IPL 2022: RCB ಬಗ್ಗೆ ಕೊನೆಗೂ ಮೌನ ಮುರಿದ ಚಹಾಲ್.. ನನ್ನ ಒಂದು ಮಾತು ಕೇಳ್ಬೇಕಿತ್ತು ಎಂದಿದ್ಯಾಕೆ?
ಮೊದಲ ಪಂದ್ಯವನ್ನು ಆರ್ಸಿಬಿ ಪ್ರತಿ ಬಾರಿಯಂತೆ ದೇವರಿಗೆ ಅರ್ಪಿಸಿದೆ. ಘಟಾನುಘಟಿ ಆಟಗಾರರು ಈಗ ಆರ್ಸಿಬಿ ಪರ ಆಡುತ್ತಿಲ್ಲ. ಅದರಲ್ಲಿ ಯುಜ್ವೇಂದ್ರ ಚಹಾಲ್(Yuzvendra Chahal) ಕೂಡ ಒಬ್ಬರು
ಬೆಂಗಳೂರಿ(Bengaluru)ಗರಿಗೆ ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್ಸಿಬಿ(RCB) ತಂಡ ಕಪ್(Cup) ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಇಂದಲ್ಲ, ನಾಳೆ ಅಥವಾ ಮುಂದೊಂದು ದಿನ ಅವರು ಗೆದ್ದೆ ಗೆಲ್ಲುತ್ತಾರೆ ಅನ್ನುವ ವಿಶ್ವಾಸದಲ್ಲಿ ಇದ್ದೇವೆ. ಆರ್ಸಿಬಿ ಅನ್ನುವುದು ಕೇವಲ ತಂಡವಲ್ಲ. ಬೆಂಗಳೂರಿಗರ ಎಮೋಷನ್(Emotion) ಅದು. ಈ ಬಾರಿ ಹೊಸ ಹುರುಪು, ಹೊಸ ನಾಯಕ(New Captain)ನೊಂದಿಗೆ ಆರ್ಸಿಬಿ ಕಣಕ್ಕಿಳಿಯಲಿದೆ. ಕಳೆದ ಐಪಿಎಲ್ ಸೀಸನ್ಗಳಲ್ಲಿ ಫೈನಲ್(FInal) ಪ್ರವೇಶಸಿದ್ದರೂ ಕಪ್ ಗೆಲ್ಲಲ್ಲು ಆರ್ಸಿಬಿ ಆಟಗಾರರರಿಗೆ ಸಾಧ್ಯವಾಗಿರಲಿಲ್ಲ. ಕಪ್ ಒಂದನ್ನು ಬಿಟ್ಟು ಆರ್ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಮೊದಲ ಪಂದ್ಯವನ್ನು ಆರ್ಸಿಬಿ ಪ್ರತಿ ಬಾರಿಯಂತೆ ದೇವರಿಗೆ ಅರ್ಪಿಸಿದೆ. ಘಟಾನುಘಟಿ ಆಟಗಾರರು ಈಗ ಆರ್ಸಿಬಿ ಪರ ಆಡುತ್ತಿಲ್ಲ. ಅದರಲ್ಲಿ ಯುಜ್ವೇಂದ್ರ ಚಹಾಲ್(Yuzvendra Chahal) ಕೂಡ ಒಬ್ಬರು
ಕೊನೆಗೂ ಮೌನ ಮುರಿದ ಚಹಾಲ್!
ಯುಜ್ವೇಂದ್ರ ಚಹಾಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ವಾಸ್ತವವಾಗಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಸನ್ ರೈಸರ್ಸ್ ವಿರುದ್ಧ ಈ ಸಾಧನೆ ಮಾಡಿದರು. ಯುಜ್ವೇಂದ್ರ ಚಹಾಲ್ 16 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಇದೀಗ ಚಾಹಲ್ ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದಿದ್ದಾರೆ. ಯಾರೂ ಊಹಿಸಿದರ ರೀತಿಯಲ್ಲಿ ಆರ್ಸಿಬಿ ಯುಜ್ವೆಂದ್ರ ಅವರನ್ನು ತಂಡದಿಂದ ಕೈಬಿಡಲಾಗಿತ್ತು.ಇದೀಗ ಯುಜ್ವೇಂದ್ರ ಚಹಾಲ್ ಕೊನೆಗೂ ಮೌನ ಮುರಿದ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಮಾತನಾಡಿದ್ದಾರೆ.
ಒಂದ್ ಮಾತು ನನ್ನ ಕೇಳ್ಬೇಕಿತ್ತು ಎಂದಿದ್ಯಾಕೆ ಚಹಾಲ್!
‘ಆರ್ಸಿಬಿ ನನ್ನನ್ನು ಕೈಬಿಡುವ ಮುನ್ನ ಒಮ್ಮೆ ಕೇಳಬೇಕಿತ್ತು. ಆರ್ಸಿಬಿಯಲ್ಲಿ ಇರಲು ನೀವು ಇಷ್ಟ ಪಡುತ್ತೀರಾ? ಎಂದು ಕೇಳಬೇಕಿತ್ತು. ನಾವು ನಿಮ್ಮನ್ನು ಹರಾಜಿನಲ್ಲಿ ಮತ್ತೆ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ, ಮಾಡಲಿಲ್ಲ. ನನಗೆ ಹಣದ ಮೇಲೆ ಆಸೆ ಇರಲಿಲ್ಲ. ನನಗೆ ಆರ್ಸಿಬಿ ತಾಯಿ ಇದ್ದಂತೆ. ಇಷ್ಟು ವರ್ಷ ಆ ತಂಡದಲ್ಲಿ ಆಡಿದ್ದೆ. ನನ್ನ ಬೆಂಗಳೂರು ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿರುತ್ತೆನೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಏನೇ ಆದರೂ’ ಎಂದು ಯುಜ್ವೇಂದ್ರ ಚಹಾಲ್ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಆರ್ಸಿಬಿ ಅಭಿಮಾನಿಗಳು ಚಹಾಲ್ ಅವರನ್ನು ನೀವು ರಿಟೈನ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವನ್ನು ಕೆಟ್ಟ ದಾಖಲೆಯೊಂದಿಗೆ ಪ್ರಾರಂಭಿಸಿದೆ. ಹೌದು, ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರೆಪಿಸಿದರೂ ಉತ್ತಮ ಬೌಲಿಂಗ್ ಮಾಡದ ಹಿನ್ನಲೆ ಆರ್ಸಿಬಿ ಸೋಲನ್ನಪ್ಪಿತು. ಇದರೊಂದಿಗೆ ಕೆಟ್ಟ ದಾಖಲೆಯನ್ನೂ ದಾಖಲಿಸಿದೆ.
ಒಂದು ಪಂದ್ಯದಲ್ಲಿ ಅತಿ ಹೆಚ್ಚು ವೈಡ್ಗಳನ್ನು ದಾಖಲಿಸಿದ ತಂಡವಾಗಿದ್ದು, ಈ ಪಂದ್ಯದಲ್ಲಿ ಬೆಂಗಳೂರು ತಂಡ 21 ವೈಡ್ಗಳನ್ನು ಹಾಕಿದೆ. RCB ಬೌಲಿಂಗ್ನಲ್ಲಿ ಒಟ್ಟು 22 ಎಕ್ಸ್ಟ್ರಾಗಳನ್ನು ನೀಡಿದ್ದು, ಅದರಲ್ಲಿ 21 ವೈಡ್ಗಳ ರೂಪದಲ್ಲಿ ಬಂದಿವೆ. ಈ ಪ್ರದರ್ಶನದ ಮೂಲಕ ಬೆಂಗಳೂರು ತಂಡವು 19 ವೈಡ್ಗಳ ಹಿಂದಿನ ದಾಖಲೆಯನ್ನು ಮುರಿದಿದೆ. 2011ರ ಐಪಿಎಲ್ ಋತುವಿನಲ್ಲಿ, ನಂತರ ಕಿಂಗ್ಸ್ ಇಲೆವೆನ್ ಪಂಜಾಬ್. ಕೊಚ್ಚಿ ಟಸ್ಕರ್ಸ್ ವಿರುದ್ಧದ ಪಂದ್ಯದಲ್ಲಿ 19 ವೈಡ್ಗಳನ್ನು ಹಾಕಿತ್ತು.
Published by:Vasudeva M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ