IPL Qualifier 2021| KKR ವಿರುದ್ಧ DC ರೋಚಕ ಸೋಲು; ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರಿಷಬ್ ಪಂತ್, ಪೃಥ್ವಿ ಶಾ!
ಚೊಚ್ಚಲ ಪ್ರಶಸ್ತಿ ಗೆಲ್ಲುವ ಡೆಲ್ಲಿ ಕ್ಯಾಪಿಟಲ್ಸ್ ಕನಸು ಮಾತ್ರ ರಾಹುಲ್ ತ್ರಿಪಾಠಿ ಸಿಡಿಸಿದ ಸಿಕ್ಸರ್ ನೊಂದಿಗೆ ಭಗ್ನವಾಗಿತ್ತು. ಪರಿಣಾಮ ಡಿಸಿ ನಾಯಕ ರಿಷಭ್ ಪಂತ್ ಮತ್ತು ಆರಂಭಿಕ ಪೃಥ್ವಿ ಶಾ ಸೋಲಿನಿಂದ ಅಸಮಾಧಾನಗೊಂಡರು, ಇಬ್ಬರೂ ಪಂದ್ಯದ ನಂತರ ಕಣ್ಣೀರಿಟ್ಟಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ.
ಶಾರ್ಜಾದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2021 (IPL 2021) ಕ್ವಾಲಿಫೈಯರ್ 2 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಸೋಲನುಭವಿಸಿತ್ತು. ಪಂದ್ಯಕ್ಕೆ ಮುನ್ನ ಗೆಲ್ಲುವ ಫೇವರಿಟ್ ತಂಡವಾಗಿದ್ದ ಡೆಲ್ಲಿ, ಕೋಲ್ಕತ್ತಾ ತಂಡದ ಶಿಸ್ತುಬದ್ಧ ಬೌಲಿಂಗ್ಗೆ ಬೆಚ್ಚಿ ಬಿದ್ದಿತ್ತು. ಪರಿಣಾಮ ಬ್ಯಾಟ್ಸ್ಮನ್ಗಳ ವಿಫಲತೆಯಿಂದಾಗಿ ರಿಷಬ್ ಪಂತ್ ನೇತೃತ್ವದ ತಂಡ ಮಹತ್ವದ ಪಂದ್ಯದಲ್ಲಿ ಸೋಲನುಭವಿಸಿತ್ತು. ಆದರೆ, ಪಂದ್ಯದ ಸೋಲಿನ ನಂತರ ನಾಯಕ ರಿಷಬ್ ಪಂತ್ ಮತ್ತು ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಈ ಸೋಲಿಗಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಕೆಕೆಆರ್ಗೆ ರೋಚಕ ಗೆಲುವು!
ನಿನ್ನೆ ಸಂಜೆ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಶಿಸ್ತುಬದ್ಧ ಬೌಲಿಂಗ್ ಮೂಲಕ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ ಡೆಲ್ಲಿ ಕ್ಯಾಪಿಟಲ್ ಅನ್ನು ಇನ್ನಿಲ್ಲದಂತೆ ಕಾಡಿತ್ತು. ಪ್ರಮುಖ ಬ್ಯಾಟ್ಸ್ಮನ್ಗಳಾದ ಮಾರ್ಕಸ್ ಸ್ಟೊಯ್ನೀಸ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ವೈಫಲ್ಯ ಡೆಲ್ಲಿಯನ್ನು ಇನ್ನಿಲ್ಲದಂತೆ ಕಾಡಿತ್ತು. ಒಂದು ಹಂತದಲ್ಲಿ ಡೆಲ್ಲಿ 120 ರನ್ ಗಳಿಸುವುದೇ ಕಷ್ಟವಾಗಿತ್ತು. ಆದರೆ, ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ನಿಗದಿತ 20 ಓವರ್ಗಳಿಗೆ 135 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ಗೆಲುವಿಗೆ ಕೊನೆಯ ನಾಲ್ಕು ಓವರ್‌ಗಳಲ್ಲಿ 13 ರನ್ ಬೇಕಿತ್ತು. ಆದರೆ ಈ ನಾಲ್ಕು ಓವರ್ನಲ್ಲಿ ಸತತ 5 ವಿಕೆಟ್ ಬಿದ್ದ ಪರಿಣಾಮ ಕೆಕೆಆರ್ ದಿಢೀರ್ ಸೋಲಿನ ಬಾಗಿಲಿಗೆ ಬಂದು ನಿಂತಿತ್ತು. ರವಿಚಂದ್ರನ್ ಅಶ್ವಿನ್ ಬ್ಯಾಕ್-ಟು-ಬ್ಯಾಕ್ ವಿಕೆಟ್ ಮೂಲಕ ಕೆಕೆಆರ್ ಅನ್ನು ಕಾಡಿದ್ದರು. ಕೊನೆಯ 2 ಎಸೆತಕ್ಕೆ 6 ರನ್ಗಳ ಅಗತ್ಯ ಇತ್ತು. ಈ ಹಂತದಲ್ಲಿ ಡೆಲ್ಲಿ ಗೆಲ್ಲುವುದು ಹೆಚ್ಚು ಕಡಿಮೆ ಖಚಿತವಾಗಿತ್ತು. ಆದರೆ, ಕೊನೆಯ ಓವರ್ನ 5ನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್ ಬಾರಿಸುವ ಮೂಲಕ ಕೊನೆಗೂ ಪಂದ್ಯವನ್ನು ಗೆಲ್ಲಿಸಿದ್ದರು. ಈ ಮೂಲಕ ಕೆಕೆಆರ್ 3 ನೇ ಬಾರಿ ಫೈನಲ್ಗೆ ಏರುವಂತಾಗಿತ್ತು.
ಕಣ್ಣೀರಿಟ್ಟ ಪಂತ್-ಅಯ್ಯರ್:
ಆದರೆ, ಚೊಚ್ಚಲ ಪ್ರಶಸ್ತಿ ಗೆಲ್ಲುವ ಡೆಲ್ಲಿ ಕ್ಯಾಪಿಟಲ್ಸ್ ಕನಸು ಮಾತ್ರ ರಾಹುಲ್ ತ್ರಿಪಾಠಿ ಸಿಡಿಸಿದ ಸಿಕ್ಸರ್ ನೊಂದಿಗೆ ಭಗ್ನವಾಗಿತ್ತು. ಪರಿಣಾಮ ಡಿಸಿ ನಾಯಕ ರಿಷಭ್ ಪಂತ್ ಮತ್ತು ಆರಂಭಿಕ ಪೃಥ್ವಿ ಶಾ ಸೋಲಿನಿಂದ ಅಸಮಾಧಾನಗೊಂಡರು, ಇಬ್ಬರೂ ಪಂದ್ಯದ ನಂತರ ಕಣ್ಣೀರಿಟ್ಟಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ.
ಶಾ ಕಣ್ಣೀರು ಹಾಕುತ್ತಾ ಮೈದಾನಕ್ಕೆ ಇಳಿದಿದ್ದಾರೆ, ಪಕ್ಕದಲ್ಲೇ ನಾಯಕ ರಿಷಬ್ ಪಂತ್ ಸಹ ಭಾವುಕರಾಗಿದ್ದರು. ಇದನ್ನು ನೋಡುತ್ತಿದ್ದಂತೆ ಸಹ ಆಟಗಾರರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ. ತರಬೇತುದಾರ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸಹ ಸಮಾಧಾನಪಡಿಸುತ್ತಿರು ಈ ಎಲ್ಲಾ ದೃಶ್ಯಗಳೂ ಕ್ಯಾಮೆರಾದಲ್ಲಿ ದಾಖಲಾಗಿದೆ.
Ricky Ponting picks up a heartbroken Rishabh Pant from the dugout, puts an arm around his shoulder and has some words with him. 🤗 pic.twitter.com/HqRu82Imgd
ಈ ಪಂದ್ಯದಲ್ಲಿ ಶುಬ್‌ಮನ್ ಗಿಲ್ 46 ಮತ್ತು ವೆಂಕಟೇಶ್ ಅಯ್ಯರ್ 55 ರನ್ ಉಪಯುಕ್ತ ಕೊಡುಗೆಯ ಕಾರಣದಿಂದ ಡೆಲ್ಲಿ ವಿರುದ್ಧ ಕೆಕೆಆರ್ ಗೆಲುವು ಸಾಧಿಸಿದೆ. ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೆಕೆಆರ್ ಸೆಣಸಲಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ