HOME » NEWS » Ipl » IPL2021 RCB APPROACHING MILESTONES ZP

IPL 2021: ಇಂದಿನ ಪಂದ್ಯ RCB ಪಾಲಿಗೆ ಬಹಳ ಮಹತ್ವದ್ದು..!

ಈ ಬಾರಿ ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿ ಐಪಿಎಲ್ ಅಭಿಯಾನ ಆರಂಭಿಸಿರುವ ಆರ್​ಸಿಬಿ, ದ್ವಿತೀಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಗೆದ್ದಿದೆ. ಹಾಗೆಯೇ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸುವ ಗೆಲುವಿನ ನಾಗಾಲೋಟ ಮುಂದುವರೆಸಿದೆ.

news18-kannada
Updated:April 22, 2021, 4:37 PM IST
IPL 2021: ಇಂದಿನ ಪಂದ್ಯ RCB ಪಾಲಿಗೆ ಬಹಳ ಮಹತ್ವದ್ದು..!
RCB
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ. ಈಗಾಗಲೇ ಹ್ಯಾಟ್ರಿಕ್ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿರುವ ಆರ್​ಸಿಬಿ ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡಲಿದೆ. ಈ ಪಂದ್ಯದ ಮೂಲಕ 200 ಐಪಿಎಲ್​ ಪಂದ್ಯವನ್ನಾಡಿದ ಎರಡನೇ ತಂಡ ಎಂಬ ಮೈಲುಗಲ್ಲನ್ನು ಆರ್​ಸಿಬಿ ಸ್ಥಾಪಿಸಲಿದೆ. ಕಳೆದ 13 ಸೀಸನ್​ಗಳಿಂದ ಐಪಿಎಲ್ ಆಡುತ್ತಿರುವ ಆರ್​ಸಿಬಿ 199 ಪಂದ್ಯಗಳಲ್ಲಿ ಮೂರು ಬಾರಿ ಮಾತ್ರ ಫೈನಲ್ ಪಂದ್ಯವನ್ನಾಡಿದೆ. ಆದರೆ ದುರಾದೃಷ್ಟ ಕಪ್ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿಲ್ಲ.

ಆದರೆ ಈ ಬಾರಿ ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿ ಐಪಿಎಲ್ ಅಭಿಯಾನ ಆರಂಭಿಸಿರುವ ಆರ್​ಸಿಬಿ, ದ್ವಿತೀಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಗೆದ್ದಿದೆ. ಹಾಗೆಯೇ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸುವ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇದೀಗ ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆಲ್ಲುವ ಮೂಲಕ 200ನೇ ಪಂದ್ಯವನ್ನು ಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ ಕೊಹ್ಲಿ ಪಡೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯವು ಆರ್​ಸಿಬಿ ಪಾಲಿಗೆ ಮಹತ್ವದೆನಿಸಿಕೊಂಡಿದೆ.
ಇನ್ನು ಐಪಿಎಲ್​ನಲ್ಲಿ 200 ಪಂದ್ಯಗಳನ್ನಾಡಿದ ಮೊದಲ ತಂಡ ಎಂಬ ಕೀರ್ತಿ ಮುಂಬೈ ಇಂಡಿಯನ್ಸ್​ಗೆ ಸಲ್ಲುತ್ತದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇದುವರೆಗೆ 207 ಪಂದ್ಯಗಳನ್ನು ಆಡಿದೆ. ಹಾಗೆಯೇ RCB ಈ ಸಾಧನೆ ಮಾಡಿದ 2ನೇ ತಂಡ ಎನಿಸಿಕೊಳ್ಳಲಿದೆ.

ಆರ್​ಸಿಬಿ ಇದುವರೆಗೆ 199 ಪಂದ್ಯಗಳನ್ನು ಆಡಿದ್ದು, ರಾಜಸ್ಥಾನ್ ರಾಯಲ್ಸ್​ ವಿರುದ್ದ ಗೆಲ್ಲುವ ಮೂಲಕ ಹೊಸ ಮೈಲುಗಲ್ಲಿನ ಪಂದ್ಯವನ್ನು ಸ್ಮರಣೀಯವಾಗಿಸಲು ತುದಿಗಾಲಲ್ಲಿ ನಿಂತಿದೆ ಆರ್​ಸಿಬಿ.
Published by: zahir
First published: April 22, 2021, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories