Danish Sait: ನಿಮ್ಮ ಬಳಿ ಕಪ್​ ಇಲ್ಲವೆ ಎಂದ ಚೆನ್ನೈ ಅಭಿಮಾನಿಗೆ ಮುಟ್ಟಿನೋಡುವಂಥ ಉತ್ತರ ಕೊಟ್ಟ ಕನ್ನಡಿಗ ದ್ಯಾನಿಶ್

ಮೈದಾನದಲ್ಲಿ ಚೆನ್ನೈ ಹಾಗೂ ಬೆಂಗಳೂರು ತಂಡವನ್ನು ಬದ್ಧ ವೈರಿಗಳು ಎಂದೇ ಪರಿಗಣಿಸಲಾಗುತ್ತದೆ. ಎರಡೂ ತಂಡದ ಅಭಿಮಾನಿಗಳು ಆನ್​ಲೈನ್​ನಲ್ಲಿ ಪರಸ್ಪರ ಟ್ರೋಲ್​ ಮಾಡುತ್ತಿರುತ್ತಾರೆ.

ಮಿ. ನಾಗ್ಸ್​ ಹಾಗೂ ವಿರಾಟ್ ಕೊಹ್ಲಿ.

ಮಿ. ನಾಗ್ಸ್​ ಹಾಗೂ ವಿರಾಟ್ ಕೊಹ್ಲಿ.

 • Share this:
  ಆರ್​ಸಿಬಿ ಕಪ್​ ಗೆದ್ದಿಲ್ಲ ಅನ್ನೋ ಬೇಸರ ಕಳೆದ 12 ವರ್ಷಗಳಿಂದಲೂ ಇದೆ. ವಿರಾಟ್​ ಕೊಹ್ಲಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದ ಹೊರತಾಗಿಯೂ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಈ ಬೇಸರ ಈ ಮೊದಲಿನಿಂದಲೂ ಇದೆ. ಇನ್ನು, ಆರ್​ಸಿಬಿ ಅಭಿಮಾನಿಗಳಿಗೆ ಕಪ್​ ಗೆದ್ದಿಲ್ಲ ಎನ್ನುವುದಕ್ಕಿಂತ, ಬೇರೆಯವರು ಟ್ರೋಲ್​ ಮಾಡುತ್ತಾರಲ್ಲ ಎನ್ನುವ ಬೇಸರ ಹೆಚ್ಚಿದೆ. ಈಗ ಆರ್​ಸಿಬಿಯನ್ನು ಟ್ರೋಲ್​ ಮಾಡಲು ಹೋದ ಚೆನ್ನೈ ಅಭಿಮಾನಿಗೆ ಆರ್​ಸಿಬಿಯ ಇನ್​​ಸೈಡರ್​ ದ್ಯಾನಿಶ್​ ಸೇಟ್​ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ.

  ಮೈದಾನದಲ್ಲಿ ಚೆನ್ನೈ ಹಾಗೂ ಬೆಂಗಳೂರು ತಂಡವನ್ನು ಬದ್ಧ ವೈರಿಗಳು ಎಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣ, ಧೋನಿ ಹಾಗೂ ಕೊಹ್ಲಿ. ಹಾಗಂತ ಧೋನಿ-ಕೊಹ್ಲಿ ವೈರಿಗಳು ಅಂತಲ್ಲ. ಸಿಎಸ್​ಕೆಯ ಕೆಲ ಅಭಿಮಾನಿಗಳಿಗೆ ವಿರಾಟ್ ಪಡೆ ಅಷ್ಟಾಗಿ ಇಷ್ಟವಾಗುವುದಿಲ್ಲ. ಇನ್ನು, ಆರ್​ಸಿಬಿ ಅಭಿಮಾನಿಗಳಿಗೂ ಚೆನ್ನೈ ತಂಡ ಕಂಡರೆ ಅಷ್ಟಕ್ಕಷ್ಟೇ. ಹೀಗಾಗಿ ಆರ್​ಸಿಬಿ ಸೋತಾಗ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಧೋನಿಯನ್ನು ಹಾಗೂ ಚೆನ್ನೈ ಸೋತಾಗ ಆರ್​​ಸಿಬಿ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಮಾಡುತ್ತಾರೆ.

  ಶ್ರೀನಿಧಿ ಎಂಬುವವರು ಟ್ವಿಟ್ಟರ್​ನಲ್ಲಿ ಟ್ವೀಟ್​ ಒಂದನ್ನು ಮಾಡಿದ್ದರು. ಆ ಟ್ವೀಟ್​ ಇರೋದು ಹೀಗೆ.

  ಬೆಂಗಳೂರಿನ ರೆಸ್ಟೋರೆಂಟ್​ನಲ್ಲಿ ನಾನು: ಒಂದು ಪ್ಲೇಟ್​ನಲ್ಲಿ ಕಾಫೀ ಕೊಡ್ತೀರಾ?
  ವೇಟರ್​: ಪ್ಲೇಟ್​ಅಲ್ಲಿ ಕಾಫೀ ಕೊಡಬೇಕೆ. ನೀವು ಏನು ಹೇಳುತ್ತಿದ್ದೀರಿ ಎಂದು ಅರ್ಥವಾಗಿಲ್ಲ.
  ನಾನು: ನಿಮ್ಮ ಬಳಿ ಕಪ್​ ಇಲ್ಲವಲ್ಲ.  ಈ ಟ್ವೀಟ್​ನಲ್ಲಿ ಬೆಂಗಳೂರು ಬಳಿ ಕಪ್​ ಇಲ್ಲ ಎನ್ನುವುದನ್ನು ಅಣಕಿಸಲಾಗಿತ್ತು. ಇದಕ್ಕೆ ದ್ಯಾನಿಶ್​ ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ.

  ನಾನು ಚೆನ್ನೈ ಬಾರ್​ನಲ್ಲಿ: ಒಂದು gin and tonic ಕೊಡ್ತೀರಾ?
  ವೇಟರ್​: ನೋ ಸರ್​
  ನಾನು: ಹಾಗಿದ್ರೆ ನಂಗೆ ಒಂದು ಡ್ರಿಂಕ್ ಫಿಕ್ಸ್​ ಮಾಡಿ ಕೊಡಿ​
  ವೇಟರ್​: ಒಕೆ ಸರ್  ​ದ್ಯಾನಿಶ್ ಹೀಗೆ ಉತ್ತರಿಸುವ ಮೂಲಕ ಚೆನ್ನೈ ಫಿಕ್ಸಿಂಗ್​ ಹಗರಣವನ್ನು ನೆನಪು ಮಾಡಿದ್ದಾರೆ.
  Published by:Rajesh Duggumane
  First published: