IPL

  • associate partner

MS Dhoni: ಸೂಪರ್ ಕಿಂಗ್ಸ್​ ಧೋನಿ: ಐಪಿಎಲ್ ಇತಿಹಾಸದಲ್ಲಿ ಎಂಎಸ್​ಡಿಯಿಂದ ಯಾರೂ ಮಾಡಿರದ ಸಾಧನೆ

ಸದ್ಯ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಧೋನಿ ಪಾಲಿನ 200ನೇ ಐಪಿಎಲ್ ಪಂದ್ಯವಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

news18-kannada
Updated:October 19, 2020, 8:00 PM IST
MS Dhoni: ಸೂಪರ್ ಕಿಂಗ್ಸ್​ ಧೋನಿ: ಐಪಿಎಲ್ ಇತಿಹಾಸದಲ್ಲಿ ಎಂಎಸ್​ಡಿಯಿಂದ ಯಾರೂ ಮಾಡಿರದ ಸಾಧನೆ
ಎಂ ಎಸ್ ಧೋನಿ.
  • Share this:
ಅಬುಧಾಬಿ (ಅ. 19): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಐಪಿಎಲ್ 13ನೇ ಆವೃತ್ತಿಯ 37ನೇ ಪಂದ್ಯ ನಡೆಯುತ್ತಿದ್ದು, ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈಗಾಗಲೇ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 

ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 2008ರ ಚೊಚ್ಚಲ ಆವೃತ್ತಿಯ ಮೂಲಕ ಐಪಿಎಲ್​ ಪದಾರ್ಪಣೆ ಮಾಡಿದ್ದ ಧೋನಿ ಇಲ್ಲಿಯವರೆಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 11 ಆವೃತ್ತಿಗಳಿಂದ 169 ಪಂದ್ಯ, ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಪರ 2 ಆವೃತ್ತಿಗಳಿಂದ 30 ಪಂದ್ಯಗಳನ್ನಾಡಿದ್ದಾರೆ.

CSK vs RR, IPL 2020 Live Scoreಸದ್ಯ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಧೋನಿ ಪಾಲಿನ 200ನೇ ಐಪಿಎಲ್ ಪಂದ್ಯವಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಯಾರೂ ಮಾಡಿರದ ನೂತನ ಸಾಧನೆ ಧೋನಿ ಹೆಸರಿಗೆ ಸೇರ್ಪಡೆಯಾಗಿದೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ(197), ಮೂರನೇ ಸ್ಥಾನ ಸುರೇಶ್ ರೈನಾ(193) ಇದ್ದಾರೆ. ಧೋನಿ ಐಪಿಎಲ್​ನಲ್ಲಿ 200 ಪಂದ್ಯಗಳನ್ನಾಡಿದ್ದು, 23 ಅರ್ಧಶತಕ ಸೇರಿದಂತೆ 4,568 ರನ್ ​ಗಳಿಸಿದ್ದಾರೆ. 84 ಅವರ ಗರಿಷ್ಠ ಸ್ಕೋರ್ ಆಗಿದೆ.

IPL 2020: ಬಲಿಷ್ಠ ಮುಂಬೈ ಇಂಡಿಯನ್ಸ್​​ನ್ನು ಅತೀ ಹೆಚ್ಚು ಬಾರಿ ಸೋಲಿಸಿದ ತಂಡ ಯಾವುದು ಗೊತ್ತೇ?

ಇನ್ನೂ ನಾಯಕನಾಗಿ ಧೋನಿ ತನ್ನದೇ ಆದ ವಿಶೇಷ ದಾಖಲೆಯನ್ನು ಸಹ ಹೊಂದಿದ್ದರೆ. ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕರ ಪಟ್ಟಿಯಲ್ಲಿ ಎಂಎಸ್​ಡಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಒಟ್ಟು 183 ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನ ಮುನ್ನೆಡೆಸಿರುವ ಧೋನಿ 107 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದು, 75 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶವಿಲ್ಲ. ಹೀಗಾಗಿ ಒಟ್ಟಾರೆ ಗೆಲುವಿನ ಸರಾಸರಿಯನ್ನು ನೋಡುವುದಾದರೆ ಶೇ. 58.79 ನಷ್ಟಿದೆ.
Published by: Vinay Bhat
First published: October 19, 2020, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading