HOME » NEWS » Ipl » IPL AUCTION 2021 FULL LIST OF PLAYERS SOLD ZP

IPL 2021: ಐಪಿಎಲ್​ನಲ್ಲಿ ಹರಾಜಾದ ಆಟಗಾರರ ಪಟ್ಟಿ ಹೀಗಿದೆ..!

ಇನ್ನು ಅತ್ಯಂತ ದುಬಾರಿ ವಿದೇಶಿ ಆಟಗಾರನ ದಾಖಲೆ ಕೂಡ ಮೋರಿಸ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಪ್ಯಾಟ್ ಕಮಿನ್ಸ್ ಅವರ ಹೆಸರಿನಲ್ಲಿತ್ತು. 2020ರಲ್ಲಿ ಕಮಿನ್ಸ್ ಅವರನ್ನು ಕೆಕೆಆರ್ ತಂಡ 15.5 ಕೋಟಿ ರೂ ಖರೀದಿಸಿತ್ತು.

news18-kannada
Updated:February 18, 2021, 9:51 PM IST
IPL 2021: ಐಪಿಎಲ್​ನಲ್ಲಿ ಹರಾಜಾದ ಆಟಗಾರರ ಪಟ್ಟಿ ಹೀಗಿದೆ..!
ipl
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ಹರಾಜು ಪ್ರಕ್ರಿಯೆ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾಗುವ ಮೂಲಕ ದಕ್ಷಿಣ ಆಫ್ರಿಕಾದ ಆಲ್​ರೌಂಡರ್ ಕ್ರಿಸ್ ಮೋರಿಸ್ ಗಮನ ಸೆಳೆದಿದ್ದಾರೆ. ಐಪಿಎಲ್ ಸೀಸನ್ 14 ಗಾಗಿ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೋರಿಸ್ ಅವರನ್ನು 16.25 ಕೋಟಿಗೆ ಖರೀದಿಸಿದೆ. ಇದು ಐಪಿಎಲ್​ನ ಅತ್ಯಂತ ದುಬಾರಿ ಬಿಡ್ಡಿಂಗ್. ಈ ಹಿಂದೆ ಈ ದಾಖಲೆ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿತ್ತು. 2015ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿ ರೂ. ನೀಡಿ ಖರೀದಿಸಿತ್ತು.

ಇನ್ನು ಅತ್ಯಂತ ದುಬಾರಿ ವಿದೇಶಿ ಆಟಗಾರನ ದಾಖಲೆ ಕೂಡ ಮೋರಿಸ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಪ್ಯಾಟ್ ಕಮಿನ್ಸ್ ಅವರ ಹೆಸರಿನಲ್ಲಿತ್ತು. 2020ರಲ್ಲಿ ಕಮಿನ್ಸ್ ಅವರನ್ನು ಕೆಕೆಆರ್ ತಂಡ 15.5 ಕೋಟಿ ರೂ ಖರೀದಿಸಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ಮೊರಿಸ್ ಅವರನ್ನು 16.25 ಕೋಟಿ ರೂ.ಗೆ ಖರೀದಿಸಿ ಹೊಸ ಅಧ್ಯಾಯ ಬರೆದಿದೆ. ಇನ್ನು ಯಾವ ಯಾವ ತಂಡ ಯಾರನ್ನು ಖರೀದಿಸಿದೆ ಎಂದು ನೋಡುವುದಾದರೆ...

ಚೆನ್ನೈ ಸೂಪರ್ ಕಿಂಗ್ಸ್​

ಕೃಷ್ಣಪ್ಪ ಗೌತಮ್ (ಆಲ್-ರೌಂಡರ್), ಮೊಯೀನ್ ಅಲಿ (ಆಲ್-ರೌಂಡರ್), ಚೇತೇಶ್ವರ ಪೂಜಾರ (ಬ್ಯಾಟ್ಸ್‌ಮನ್),  ಕೆ.ಭಗತ್ ವರ್ಮ (ಆಲ್-ರೌಂಡರ್), ಸಿ ಹರಿ ನಿಶಾಂತ್ (ಬ್ಯಾಟ್ಸ್‌ಮನ್), ಎಂ.ಹರಿಸಂಕರ್ ರೆಡ್ಡಿ (ಬೌಲರ್).

ಡೆಲ್ಲಿ ಕ್ಯಾಪಿಟಲ್ಸ್​ 

ಟಾಮ್ ಕರ್ರನ್ (ಆಲ್-ರೌಂಡರ್), ಸ್ಟೀವನ್ ಸ್ಮಿತ್ (ಬ್ಯಾಟ್ಸ್‌ಮನ್), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಉಮೇಶ್ ಯಾದವ್ (ಬೌಲರ್), ರಿಪಾಲ್ ಪಟೇಲ್ (ಆಲ್-ರೌಂಡರ್), ವಿಷ್ಣು ವಿನೋದ್ (ವಿಕೆಟ್ ಕೀಪರ್), ಲುಕ್ಮನ್ ಹುಸೇನ್ ಮೆರಿವಾಲಾ (ಬೌಲರ್), ಎಂ ಸಿದ್ಧಾರ್ಥ್ (ಬೌಲರ್).

ಕೋಲ್ಕತಾ ನೈಟ್ ರೈಡರ್ಸ್ಶಕೀಬ್ ಅಲ್ ಹಸನ್ (ಆಲ್-ರೌಂಡರ್), ಹರ್ಭಜನ್ ಸಿಂಗ್ (ಬೌಲರ್), ಬೆನ್ ಕಟಿಂಗ್ (ಆಲ್-ರೌಂಡರ್), ಕರುಣ್ ನಾಯರ್ (ಬ್ಯಾಟ್ಸ್‌ಮನ್), ಪವನ್ ನೇಗಿ (ಆಲ್-ರೌಂಡರ್), ವೆಂಕಟೇಶ್ ಅಯ್ಯರ್ (ಆಲ್-ರೌಂಡರ್), ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ವೈಭವ್ ಅರೋರಾ (ಬೌಲರ್).

ಮುಂಬೈ ಇಂಡಿಯನ್ಸ್

ನಾಥನ್ ಕೌಲ್ಟರ್-ನೈಲ್ (ಬೌಲರ್), ಆಡಮ್ ಮಿಲ್ನೆ (ಬೌಲರ್), ಪಿಯೂಷ್ ಚಾವ್ಲಾ (ಬೌಲರ್), ಜೇಮ್ಸ್ ನೀಶಮ್ (ಆಲ್-ರೌಂಡರ್), ಯುಧ್ವೀರ್ ಚರಕ್ (ಆಲ್-ರೌಂಡರ್), ಮಾರ್ಕೊ ಜಾನ್ಸೆನ್ (ಆಲ್-ರೌಂಡರ್), ಅರ್ಜುನ್ ತೆಂಡೂಲ್ಕರ್ (ಆಲ್-ರೌಂಡರ್)

 ಪಂಜಾಬ್ ಕಿಂಗ್ಸ್​

ಜೇ ರಿಚರ್ಡ್ಸನ್ (ಬೌಲರ್), ರಿಲೆ ಮೆರೆಡಿತ್ (ಬೌಲರ್), ಶಾರುಖ್ ಖಾನ್ (ಆಲ್-ರೌಂಡರ್), ಮೊಯಿಸಸ್ ಹೆನ್ರಿಕ್ಸ್ (ಆಲ್-ರೌಂಡರ್), ಡೇವಿಡ್ ಮಲನ್ (ಆಲ್-ರೌಂಡರ್), ಫ್ಯಾಬಿಯನ್ ಅಲೆನ್ (ಆಲ್-ರೌಂಡರ್), ಜಲಜ್ ಸಕ್ಸೇನಾ (ಆಲ್-ರೌಂಡರ್), ಸೌರಭ್ ಕುಮಾರ್ (ಆಲ್-ರೌಂಡರ್), ಉತ್ಕರ್ಶ್ ಸಿಂಗ್ (ಆಲ್-ರೌಂಡರ್) .

ರಾಜಸ್ಥಾನ್ ರಾಯಲ್ಸ್

ಕ್ರಿಸ್ಟೋಫರ್ ಮೋರಿಸ್ (ಆಲ್-ರೌಂಡರ್), ಶಿವಂ ದುಬೆ (ಆಲ್-ರೌಂಡರ್), ಚೇತನ್ ಸಕರಿಯಾ (ಬೌಲರ್), ಮುಸ್ತಾಫಿಜುರ್ ರಹಮಾನ್ (ಬೌಲರ್), ಲಿಯಾಮ್ ಲಿವಿಂಗ್ಸ್ಟೋನ್ (ಆಲ್-ರೌಂಡರ್), ಕೆ.ಸಿ.ಕರಿಯಪ್ಪ (ಬೌಲರ್), ಆಕಾಶ್ ಸಿಂಗ್ (ಬೌಲರ್), ಕುಲದೀಪ್ ಯಾದವ್ (ಬೌಲರ್).

 ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕೈಲ್ ಜೇಮಿಸನ್ (ಆಲ್-ರೌಂಡರ್),  ಗ್ಲೆನ್ ಮ್ಯಾಕ್ಸ್ವೆಲ್ (ಆಲ್-ರೌಂಡರ್), ಡಾನ್ ಕ್ರಿಶ್ಚಿಯನ್ (ಆಲ್-ರೌಂಡರ್), ಸಚಿನ್ ಬೇಬಿ (ಬ್ಯಾಟ್ಸ್‌ಮನ್), ರಜತ್ ಪಾಟಿದಾರ್ (ಬ್ಯಾಟ್ಸ್‌ಮನ್), ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್), ಸುಯಾಶ್ ಪ್ರಭುದೇಸಾಯಿ (ಆಲ್-ರೌಂಡರ್ ), ಕೆಎಸ್​ ಭರತ್ (ವಿಕೆಟ್ ಕೀಪರ್).

ಸನ್‌ರೈಸರ್ಸ್ ಹೈದರಾಬಾದ್

ಕೇದರ್ ಜಾಧವ್ (ಆಲ್-ರೌಂಡರ್), ಮುಜೀಬುರ್ ರೆಹಮಾನ್ (ಬೌಲರ್), ಜೆ ಸುಚಿತ್ (ಬೌಲರ್)
Published by: zahir
First published: February 18, 2021, 9:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories