ಐಪಿಎಲ್ನಲ್ಲಿ ಇಂದು 2 ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ ಮಧ್ಯಾಹ್ನ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (PBKS vs KKR) ನಡುವೆ ನಡೆಯಲಿದೆ. ಬಳಿಕ ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (LSG vs DC) ನಡುವೆ 2ನೇ ಪಂದ್ಯ ನಡೆಯಲಿದೆ. ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ದೆಹಲಿ ಕ್ಯಾಪಿಟಲ್ಸ್ (DC) ಮುಖಾಮುಖಿ ಆಗಲಿದೆ. ಲಕ್ನೋ ತಂಡವನ್ನು ಕೆಎಲ್ ರಾಹುಲ್ ಮತ್ತು ಡೆಲ್ಲಿ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.
ಪಂದ್ಯದ ವಿವರ:
ಐಪಿಎಲ್ 16ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಡಲಿದ್ದಾರೆ. ಈ ಪಂದ್ಯವು ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ಆಗಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾದಲ್ಲಿ ಡಿಜಿಟಲ್‌ನಲ್ಲಿ ನೇರ ಪ್ರಸಾರ ಆಗಲಿದೆ.
ಪಿಚ್ ವರದಿ:
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೇಲ್ಮೈ ನಿಧಾನವಾಗಿದೆ ಮತ್ತು ಬ್ಯಾಟರ್‌ಗಳು ವಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಮಧ್ಯದಲ್ಲಿ ಸಮಯ ಬೇಕಾಗುತ್ತದೆ. ಈ ಸ್ಥಳದಲ್ಲಿ ಒಂಬತ್ತು ಟಿ20 ಪಂದ್ಯಗಳನ್ನು ಆಡಲಾಗಿದ್ದು, ಐದು ಪಂದ್ಯಗಳನ್ನು ತಂಡವು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಆದ್ದರಿಂದ, ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.‘
ಇದನ್ನೂ ಓದಿ: PBKS vs KKR, IPl 2023: ಪಂಜಾಬ್-ಕೋಲ್ಕತಾ ಪಂದ್ಯ; ಎಲ್ಲಿ, ಎಷ್ಟು ಗಂಟೆಗೆ ನಡೆಯಲಿದೆ? ಇಲ್ಲಿದೆ ವಿವರ
ಲಕ್ನೋ- ಡೆಲ್ಲಿ ಹೆಡ್ ಟು ಹೆಡ್:
ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿತ್ತು. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡು ಪ್ಲೇ ಆಫ್ ತಲುಪಿತ್ತು. ನಂತರ, ಅವರು ಎಲಿಮಿನೇಟರ್ ಪಂದ್ಯದಲ್ಲಿ RCB ವಿರುದ್ಧ ಸೋತಿತ್ತು. ಐಪಿಎಲ್ನಲ್ಲಿ LSG ಮತ್ತು DC ಕಳೆದ ಋತುವಿನಲ್ಲಿ 2 ಪಂದ್ಯಗಳನ್ನು ಆಡಿದ್ದವು. ಎರಡೂ ಪಂದ್ಯಗಳಲ್ಲಿ ಎಲ್‌ಎಸ್‌ಜಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಹೀಗಾಗಿ ಡಿಸಿ ವಿರುದ್ಧ ಲಕ್ನೋ ತಂಡ ಉತ್ತಮ ದಾಖಲೆ ಹೊಂದಿದೆ. ಆದಾಗ್ಯೂ, ಎರಡೂ ತಂಡಗಳು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಆಡಲಿವೆ.
LSG vs DC ಸಂಭಾವ್ಯ ಪ್ಲೇಯಿಂಗ್ 11:
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ 11: ಕೆಎಲ್ ರಾಹುಲ್ (ಸಿ), ಕೈಲ್ ಮೇಯರ್ಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಾಕ್), ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಜಯದೇವ್ ಉನದ್ಕತ್, ಮಾರ್ಕ್ ವುಡ್, ಅವೇಶ್ ಖಾನ್, ರವಿ ಬಿಷ್ಣೋಯ್.
ದೆಹಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (c), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರುಸ್ಸೌವ್ ಸರ್ಫರಾಜ್ ಖಾನ್ (WK), ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ