15ನೇ ಆವೃತ್ತಿಯ ಐಪಿಎಲ್(IPL) ಟೂರ್ನಿಯ ಮೆಗಾ ಹರಾಜಿನಲ್ಲಿ ಗರಿಷ್ಠ ಮೊತ್ತ 15.25 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್(Mumbai Indians) ಪಾಲಾಗಿದ್ದ ಇಶಾನ್ ಕಿಶನ್(Ishan Kishan), ಮೊದಲ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ(Half Century) ಚಚ್ಚುವ ಮೂಲಕ ತಾವೆಷ್ಟು ಡೇಂಜರಸ್ ಬ್ಯಾಟರ್(Dangerous Batter) ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿರುವ 5 ಬಾರಿಯ ಐಪಿಎಲ್ ಚಾಂಪಿಯನ್(IPL Champion) ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್(Delhi Capitals)ಗೆ ಸವಾಲಿನ ಗುರಿ ನೀಡಿದೆ. ಇದರ ಜೊತೆಗೆ ಈ ಸೀಸನ್ನ ಮೊದಲ ಪಂದ್ಯದಲ್ಲೇ ಇಶಾನ್ ಕಿಶಾನ್ ತಾನೆಂಥ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇಶಾನ್ ಕಿಶನ್ ಆಟ ಕಂಡು ಕ್ರೀಡಾಭಿಮಾನಿಗಳು ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ಗೆ ಕೊಟ್ಟಿರುವ ಕೋಟಿ ಕೋಟಿ ಹಣ ವೇಸ್ಟ್ ಆಗಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲ ಪಂದ್ಯದಲ್ಲೇ ಇಶಾನ್ ಆಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.
ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡಿದ್ದ ಡೆಲ್ಲಿ!
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ 67 ರನ್ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 32 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 41 ರನ್ ಬಾರಿಸಿ ಲೆಗ್ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಅನ್ಮೋಲ್ಪ್ರೀತ್ ಸಿಂಗ್(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.ತಿಲಕ್ ವರ್ಮಾ 22 ರನ್ಗಳಿಸಿ ಔಟ್ ಆದರು.
ಆರಂಭಿಕ ಆಟಗಾರನಾಗಿ ಬಂದು ಕೊನೆವರೆಗೂ ಇದ್ದ ಇಶಾನ್!
ದುಬಾರಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದ ಕೂಡಿಕೊಂಡಿರುವ ಇಶಾನ್ ಕಿಶನ್, ಆರಂಭಿಕನಾಗಿ ಮಾತ್ರವಲ್ಲದೇ ಫಿನಿಶರ್ ಆಗಿಯೂ ಗಮನ ಸೆಳೆದರು. ಕಳೆದ ಆವತ್ತಿಯ ಐಪಿಎಲ್ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ ಅರ್ಧಶತಕ ಚಚ್ಚಿದ್ದ ಇಶಾನ್ ಕಿಶನ್, ಮತ್ತೆ ಈ ಸೀಸನ್ಲ್ಲೂ ಅದೇ ಖದರ್ ತೋತಿಸಿದ್ದಾರೆ. ಇಶಾನ್ ಕಿಶನ್ 34 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಇಶಾನ್ ಕಿಶನ್ 48 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 81 ರನ್ ಬಾರಿಸಿ ಅಜೇಯರಾಗುಳಿದರು.
ಇದನ್ನೂ ಓದಿ: ರಾಯುಡು ಖಾತೆಯಲ್ಲಿ ಕೆಟ್ಟ ದಾಖಲೆ, ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಚೆನ್ನೈಗೆ ಸೋಲು
ಕಾಲಿಗೆ ಏಟು ಮಾಡಿಕೊಂಡ ಇಶಾನ್ ಕಿಶನ್!
ಇನ್ನೂ ಬ್ಯಾಟಿಂಗ್ ಮಾಡುವ ವೇಳೆ ಇಶಾನ್ ಕಿಶನ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಸ್ಟ್ರೋಕ್ ಮಾಡಲು ಹೋದಾಗ ಅವರ ಕಾಲಿಗೆ ಬಾಲ್ ಜೋರಾಗಿ ಬಿದ್ದಿದೆ. ಆದರೂ, ಇಶಾನ್ ಇನ್ನಿಂಗ್ಸ್ ಮುಗಿಯವವರೆಗೂ ಆ ನೋವನ್ನು ಮರೆತಿದ್ದರು. ಇನ್ನಿಂಗ್ಸ್ ಮುಗಿದ ಬಳಿಕ ಇಶಾನ್ ವಿಶ್ರಾಂತಿ ಪಡೆದುಕೊಂಡರು. ಇಶಾನ್ ಕಿಶನ್ ಮೊದಲಿನಿಂದಲೂ ಮುಂಬೈ ಇಂಡಿಯನ್ಸ್ ಪರವಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ಆದರೆ, ಗಾಯಗೊಂಡಿದ್ದರಿಂದ ಇಶಾನ್ ಕಿಶನ್ ರೆಸ್ಟ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದಯವಿಟ್ಟು ಹೆಲ್ಮೆಟ್ ಧರಿಸಿ! KKR ವಿಕೆಟ್ಕೀಪರ್ ಶೆಲ್ಡನ್ ಜಾಕ್ಸನ್ಗೆ ಯುವರಾಜ್ ಸಿಂಗ್ ಮನವಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ 4 ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದರೆ, ಖಲೀಲ್ ಅಹಮ್ಮದ್ 2 ವಿಕೆಟ್ ಕಬಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡವು ದಿಢೀರ್ ಕುಸಿತ ಕಂಡಿದ್ದರಿಂದ, ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರ ಕೊಂಚ ಹಿನ್ನಡೆಯಾಗುವ ಆತಂಕ ಎದುರಿಸಿತು. ಆದರೆ, ಇಶಾನ್ ಕಿಶನ್ ಮುಂಬೈ 177ರನ್ ಬಾರಿಸಲು ಸಹಾಯ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ