ದುಬೈ (ನ. 10): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದುನಿಂತಿದೆ. ಇಂದು ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುವ ಮೂಲಕ ಐಪಿಎಲ್ 2020ಕ್ಕೆ ತೆರೆಬೀಳಲಿದೆ. 5ನೇ ಬಾರಿ ಟ್ರೋಫಿ ಗೆಲ್ಲುವ ಹಂಬಲದಲ್ಲಿ ಮುಂಬೈ ಇದ್ದರೆ, ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಡೆಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವ ಇರಾದೆ ಹೊಂದಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಮುಂಬೈ ತಂಡ ಶ್ರೇಯಸ್ ಪಡೆಯನ್ನು ಎರಡು ಬಾರಿ ಲೀಗ್ ಹಂತದಲ್ಲಿ ಮತ್ತು ಒಮ್ಮೆ ಪ್ಲೇ ಆಫ್ಸ್ನಲ್ಲಿ ಸೋಲಿಸಿ ಮುನ್ನಡೆ ಸಾಧಿಸಿದ್ದು, ಫೈನಲ್ನಲ್ಲಿ ಹಾಟ್ ಫೇವರಿಟ್ ಆಗಿ ಅಖಾಡಕ್ಕೆ ಇಳಿಯುತ್ತಿದೆ. ಆದರೆ, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ.
Virat Kohli: ವಿರಾಟ್ ಕೊಹ್ಲಿ- ಗಂಭೀರ್ ಜಗಳ; ಐಪಿಎಲ್ನಲ್ಲಿ ನಡೆದ ಬಿಗ್ ಫೈಟ್ ವಿಡಿಯೋ ಇಲ್ಲಿದೆ
ಶಿಖರ್ ಧವನ್ ಫಾರ್ಮ್ಗೆ ಮರಳಿರುವುದು ಒಂದುಕಡೆಯಾದರೆ ಇವರ ಜೊತೆ ಓಪನರ್ ಆಗಿ ಯಶಸ್ಸು ಕಂಡ ಮಾರ್ಕಸ್ ಸ್ಟಾಯಿನಿಸ್ ಮೇಲೆ ಬೆಟ್ಟದಂತಹ ನಿರೀಕ್ಷೆಯಿದೆ. ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್ ಯಾವುದೇ ಸಂದರ್ಭದಲ್ಲಿ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲಾದರು ತಂಡ ಅಪಾಯಕ್ಕೆ ಸಿಲುಕಿದರೆ ಎಚ್ಚರಿಕೆಯ ಆಟ ಪ್ರದರ್ಶಿಸಲು ಅಜಿಂಕ್ಯಾ ರಹಾನೆ ಅವರ ಅನುಭವ ಕೂಡ ನೆರವಾಗಲಿದೆ.
ಕಗಿಸೊ ರಬಾಡ ಮಾರಕ ದಾಳಿಗೆ ಎದುರಾಳಿಗರು ನಡುಗುವುದು ಖಚಿತ. ಆರ್. ಅಶ್ವಿನ್ ಸ್ಪಿನ್ ಮೋಡಿ ಕೂಡ ವರ್ಕ್ ಆಗುತ್ತಿದೆ. 13 ವರ್ಷಗಳ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಇತಿಹಾಸ ಸೃಷ್ಟಿಸುತ್ತ ನೋಡಬೇಕಿದೆ.
ಇತ್ತ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಪ್ರಚಂಡ ಫಾರ್ಮ್ನಲ್ಲಿರುವ ಮುಂಬೈ ಇಂಡಿಯನ್ಸ್ಗೆ ಅನುಭವಿ ಆಟಗಾರರೇ ಆಸ್ತಿ. ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವಲ್ಲಿ ಎಡವುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಆಟಗಾರರ ದಂಡೇ ಇದೆ. ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಪಾಂಡ್ಯ ಬ್ರದರ್ಸ್, ಕೀರೊನ್ ಪೊಲಾರ್ಡ್ ಎಲ್ಲರೂ ಇನ್ ಫಾರ್ಮ್ ಬ್ಯಾಟ್ಸ್ಮನ್ಗಳು.
ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಗಾಯಗೊಂಡಿದ್ದ ಟ್ರೆಂಟ್ ಬೌಲ್ಟ್ ಚೇತರಿಕೆ ಕಂಡಿದ್ದು, ಫೈನಲ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ. ಜಸ್ಪ್ರೀತ್ ಬುಮ್ರಾ ಪರ್ಪರ್ ಕ್ಯಾಪ್ ತೊಡಲು ತುದಿಗಾಲಿನಲ್ಲಿ ನಿಂತಿದ್ದರೆ, ರಾಹುಲ್ ಚಹಾರ್ ತಮ್ಮ ಸ್ಪಿನ್ ಅಸ್ತ್ರ ಪ್ರಯೋಗಿಸಿ ಎದುರಾಳಿಗರನ್ನ ಕಾಡಬಲ್ಲರು.
IPL 2020 Final, MI vs DC: ಇಂದು ಮುಂಬೈ vs ಡೆಲ್ಲಿ ನಡುವೆ ಐಪಿಎಲ್ ಫೈನಲ್ ಪಂದ್ಯ; ಯಾವ ತಂಡ ಸ್ಟ್ರಾಂಗ್?; ಇಲ್ಲಿದೆ ವಿವರ
ಯಾರಿಗೆ ಗೆಲುವು: ಈ ಬಾರಿಯ ಐಪಿಎಲ್ನಲ್ಲಿ ಆಡಿದ ಪರಿ ನೋಡಿದರೆ ಮುಂಬೈ ಇಂಡಿಯನ್ಸ್ 5ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವುದು ಖಚಿತ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 15 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ