ಸೋಮವಾರ ಅಬುಧಾಬಿಯ ಶೇಖ್ ಝಾಯೆದ್ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 200 ಪಂದ್ಯವನ್ನಾಡಿದ ಹೊಸ ಇತಿಹಾಸ ನಿರ್ಮಿಸಿದರು. ಸಿಎಸ್ಕೆ ನಾಯಕನ ಪಾಲಿನ ವಿಶೇಷ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ಗಳಿಸಿತು.
126 ರನ್ಗಳ ಸುಲಭ ಟಾರ್ಗೆಟ್ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ಗೆ ಆರಂಭಿಕ ಆಘಾತ ನೀಡುವಲ್ಲಿ ಸಿಎಸ್ಕೆ ಬೌಲರುಗಳು ಯಶಸ್ವಿಯಾಗಿದ್ದರು. ಆರ್ಆರ್ ಮೊತ್ತ 28 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ಗಳು ಬಿದ್ದಿದ್ದವು. ಆದರೆ ಆ ಬಳಿಕ ಜೊತೆಗೂಡಿದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಉತ್ತಮ ಆಟದೊಂದಿಗೆ ತಂಡಕ್ಕೆ ಜಯ ತಂದುಕೊಟ್ಟರು.
ಅದರಲ್ಲೂ ಸಿಎಸ್ಕೆ ಬೌಲರುಗಳ ವಿರುದ್ಧ ಅಬ್ಬರಿಸಿದ್ದ ಬಟ್ಲರ್ 48 ಎಸೆತಗಳಲ್ಲಿ ಅಜೇಯ 70 ರನ್ ಚಚ್ಚಿದರು. ಈ ಬಿರುಸಿನ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳು ಮೂಡಿಬಂದಿದ್ದವು. ಅಲ್ಲದೆ ಈ ಅಮೋಘ ಇನಿಂಗ್ಸ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ಒಲಿಯಿತು. ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿಗಿಂತ ಜೋಸ್ ಬಟ್ಲರ್ನ್ನು ಮತ್ತಷ್ಟು ಖುಷಿಪಡಿಸಿದ್ದು ಮಾತ್ರ ಧೋನಿ ನೀಡಿದ ಜೆರ್ಸಿ.
ಹೌದು, ಧೋನಿ 200ನೇ ಪಂದ್ಯದಲ್ಲಿ ಧರಿಸಿದ್ದ ಸಿಎಸ್ಕೆ ಜೆರ್ಸಿಯನ್ನು ರಾಜಸ್ಥಾನ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ಗೆ ನೀಡಿ ಅವರ ದಿನವನ್ನು ಇನ್ನಷ್ಟು ವಿಶೇಷಗೊಳಿಸಲಾಯಿತು. ಈ ಖುಷಿ ಕ್ಷಣ ಫೋಟೋವನ್ನು ಇಂಗ್ಲೆಂಡ್ ಆಟಗಾರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಏಕೆಂದರೆ ಜೋಸ್ ಬಟ್ಲರ್ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿ.
2019ರ ಐಸಿಸಿ ವಿಶ್ವಕಪ್ ವೇಳೆ ಕೂಡ ಜೋಸ್ ಬಟ್ಲರ್ ತಾನೊಬ್ಬ ಧೋನಿ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಇದೀಗ ಸಿಎಸ್ಕೆ ನಾಯಕನ ಮುಂದೆಯೇ ಭರ್ಜರಿ ಪ್ರದರ್ಶನ ನೀಡಿ, ಅವರ ವಿಶೇಷ ಜೆರ್ಸಿಯನ್ನು ತನ್ನದಾಗಿಸಿಕೊಂಡು ಹಿರಿ ಹಿರಿ ಹಿಗ್ಗಿದ್ದಾರೆ ಬಟ್ಲರ್.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ