ಐಪಿಎಲ್ 2023 (IPL 2023) ರ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GV vs CSK) ತಂಡಗಳು ಮುಖಾಮುಖಿಯಾದವು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ತಂಡವು ರೋಚಕ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಹಾರ್ದಿಕ್ ಪಡೆ ನಿಗದಿತ 19.2 ಓವರ್ ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 182 ರನ್ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು.
ಗಿಲ್ ಭರ್ಜರಿ ಬ್ಯಾಟಿಂಗ್:
ಇನ್ನು, ಚೆನ್ನೈ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ನಿಗದಿತ 19.2 ಓವರ್ ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 182 ರನ್ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು. ವೃದ್ಧಿಮಾನ್ ಸಹಾ 25 ರನ್, ಶುಭ್ಮನ್ ಗಿಲ್ 63 ರನ್, ಸಾಯಿ ಸುದರ್ಶನ್ 22 ರನ್, ಹಾರ್ದಿಕ್ ಪಾಂಡ್ಯ 8 ರನ್, ವಿಜಯ್ ಶಂಕರ್ 27 ರನ್, ರಾಹುಲ್ ತೆವಾಟಿಯಾ 15 ರನ್ ಮತ್ತು ರಷೀಧ್ ಖಾನ್ 10 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
A successful final-over chase at the Narendra Modi Stadium to kick off #TATAIPL 2023 🔥🔥
The @rashidkhan_19-@rahultewatia02 duo at it again as @gujarat_titans secure a win against #CSK💪
Scorecard ▶️ https://t.co/61QLtsnj3J#GTvCSK pic.twitter.com/uKS9xJgIbw
— IndianPremierLeague (@IPL) March 31, 2023
ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರಾಜವರ್ಧನ್ ಹಂಗರ್ಗೇಕರ್ ಉತ್ತಮ ಬೌಲಿಂಗ್ ಮಾಡಿದರು. ಅವರು 4 ಓವರ್ ಬೌಲ್ ಮಾಡಿ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ರವೀಂದ್ರ ಜಡೇಜಾ ಮತ್ತು ತುಷಾರಾ ದೇಶಪಾಂಡೆ ತಲಾ 1 ವಿಕೆಟ್ ಪಡೆದರು.
ಶತಕ ವಂಚಿತರಾದ ಗಾಯಕ್ವಾಡ:
ಇನ್ನು, ರುತುರಾಜ್ ಗಾಯಕ್ವಾಡ ಸ್ವಲ್ಪದರಲ್ಲಿಯೇ ಶತಕ ವಂಚಿತರಾದರು. ಅವರು, 50 ಎಸೆತದಲ್ಲಿ 9 ಸಿಕ್ಸ್ ಮತ್ತು 4 ಫೊರ್ ಮೂಲಕ 92 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಡೆವೊನ್ ಕಾನ್ವೆ 1 ರನ್, ಬೆನ್ ಸ್ಟೋಕ್ಸ್ 7 ರನ್, ಅಂಬಟಿ ರಾಯುಡು 12 ರನ್, ಮೊಯಿನ್ ಅಲಿ 23 ರನ್, ಶಿವಂ ದುಬೆ 19 ರನ್, ರವೀಂದ್ರ ಜಡೇಜಾ 1 ರನ್, ಎಂಎಸ್ ಧೋನಿ ಅಂತಿಮವಾಗಿ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ 7 ಬಾಲ್ಗೆ 14 ರನ್ ಗಳಿಸಿದರು. ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಉತ್ತಮ ಬೌಲಿಂಗ್:
ಟೈಟನ್ಸ್ ಪರ ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಅಲ್ಜಾರಿ ಜೋಸೆಫ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಜೋಶುವಾ ಲಿಟಲ್ ಸಹ 1 ವಿಕೆಟ್ ಪಡೆಯುವ ಮೂಲಕ ಚೆನ್ನೈ ಬ್ಯಾಟ್ಸ್ ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇದರ ನಡುವೆ ಮೊಹಮ್ಮದ್ ಶಮಿ ದೊಡ್ಡ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಶಮಿ ತಮ್ಮ ನಾಲ್ಕನೇ ಐಪಿಎಲ್ ತಂಡದೊಂದಿಗೆ ಆಡುವಾಗ ಐಪಿಎಲ್ ಲೀಗ್‌ನಲ್ಲಿ 100 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ