IPL

  • associate partner

Jasprit Bumrah: ವಿರಾಟ್ ಕೊಹ್ಲಿ ವಿಕೆಟ್ ಪಡೆದು ವಿಶಿಷ್ಟ ದಾಖಲೆ ಬರದೆ ಜಸ್ಪ್ರೀತ್ ಬೂಮ್ರಾ

ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗಿಗಳ ಪೈಕಿ ಮೊದಲ ಸ್ಥಾನದಲ್ಲಿ ಭುವನೇಶ್ವರ್​ ಕುಮಾರ್​ ಇದ್ದಾರೆ. ಇವರು 136 ವಿಕೆಟ್​ ಪಡೆದಿದ್ದಾರೆ.

news18-kannada
Updated:October 29, 2020, 11:07 AM IST
Jasprit Bumrah: ವಿರಾಟ್ ಕೊಹ್ಲಿ ವಿಕೆಟ್ ಪಡೆದು ವಿಶಿಷ್ಟ ದಾಖಲೆ ಬರದೆ ಜಸ್ಪ್ರೀತ್ ಬೂಮ್ರಾ
Jasprit Bumrah
  • Share this:
ಅದು 2013ರ ಐಪಿಎಲ್​. ಜಸ್ಪ್ರೀತ್​ ಬೂಮ್ರಾ ಮೊದಲ ಬಾರಿಗೆ ಐಪಿಎ​ಲ್​ನಲ್ಲಿ ಬೌಲಿಂಗ್​ಗೆ ಇಳಿದಿದ್ದರು. ಮೊದಲಿಗರಾಗಿ ಅವರು ಔಟ್​ ಮಾಡಿದ್ದು, ವಿರಾಟ್​ ಕೊಹ್ಲಿ ಅವರನ್ನ. ವಿಶೇಷ ಎಂದರೆ, ನಿನ್ನೆ ಕೂಡ ವಿರಾಟ್​ ಅವರನ್ನು ಬೂಮ್ರಾ ಔಟ್​ ಮಾಡಿದ್ದಾರೆ. ಇದು ಅವರ ನೂರನೇ ವಿಕೆಟ್​ ಅನ್ನೋದು ವಿಶೇಷ. ಈ ಮೂಲಕ ಬೂಮ್ರಾ ವಿಶಿಷ್ಟ ದಾಖಲೆ ಬರೆದಿದ್ದಾರೆ.

ಐಪಿಎಲ್​ನಲ್ಲಿ 100 ವಿಕೆಟ್​ ಪಡೆದ ಏಳನೇ ಭಾರತೀಯ ಎನ್ನುವ ಖ್ಯಾತಿಗೆ ಬೂಮ್ರಾಗೆ ದೊರೆತಿದೆ. ಬೂಮ್ರಾ ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಔಟ್​ ಮಾಡುತ್ತಿದ್ದಂತೆ ಐಪಿಎಲ್​ನಲ್ಲಿ 100 ವಿಕೆಟ್​ ಪಡೆದ ವೇಗಿಗಳ ಸಾಲಿಗೆ ಸೇರ್ಪಡೆ ಆದರು. ಬೂಮ್ರಾ ಮೊದಲ ವಿಕೆಟ್​ ಹಾಗೂ 100ನೇ ವಿಕೆಟ್​ ಕೊಹ್ಲಿ ಅವರದ್ದು ಅನ್ನೋದು ವಿಶೇಷ.

ಈ ಬಗ್ಗೆ ಟ್ವೀಟ್​ ಮಾಡಿರುವ ಮುಂಬೈ ಇಂಡಿಯನ್ಸ್​, ಬೂಮ್ರಾ ಅವರು ಮೊದಲ ಬಾರಿಗೆ ವಿಕೆಟ್​ ತೆಗೆದ ಹಾಗೂ ನಿನ್ನೆ ವಿಕೆಟ್​ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದೆ. ಹೇಗೆ ಆರಂಭವಾಯಿತು ಮತ್ತು ಇದು ಹೇಗೆ ಹೋಗುತ್ತಿದೆ ಎಂದು ಹೇಳಿದ್ದಾರೆ. ಬೂಮ್ರಾ ಈವರೆಗೆ 89 ಪಂದ್ಯಗಳಲ್ಲಿ ಆಡಿದ್ದು, 102 ವಿಕೆಟ್​ ಕಿತ್ತಿದ್ದಾರೆ. 4/20 ಅವರ ಶ್ರೇಷ್ಠ ಪ್ರದರ್ಶನವಾಗಿದೆ. 7.53 ಎಕಾನಮಿಯನ್ನು ಬೂಮ್ರಾ ಹೊಂದಿದ್ದಾರೆ.


ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗಿಗಳ ಪೈಕಿ ಮೊದಲ ಸ್ಥಾನದಲ್ಲಿ ಭುವನೇಶ್ವರ್​ ಕುಮಾರ್​ ಇದ್ದಾರೆ. ಇವರು 136 ವಿಕೆಟ್​ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಉಮೇಶ್​ ಯಾದವ್​ ಇದ್ದು ಅವರು 119 ವಿಕೆಟ್​ ಗಳಿಸಿದ್ದಾರೆ. ಆಶೀಶ್​ ನೆಹ್ರಾ (106), ವಿನಯ್​ ಕುಮಾರ್​ (105), ಸಂದೀಪ್​ ಶರ್ಮ (103), ಜಸ್​ಪ್ರೀತ್​ ಬೂಮ್ರಾ (102) ಹಾಗೂ ಜಹೀರ್​ ಖಾನ್​ (102) 100 ವಿಕೆ​ಟ್​ ಪಡೆದ ಪಟ್ಟಿಯಲ್ಲಿರುವ ಭಾರತೀಯ ವೇಗಿಗಳು.
Published by: Rajesh Duggumane
First published: October 29, 2020, 10:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading