IPL

  • associate partner
HOME » NEWS » Ipl » IPL FINAL WHO IS MOST YOUNG PLAYERS PERFORMING WELL IN IPL 2020 HERE IS THE DETAILS VB

IPL 2020 ರಲ್ಲಿ ಧೂಳೆಬ್ಬಿಸಿದ ಚಿಗುರು ಮೀಸೆಯ ಹುಡುಗರು ಇವರೇ ನೋಡಿ..!

ಈ ಬಾರಿಯ ಐಪಿಎಲ್​ನಲ್ಲಂತು ಭಾರತದ ಯುವ ಆಟಗಾರರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದರು. ಈ ಮೂಲಕ ಕೆಲವರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಡುವ ಸೂಚನೆ ನೀಡಿದರೆ, ಇನ್ನೂ ಕೆಲವರು ಆಯ್ಕೆ ಕೂಡ ಆದರು.

news18-kannada
Updated:November 11, 2020, 6:49 PM IST
IPL 2020 ರಲ್ಲಿ ಧೂಳೆಬ್ಬಿಸಿದ ಚಿಗುರು ಮೀಸೆಯ ಹುಡುಗರು ಇವರೇ ನೋಡಿ..!
IPL 2020
  • Share this:
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ದೂರದ ಯುಎಇನಲ್ಲಿ ನಡೆದು ಮುಂಬೈ ಇಂಡಿಯನ್ಸ್ 5ನೇ ಬಾರಿ ಚಾಂಪಿಯನ್ ಆಗುವ ಮೂಲಕ ತೆರೆ ಬಿದ್ದಿದೆ. ಖಾಲಿ ಮೈದಾನದಲ್ಲಿ ಪಂದ್ಯ ನಡೆದರೂ ಐಪಿಎಲ್ ಕ್ರೇಜ್ ಮಾತ್ರ ಮುಂಚಿನಂತೆ ಇತ್ತು. ಆಟಗಾರರಂತು ಖಾಲಿ ಮೈದಾನದಲ್ಲೇ ಅಮೋಘ ಪ್ರದರ್ಶನ ನೀಡಿದರು. ಅದರಲ್ಲೂ ಭಾರತದ ಯುವ ಆಟಗಾರರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದರು. ಈ ಮೂಲಕ ಕೆಲವರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಡುವ ಸೂಚನೆ ನೀಡಿದರೆ, ಇನ್ನೂ ಕೆಲವರು ಆಯ್ಕೆ ಕೂಡ ಆದರು. ಈವರೆಗೆ ಹೆಸರೇ ತಿಳಿದಿರದ ಅನೇಕ ಆಟಗಾರರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಕತ್ತಲು ಕಳೆದು ಬೆಳಗಾಗುವಷ್ಟರಲ್ಲಿ ಫೇಮಸ್ ಆದರು.

ದೇವದತ್ ಪಡಿಕ್ಕಲ್:

ಕರ್ನಾಟಕದ ಮತ್ತೊಬ್ಬ ಯುವ ಪ್ರತಿಭೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅವರೇ ಆರ್​ಸಿಬಿ ತಂಡದ ನಂಬಿಕೆಯ ಓಪನರ್ ದೇವದತ್ ಪಡಿಕ್ಕಲ್. ಕಳೆದ ವರ್ಷವೇ ಇವರು ಆರ್​ಸಿಬಿ ತಂಡದಲ್ಲಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಮೇಲೆ ದಾಖಲೆ ಬರೆದು ಉತ್ತಮ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಆಡಿದ 15 ಪಂದ್ಯಗಳಲ್ಲಿ 5 ಅರ್ಧಶತಕ ಸಹಿತ 473 ರನ್ ಬಾರಿಸಿದ್ದಾರೆ.

IPL 2021: ಐಪಿಎಲ್ 2021 ಯಾವಾಗ?, ಏಲ್ಲಿ?, ಹೊಸ ತಂಡ, ಹರಾಜು ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ

ರವಿ ಬಿಷ್ಟೋಯಿ:

ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಸ್ಪಿನ್ನರ್ ಆಗಿರುವ ರವಿ ಬಿಷ್ಟೋಯಿ ಕಳೆದ ವರ್ಷ ನಡೆದ ಅಂಡರ್-19 ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದವರಾಗಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಆಡಿರುವ 14 ಪಂದ್ಯಗಳಲ್ಲಿ 12 ವಿಕೆಟ್ ಕಿತ್ತು ಎದುರಾಳಿಗೆ ಮಾರಕವಾಗಿ ಪರಿಣಮಿಸಿದರು. ಬಿಷ್ಣೋಯ್ ಈ ಋತುವಿನಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್​ಸ್ಟೋ, ರಿಷಭ್ ಪಂತ್, ಇಯಾನ್ ಮಾರ್ಗನ್ ಸೇರಿದಂತೆ ಕೆಲವು ಟಾಪ್ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ರಾಹುಲ್ ತೇವಾಟಿಯ:ಐಪಿಎಲ್​ನಲ್ಲಿ ಈ ವರ್ಷ ಹೆಚ್ಚು ಪ್ರಸಿದ್ದಿ ಪಡೆದ ಆಟಗಾರ ಎಂದರೆ ರಾಹುಲ್ ತೇವಾಟಿಯ. ಅನೇಕ ಬಾರಿ ಆರ್​ಆರ್​ ಸೋಲುವ ಪಂದ್ಯವನ್ನು ತಮ್ಮ ಬ್ಯಾಟಿಂಗ್ ಶಕ್ತಿಯಿಂದ ಗೆಲ್ಲಿಸಿಕೊಟ್ಟಿದ್ದಾರೆ. ಅದರಲ್ಲೂ ಪಂಜಾಬ್ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರ ಒಂದೇ ಓವರ್​ನಲ್ಲಿ 5 ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ತೇವಾಟಿಯ ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಬೌಲಿಂಗ್​ನಲ್ಲೂ ಕಮಾಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

IPL 2020 Prize Money: ಚಾಂಪಿಯನ್ ಮುಂಬೈಗೆ, ರನ್ನರ್ ಅಪ್ ಡೆಲ್ಲಿಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ

ಕಾರ್ತಿಕ್ ತ್ಯಾಗಿ:

ಬ್ರೆಟ್ ಲಿ ಹಾಗೂ ಇಶಾಂತ್ ಶರ್ಮಾ ಮಾದರಿಯಲ್ಲಿ ಚೆಂಡನ್ನು ಉಗುಳುವ ತ್ಯಾಗಿ ಈ ಬಾರಿಯ ಐಪಿಎಲ್​ನಲ್ಲಿ ಪ್ರಮುಖ ಆಕರ್ಷಣೆ ಆಗಿದ್ದಾರೆ. ನಿಖರ ವೇಗದ ಜೊತೆ, ಉತ್ತಮ ಬೌಲಿಂಗ್ ಲೆಂತ್ ಮಾಡುವ ಇವರು ಈಗಾಗಲೇ ಭಾರತ ತಂಡದ ಭವಿಷ್ಯದ ಬೌಲರ್ ಎಂದೇ ಹೇಳಲಾಗುತ್ತಿದೆ.
Published by: Vinay Bhat
First published: November 11, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading