52 ದಿನಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಂತು ರಂಜಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿದ್ದಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ರೋಹಿತ್ ಶರ್ಮಾ 6ನೇ ಬಾರಿಗೆ ಪ್ರಶಸ್ತಿ ಗೆದ್ದರು. 2010 ರಲ್ಲಿ ಡೆಕ್ಕನ್ ಚಾರ್ಜರ್ ಪರ ಆಡಿದ್ದ ಹಿಟ್ಮ್ಯಾನ್ ಆಗ ಆ ತಂಡ ಟ್ರೋಫಿ ಗೆದ್ದಿತ್ತು. ಇನ್ನೂ ಬಾರಿಯ ಐಪಿಎಲ್ನಲ್ಲಿ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಜೊತೆಗೆ ಅನೇಕ ದಾಖಲೆಗಳಿಗೂ ಐಪಿಎಲ್ 2020 ಸಾಕ್ಷಿಯಾಯಿತು. ಈ ಪೈಕಿ ಗಮಸಿಸಲೇ ಬೇಕಾದ ಪ್ರಮುಖ ಅಂಶಗಳ ಮಾಹಿತಿ ಇಲ್ಲಿದೆ.
ಕೆ. ಎಲ್ ರಾಹುಲ್:
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ. ಎಲ್ ರಾಹುಲ್ ಈ ಬಾರಿಯ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿದರು. ತಂಡ ಪ್ಲೇ ಆಫ್ ತಲುಪುವಲ್ಲಿ ಎಡವಿತ್ತಾದರೂ ರಾಹುಲ್ ಬ್ಯಾಟಿಂಗ್ ಆರ್ಭಟ ಮಾತ್ರ ಈ ಬಾರಿ ಜೋರಾಗಿತ್ತು. 14 ಪಂದ್ಯಗಳಲ್ಲಿ ರಾಹುಲ್ ಒಟ್ಟು 670 ರನ್ ಬಾರಿಸಿದರು.
ಕಗಿಸೊ ರಬಾಡ:
ದಕ್ಷಿಣ ಆಫ್ರಿಕಾ ತಂಡದ ಘಾತಕವೇಗಿ ಕಗಿಸೊ ರಬಾಡ ಐಪಿಎಲ್ನಲ್ಲಿ ಮತ್ತೊಂದು ದಾಖಲೆ ಬರೆದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಇವರು ಈ ಬಾರಿಯ ಐಪಿಎಲ್ನಲ್ಲಿ ಬರೋಬ್ಬರಿ 30 ವಿಕೆಟ್ ಕಿತ್ತು ಪರ್ಪರ್ ಕ್ಯಾಪ್ ತಮ್ಮದಾಗಿಸಿದರು. ಅಲ್ಲದೆ ಡೆಲ್ಲಿ ಪರ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡರು.
IPL 2020 Prize Money: ಚಾಂಪಿಯನ್ ಮುಂಬೈಗೆ, ರನ್ನರ್ ಅಪ್ ಡೆಲ್ಲಿಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ
ಕೀರೊನ್ ಪೊಲಾರ್ಡ್:
ಮುಂಬೈ ತಂಡದ ಆಲ್ರೌಂಡರ್ ಕೀರೊನ್ ಪೊಲಾರ್ಡ್ ಈ ಬಾರಿಯ ಐಪಿಎಲ್ನ ಗರಿಷ್ಠ ಸ್ಟ್ರೈಕ್ರೇಟ್ (191.42) ಹೊಂದಿದ ಆಟಗಾರ ಎಂದ ಸಾಧನೆ ಮಾಡಿದರು. ರೋಹಿತ್ ಅಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸಿದ್ದ ಪೊಲಾರ್ಡ್ ಟೂರ್ನಿಯಿದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು.
ಜಸ್ಪ್ರೀತ್ ಬುಮ್ರಾ:
ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಬೌಲಿಂಗ್ ಸರಾಸರಿ ಹೊಂದಿದ ಆಟಗಾರ ಜಸ್ಪ್ರೀತ್ ಬುಮ್ರಾ. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಗೆಲ್ಲಲು ಇವರ ಪಾತ್ರಕೂಡ ಮುಖ್ಯವಾದೂದು. ಐಪಿಎಲ್ 2020 ರಲ್ಲಿ ಬುಮ್ರಾ ಬೌಲಿಂಗ್ ಸರಾಸರಿ 14.96. ಜೊತೆಗೆ ಈ ಬಾರಿಯ ಅತಿ ಹೆಚ್ಚು ವಿಕೆಟ್ ಕಿತ್ತ 2ನೇ ಬೌಲರ್ ಆಗಿದ್ದಾರೆ.
ಶಿಖರ್ ಧವನ್:
ಐಪಿಎಲ್ 2020 ರ ಸೀಸನ್ನಲ್ಲಿ ಸತತ ಎರಡು ಶತಕ ಬಾರಿಸಿ ದಾಖಲೆ ಬರೆದ ಡೆಲ್ಲಿ ಓಪನರ್ ಶಿಖರ್ ಧವನ್, 16 ಪಂದ್ಯಗಳಲ್ಲಿ 618 ರನ್ ಗಳಿಸಿದರು. ಅಲ್ಲದೆ ಈ ಬಾರಿ ಬರೋಬ್ಬರಿ 67 ಬೌಂಡರಿ ಬಾರಿಸಿ ಐಪಿಎಲ್ 2020 ರಲ್ಲಿ ಅತಿ ಹೆಚ್ಚು ಫೋರ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಸಾಧನೆ ಮಾಡಿದರು.
ಇಶಾನ್ ಕಿಶನ್:
ಪಾಕೆಟ್ ಡೈನಮೊ ಎಂದೇ ಫೇಮಸ್ ಆಗಿರುವ ಮುಂಬೈಯ ಸ್ಫೋಟಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಈ ಬಾರಿಯ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರ. ಇವರು ಬರೋಬ್ಬರಿ 30 ಸಿಕ್ಸ್ ಬಾರಿಸಿದ್ದಾರೆ.
Hardik Pandya: ಐಪಿಎಲ್ನಲ್ಲಿ ಗೆದ್ದ ಕಪ್ಅನ್ನು ಮಗನಿಗೆ ಗಿಫ್ಟ್ಆಗಿ ನೀಡೋಕೆ ಮುಂದಾದ್ರು ಹಾರ್ದಿಕ್ ಪಾಂಡ್ಯ!
ವರುಣ್ ಚಕ್ರವರ್ತಿ:
ಐಪಿಎಲ್ 2020 ರಲ್ಲಿ ಈ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ. ಕೆಕೆಆರ್ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ತಮ್ಮ ಅಮೋಘ ಪ್ರದರ್ಶನದ ಮೂಲಕ ಭಾರತ ಕ್ರಿಕೆಟ್ ತಂಡಕ್ಕೂ ಆಯ್ಕೆ ಆದರು. ಆದರೆ, ಇಂಜುರಿ ಪರಿಣಾಮ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ವರುಣ್, ಡೆಲ್ಲಿ ವಿರುದ್ಧ 5 ವಿಕೆಟ್ ಕಿತ್ತು ಯಾರೂ ಮಾಡಿರದ ಸಾಧನೆ ಮಾಡದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ