ಇಶಾನ್ ಕಿಶನ್...ಪ್ರಸ್ತುತ ಕ್ರಿಕೆಟ್ ಅಂಗಳ ಟಾಪ್ ಟಾಪಿಕ್ನಲ್ಲಿರುವ ಹೆಸರು. ಕಳೆದ ಕೆಲ ಸೀಸನ್ಗಳಿಂದಲೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಕಿಶನ್ ಸುದ್ದಿಯಾಗಿದ್ದು ಕಡಿಮೆ. ಅಪಾರ ಪ್ರತಿಭೆ ಹೊಂದಿದ್ದರೂ ಸ್ಟಾರ್ ಆಟಗಾರರಿಂದ ತುಂಬಿ ತುಳುಕುತ್ತಿರುವ ಮುಂಬೈ ಬಳಗದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಈ ಬಾರಿ ಕೂಡ ಅದೇ ನಡೆದಿತ್ತು. 13ನೇ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಆಡಿದ ಮೊದಲೆರಡು ಪಂದ್ಯಗಳಲ್ಲಿ ಚಾನ್ಸ್ ಸಿಗಲಿಲ್ಲ. ಆದರೆ ಎಡಗೈ ಬ್ಯಾಟ್ಸ್ಮನ್ ಸೌರಭ್ ತಿವಾರಿ ಗಾಯಗೊಂಡ ಹಿನ್ನೆಲೆಯಲ್ಲಿ ರೋಹಿತ್ ಇಶಾನ್ಗೆ ಮಣೆ ಹಾಕಿದ್ದರು.
ಸಿಕ್ಕಾ ಅವಕಾಶವನ್ನು ಬಳಸಿಕೊಂಡ ಇಶಾನ್ ಕಿಶನ್ ಮುಂಬೈ ಬಳಗಕ್ಕೆ ಅಚ್ಚರಿ ಮೂಡಿಸಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯಕ್ಕೆ ನಡುಕ ಹುಟ್ಟಿಸಿದ್ದರು. ಅಂತಹದೊಂದು ಸ್ಪೋಟಕ ಇನಿಂಗ್ಸ್ ಇಶಾನ್ ಆಡಿದ್ದರು. ಕೇವಲ 58 ಎಸೆತಗಳನ್ನು ಎದುರಿಸಿದ್ದ ಯುವ ದಾಂಡಿಗ ಸಿಡಿಸಿದ್ದು 9 ಸಿಕ್ಸರ್ ಹಾಗೂ 2 ಬೌಂಡರಿ. ಈ ಮೂಲಕ ಐಪಿಎಲ್ನಲ್ಲಿ ಗರಿಷ್ಠ ವೈಯುಕ್ತಿಕ ಮೊತ್ತವಾಗಿ 99 ರನ್ ದಾಖಲಿಸಿ ಶತಕ ವಂಚಿತರಾದರು. ಆದರೆ ಈ ಯುವ ಬ್ಯಾಟ್ಸ್ಮನ್ ಆರ್ಸಿಬಿಯ ಅನುಭವಿ ಬೌಲಿಂಗ್ ಪಡೆ ಮುಂದೆ ಒಂಟಿಯಾಗಿ ನಿಂತು 9 ಭರ್ಜರಿ ಸಿಕ್ಸರ್ ಬಾರಿಸಿರುವುದು ಅಚ್ಚರಿ ಕಾರಣವಾಗಿತ್ತು. ಆದರೆ ದುರಾದೃಷ್ಟವಶಾತ್ ಮುಂಬೈ ಇಂಡಿಯನ್ಸ್ ಸೂಪರ್ ಓಪರ್ನಲ್ಲಿ ಸೋಲುವ ಮೂಲಕ ಇಶಾನ್ ಹೋರಾಟ ವ್ಯರ್ಥವಾಯಿತು.
ಆದರೆ ನಿಯಮಿತ ಓವರ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಇಶಾನ್ರನ್ನು ಮುಂಬೈ ನಾಯಕ ರೋಹಿತ್ ಶರ್ಮಾ ಸೂಪರ್ ಓವರ್ನಲ್ಲಿ ಕಣಕ್ಕಿಳಿಸಿರಲಿಲ್ಲ. ಪಂದ್ಯದ ಸೋಲಿನೊಂದಿಗೆ ಇದು ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಬಗ್ಗೆ ಖದ್ದು ರೋಹಿತ್ ಶರ್ಮಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಸೂಪರ್ ಓವರ್ನಲ್ಲಿ ಇಶಾನ್ರನ್ನು ಏಕೆ ಬ್ಯಾಟಿಂಗ್ಗೆ ಕಳುಹಿಸಲಿಲ್ಲ ಎಂಬುದಕ್ಕೆ ಕಾರಣ ತಿಳಿಸಿದ್ದಾರೆ.
ಪಂದ್ಯವು ಟೈ ಆದಾಗ ನಾವು ಇಶಾನ್ ಅವರನ್ನೇ ಕಣಕ್ಕಿಳಿಸಲು ಬಯಸಿದ್ದೆವು. ಆದರೆ ಯುವ ಆಟಗಾರ ತುಂಬಾ ದಣಿದಿದ್ದರು. ಹಾಗೆಯೇ ಮತ್ತೆ ಆರಾಮದಾಯಕವಾಗಿ ಬ್ಯಾಟ್ ಬೀಸಲು ಅವರು ಫ್ರೆಶ್ ಆಗಿ ಕಾಣಿಸಲಿಲ್ಲ. ಹೀಗಾಗಿ ಬಿಟ್ ಹಿಟ್ಟರ್ ಹಾರ್ದಿಕ್ ಪಾಂಡ್ಯರನ್ನು ಕಣಕ್ಕಿಳಿಸಬೇಕಾಯಿತು ಎಂದು ರೋಹಿತ್ ತಿಳಿಸಿದ್ದಾರೆ.
ನಾವು ಸೂಪರ್ ಓವರ್ನಲ್ಲಿ 7 ರನ್ಗಳನ್ನು ಮಾತ್ರ ಗಳಿಸಿದೆವು. ಇದನ್ನು ಸೇವ್ ಮಾಡುವ ಪ್ರಯತ್ನವನ್ನು ಖಂಡಿತ ಮಾಡಿದ್ದೇವೆ. ಆದರೆ ಒಂದು ಅನಿರೀಕ್ಷಿತ ಬೌಂಡರಿಯಿಂದಾಗಿ ಪಂದ್ಯ ಸೋಲಬೇಕಾಯಿತು ಎಂದು ಹಿಟ್ಮ್ಯಾನ್ ಹೇಳಿದರು. ಇದರ ಹೊರತಾಗಿ ಆರ್ಸಿಬಿ ನೀಡಿದ್ದ 202 ರನ್ಗಳ ಟಾರ್ಗೆಟ್ನ್ನು ಬೆನ್ನತ್ತುತ್ತೇವೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಎಲ್ಲರ ಊಹೆಯನ್ನು ತಲೆಕೆಳಗಾಗಿಸಿ ಇಶಾನ್ ಹಾಗೂ ಪೊಲಾರ್ಡ್ ಗುರಿ ಸಮೀಪ ತಲುಪಿಸಿದ್ದರು. ನಿಯಮಿತ ಓವರ್ನಲ್ಲಿ ನಾವು ಮಾಡಿದ ಕಂಬ್ಯಾಕ್ ಮಾತ್ರ ಅದ್ಭುತವಾಗಿತ್ತು ಎಂದು ರೋಹಿತ್ ಶರ್ಮಾ ತಿಳಿಸಿದರು.
99 ರನ್ಗಳ ಭರ್ಜರಿ ಬ್ಯಾಟಿಂಗ್ನೊಂದಿಗೆ ಇಶಾನ್ ಕಿಶನ್ ಮುಂಬೈ ಪಾಳಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸೌರಭ್ ತಿವಾರಿ ಸ್ಥಾನವು ಯುವ ದಾಂಡಿಗ ಒಲಿಯುವುದಂತು ಪಕ್ಕಾ. ಹೀಗಾಗಿ ಮುಂಬರುವ ಪಂದ್ಯಗಳಲ್ಲೂ ಪುಟ್ಟ ಪಟಾಕಿಯಿಂದ ದೊಡ್ಡ ಸದ್ದಂತು ನಿರೀಕ್ಷಿಸಬಹುದು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ