕೂಡ ಅದೇ ರೀತಿ ಆಗಿದೆ. ಇದನ್ನು ನೆನೆದ ಕೆಎಲ್ ರಾಹುಲ್ ಕಣ್ಣಲ್ಲಿ ನೀರು ಜಿನುಗಿದ್ದು, ಫೋಟೋಗಳು ವೈರಲ್ ಆಗಿವೆ. ಪಂದ್ಯ ಮುಗಿದ ನಂತರ ಮಾತನಾಡಿದ್ದ ಕೆಎಲ್ ರಾಹುಲ್, ನಿಜವಾಗಲೂ ನಮಗೆ ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು.
ಪಂಜಾಬ್ ಪ್ಲೇಆಫ್ಗೆ ಲಗ್ಗೆ ಇಡಬೇಕೆಂದರೆ ಮುಂದಿನ ಏಳೂ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕಿದೆ.
Published by:
Rajesh Duggumane
First published:
October 11, 2020, 8:49 AM IST