• ಹೋಂ
 • »
 • ನ್ಯೂಸ್
 • »
 • IPL
 • »
 • IPL2021: ಸೋಲಿನ ಬೆನ್ನಲ್ಲೇ ಕೆಕೆಆರ್ ನಾಯಕನಿಗೆ ದಂಡದ ಬರೆ..!

IPL2021: ಸೋಲಿನ ಬೆನ್ನಲ್ಲೇ ಕೆಕೆಆರ್ ನಾಯಕನಿಗೆ ದಂಡದ ಬರೆ..!

Eoin morgan

Eoin morgan

ಟೈಮ್-ಔಟ್​ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಮೊದಲ ಒಂದು ಗಂಟೆಯೊಳಗೆ 14.11 ಓವರ್​ಗಳನ್ನು ಬೌಲ್ ಮಾಡಲೇಬೇಕು. ಹೊಸ ನಿಯಮದಂತೆ ಯಾವುದೇ ಆಡಚಣೆ ಉಂಟಾಗದ ಪಂದ್ಯದ ಒಂದು ಇನಿಂಗ್ಸ್​ 90 ನಿಮಿಷಗಳಲ್ಲಿ ಮುಗಿಸಬೇಕು.

 • Share this:

  ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ್ದ ಸಿಎಸ್​ಕೆ ತಂಡಕ್ಕೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ಭರ್ಜರಿ ಆರಂಭ ಒದಗಿಸಿದ್ದರು.


  ಅದರಲ್ಲೂ ಅಜೇಯರಾಗಿ ಉಳಿದ ಡುಪ್ಲೆಸಿಸ್ 60 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳನ್ನು ಒಳಗೊಂಡಂತೆ 95 ರನ್ ಬಾರಿಸಿದ್ದರು. ಪರಿಣಾಮ ಸಿಎಸ್​ಕೆ ಮೊತ್ತವು ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಪೇರಿಸಿತ್ತು. ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್​ಗೆ ಪವರ್​ಪ್ಲೇನಲ್ಲೇ ಸಿಎಸ್​ಕೆ ವೇಗಿ ದೀಪಕ್ ಚಹರ್ ಶಾಕ್ ನೀಡಿದ್ದರು. ತಮ್ಮ 4 ಓವರ್​ನಲ್ಲಿ 29 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಉರುಳಿಸಿದ್ದರು. ಅಲ್ಲದೆ ಕೇವಲ 31 ರನ್​ಗಳಿಗೆ 5 ವಿಕೆಟ್ ಪಡೆಯುವ ಮೂಲಕ ಸಿಎಸ್​ಕೆ ತನ್ನ ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಆದರೆ ಬಳಿಕ ಆರ್ಭಟಿಸಿದ ಆ್ಯಂಡ್ರೆ ರಸೆಲ್ (54), ದಿನೇಶ್ ಕಾರ್ತಿಕ್ (40) ಹಾಗೂ ಪ್ಯಾಟ್​ ಕಮಿನ್ಸ್​ (66) ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಅಲ್ಲದೆ ಭರ್ಜರಿಯಾಗಿ ಕಂಬ್ಯಾಕ್ ಮಾಡುವ ಮೂಲಕ ಅಂತಿಮವಾಗಿ 202 ರನ್​ಗಳಿಸಿತ್ತು. ಆದರೆ 20ನೇ ಓವರ್​ನಲ್ಲಿ ಸರ್ವಪತನ ಕಂಡ ಪರಿಣಾಮ ಕೆಕೆಆರ್ 18 ರನ್​ಗಳಿಂದ ಸೋಲೊಪ್ಪಿಕೊಂಡಿತ್ತು.


  ಈ ಸೋಲಿನ ಬೆನ್ನಲ್ಲೇ ಕೆಕೆಆರ್ ನಾಯಕ ಇಯಾನ್ ಮೋರ್ಗನ್​ ಅವರಿಗೆ ದಂಡ 12 ಲಕ್ಷ ರೂ. ವಿಧಿಸಲಾಗಿದೆ. ಮೊದಲ ಇನಿಂಗ್ಸ್​ ವೇಳೆ ಕೆಕೆಆರ್ ಸ್ಲೋ ಓವರ್ ರೇಟ್ ಬೌಲಿಂಗ್ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. 2021ರ ಇಂಡಿಯನ್ ಪ್ರಿಮಿಯರ್ ಲೀಗ್​ನ ಹೊಸ ನೀತಿ ಸಂಹಿತೆ ಪ್ರಕಾರ 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಅಂದರೆ ಇನಿಂಗ್ಸ್​ವೊಂದಕ್ಕೆ 90 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅದರಂತೆ​ 90 ನಿಮಿಷಗಳಲ್ಲಿ 20 ಓವರ್ಸ್ ಮುಗಿಯಬೇಕು. ಈ ಹಿಂದೆ 20ನೇ ಓವರ್​ನ್ನು 90ನೇ ನಿಮಿಷದಿಂದ ಆರಂಭಿಸಲು ಅವಕಾಶವಿತ್ತು. ಆದರೀಗ 1 ಗಂಟೆ 30 ನಿಮಿಷಗಳ ಒಳಗೆ ಮೊದಲ ಇನಿಂಗ್ಸ್ ಬೌಲಿಂಗ್ ಮುಕ್ತಾಯವಾಗಬೇಕು.


  ಹಾಗೆಯೇ ಟೈಮ್-ಔಟ್​ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಮೊದಲ ಒಂದು ಗಂಟೆಯೊಳಗೆ 14.11 ಓವರ್​ಗಳನ್ನು ಬೌಲ್ ಮಾಡಲೇಬೇಕು. ಹೊಸ ನಿಯಮದಂತೆ ಯಾವುದೇ ಆಡಚಣೆ ಉಂಟಾಗದ ಪಂದ್ಯದ ಒಂದು ಇನಿಂಗ್ಸ್​ 90 ನಿಮಿಷಗಳಲ್ಲಿ ಮುಗಿಸಬೇಕು. ಇಲ್ಲಿ 85 ನಿಮಿಷಗಳನ್ನು ಆಟಕ್ಕೆ ನಿಗದಿಪಡಿಸಲಾಗಿದ್ದರೆ, 5 ನಿಮಿಷಗಳ ಎರಡು ಟೈ ಔಟ್​ ಕೂಡ ನೀಡಲಾಗುತ್ತದೆ. ಆದರೆ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಹೀಗಾಗಿ ಕೆಕೆಆರ್ ತಂಡದ ನಾಯಕ ಇಯಾನ್ ಮೋರ್ಗನ್​ಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.

  Published by:zahir
  First published: